ಮುದ್ದೇಬಿಹಾಳ 07: ಗ್ರಾಮೀಣ ಪ್ರದೇಶದಲ್ಲಿ ಪ್ರತಿಯೊಂದು ಮನೆಗೆ ಶೌಚಾಲಯ ಅವಶ್ಯಕವಿದೆ. ಆದರೆ ಕೆಲ ಮನೆಗಳಿಗೆ ಶೌಚಾಲಯ ನಿಮರ್ಿಸಲೂ ಜಾಗವಿಲ್ಲದ ಕಾರಣ ಸಮುದಾಯ ಶೌಚಾಲಯ ಹಾಗೂ ಸ್ನಾನಗೃಹವನ್ನು ಮಂಜೂರು ಮಾಡಲಾಗಿದೆ ಎಂದು ಜಿಪಂ ಅಧ್ಯಕ್ಷೆ ನೀಲಮ್ಮ ಸಿದ್ದಣ್ಣ ಮೇಟಿ ಹೇಳಿದರು.
ತಾಲೂಕಿನ ಅಮರಗೋಳ ಗ್ರಾಮದಲ್ಲಿ ಸೋಮವಾರ ಸಮುದಾಯ ಶೌಆಲಯ ಹಾಗೂ ಸ್ನಾನಗೃಹ ನಿಮರ್ಾಣ ಕಾಮಗಾರಿಗೆ ಗುದ್ದಲಿ ಪೂಜೆಯನ್ನು ನೆರವೇರಿಸಿ ಮಾತನಾಡಿದರ ಅವರು, ಈಗಾಗಲೇ ಸ್ವಚ್ಚ ಭಾರತ ಯೋಜನೆಯಡಿಯಲ್ಲಿ ಹಲವು ಗ್ರಾಮದಲ್ಲಿ ವ್ಯಯಕ್ತಿ ಶೌಚಾಲಯಗಳನ್ನು ನಿಮರ್ಿಸಲಾಗಿದ್ದು ಮಹಿಳೆಯರು ತಮ್ಮ ವ್ಯಯಕ್ತಿಕ ಶೌಚಾಲಯಗಳನ್ನು ಉಪಯೋಗಿಸಬೇಕು. ಇದರಿಂದ ಗ್ರಾಮ ಸ್ವಚ್ಚತೆ ಹಾಗೂ ಆರೋಗ್ಯಕರ ವಾತಾವರಣಕ್ಕೆ ಸಹಕಾರವಾಗುತ್ತದೆ ಎಂದು ಅವರು ಸಲಹೆ ನೀಡಿದರು. ಈ ಸಂದರ್ಭದಲ್ಲಿ ತಂಡಗಿ ಗ್ರಾಮ ಪಂಚಾಯತ ಅಧ್ಯಕ್ಷ ಶಿವಾನಂದ ಮಂಕಣಿ, ಪಿಡಿಓ ಉಮೇಶ ರಾಠೋಡ, ಗೋವಾ ಕನ್ನಡಿಗರ ಸಂಘದ ಅಧ್ಯಕ್ಷ ಸಿದ್ದಣ್ಣ ಮೇಟಿ ಸೇರಿದಂತೆ ಸರ್ವ ಸದಸ್ಯರು ಗ್ರಾಮಸ್ಥರು ಇದ್ದರು.