ಬೈಲಹೊಂಗಲ: ಸಂಗೊಳ್ಳಿ ರಾಯಣ್ಣ ಉತ್ಸವಕ್ಕೆ ಚಾಲನೆ

ಲೋಕದರ್ಶನ ವರದಿ

ಬೈಲಹೊಂಗಲ 11:  ಬೆಳಗಾವಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ತಾಲೂಕಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹುಟ್ಟುರಿನ ಗ್ರಾಮದಲ್ಲಿ ರವಿವಾರ ಪ್ರಾರಂಭಗೊಂಡ ಸಂಗೊಳ್ಳಿ ರಾಯಣ್ಣ ಉತ್ಸವದ 2020ರ ಜಾನಪದ ಕಲಾಮೇಳಕ್ಕೆ ಅದ್ದೂರಿಯಾಗಿ ಚಾಲನೆ ನೀಡಲಾಯಿತು.

   

  ಶಾಸಕ ಮಹಾಂತೇಶ ಕೌಜಲಗಿ, ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ,ತಹಶೀಲ್ದಾರ  ಡಾ.ದೊಡ್ಡಪ್ಪ ಹೂಗಾರ,  ಗ್ರಾ.ಪಂ ಅಧ್ಯಕ್ಷೆ ಯಲ್ಲವ್ವ ಹಳೇಮನಿ, ಉಪಾಧ್ಯಕ್ಷ ಬಸವರಾಜ ಕೊಡ್ಲಿ ಅವರು ನಂದಗಡ ಗ್ರಾಮದಿಂದ ಸಂಗೊಳ್ಳಿ ಗ್ರಾಮಕ್ಕೆ ಆಗಮಿಸಿದ ರಾಯಣ್ಣನ ವೀರ ಜ್ಯೋತಿ, ಸಂಗೊಳ್ಳಿ ರಾಯಣ್ಣ ಯುವ ಜಾಗೃತಿ ರಥ ಯಾತ್ರೆಯನ್ನು ಸ್ವಾಗತಿಸಿದರು.

     ಕಿತ್ತೂರು ಸಂಸ್ಥಾನದ ಧ್ವಜಾರೋಹಣವನ್ನು ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ನೆರವೇರಿಸಿದರು. ಜಾನಪದ ಕಲಾ ವಾಹಿನಿಯನ್ನು ಶಾಸಕ ಮಹಾಂತೇಶ ಕೌಜಲಗಿ ಹಾಗೂ ಅಧಿಕಾರಿ ವರ್ಗ ಉದ್ಘಾಟಿಸಿ ಕಲಾಮೇಳಕ್ಕೆ ಚಾಲನೆ ನೀಡಿದರು.

ಜಾನಪದ ಕಲಾಮೇಳ: ಸಂಗೊಳ್ಳಿ ಉತ್ಸವದಲ್ಲಿ ವಿವಿಧ ಕಲಾವಿದರಿಂದ ನಡೆದ ಕಲಾಮೇಳ ನೋಡುಗರನ್ನು ಜನಾಕಷರ್ಿಸಿತು. ಗ್ರಾಮದಲ್ಲಿ ರಂಗೋಲಿಯ ಚಿತ್ತಾರ, ನಾನಾ ಕಲಾ ತಂಡಗಳ ದೃಶ್ಯ ನಯನ ಮನೋಹರವಾಗಿತ್ತು. ವಿಧವಿಧವಾದ ಉಡುಪು ತೊಟ್ಟಿದ್ದ ಕಲಾವಿದರು ಉತ್ತಮ ಕಲಾಪ್ರದರ್ಶನ ನೀಡಿದರು.

       ಕಲ್ಲೋಳಿಯ ಗಂಗಪ್ಪ ಮೂಡಲಗಿ ವೀರಗಾಸೆ, ಶೀವನಪ್ಪ ಚಂದರಗಿ ತಂಡದ ಡೊಳ್ಳು ಕುಣಿತ, ಬಾಳಪ್ಪ ಭಜಂತ್ರಿ ತಾಸೆ ವಾದನ, ಯಮನವ್ವ ಮಾದರ ಮಹಿಳಾ ಡೊಳ್ಳು ಕುಣಿತ ಮಹಾದೇವ ಗುಂಡೇನಟ್ಟಿ ತಂಡದ ಜಗ್ಗಲಗಿ, ಹುಬ್ಬಳ್ಳಿಯ ಗೊಂಬೆ ಕುಣೀತ, ಸಾಗರದ ಮಹಿಳಾ ಡೊಳ್ಳು ಮೇಳ, ಗೋಕಾಕ ಮಹಾಂತೇಶ ಹೂಗಾರ ತಂಡದ ಸಂಬಳ ವಾದನ, ಸಾರವಾಡದ ಗೊಂಬೆ ಕುಣಿತ, ತುಮಕೂರಿನ ಹುಲಿ ವೇಷ, ಸಂಗೊಳ್ಳಿ ಮರಿಯಮ್ಮ ಕಲಾ ತಂಡದ ಕರಡಿ ಮಜಲು, ಜೋಕಾನಟ್ಟಿಯ ಮಹಿಳಾ ಡೊಳ್ಳು ಕುಣಿತ, ನಾಗನೂರಿನ ಯಮದೂತ ತಂಡ, ಹಂದಿಗುಂದ ಜಾಂಝಮೇಳ, ಶಾಲಾ ವಿದ್ಯಾಥರ್ಿಗಳ ರೂಪಕಗಳು ನೋಡುಗರ ಗಮನ ಸೆಳೆದವು. 

      ಕಲಾಮೇಳದಲ್ಲಿ ಸಾವಿರಾರು ಸುಮಂಗಲೆಯರ ಭವ್ಯ ಕುಂಭಮೇಳದಲ್ಲಿ ಪಾಲ್ಗೊಂಡಿದ್ದು ಕಲಾತಂಡಕ್ಕೆ ಮೆರಗು ನೀಡಿತು.

     ಮುಂಜಾನೆ ಪ್ರಾತಃಕಾಲದಲ್ಲಿ ಸಂಗೊಳ್ಳಿ ಶ್ರೀ ಗುರುಸಿದ್ಧಲಿಂಗೇಶ್ವರ ಸಂಸ್ಥಾನದ  ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ, ಅರ್ಚಕ ಬಸವರಾಜ ಡೊಳ್ಳಿನ  ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿದರು. ವಿವಿಧ ಪುಷ್ಪಗಳಿಂದ ರಾಯಣ್ಣ ಮೂತರ್ಿಯನ್ನು ಅಲಂಕರಿಸಲಾಗಿತ್ತು. ಮೆರವಣಿಗೆಯಲ್ಲಿ ಪಾಲ್ಗೊಂಡವರಿಗೆ ಗ್ರಾಮಸ್ಥರು ರಾಗಿ ಅಂಬಲಿ, ಶರಬತ್ತು ವಿತರಿಸಲಾಯಿತು.

   ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿದರ್ೇಶಕಿ ವಿದ್ಯಾವತಿ ಭಜಂತ್ರಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಶ್ವೇತಾ ಹೊಸಮನಿ, ತಹಸೀಲ್ದಾರ ಡಾ.ಡಿ.ಎಚ್.ಹೂಗಾರ, ತಾಪಂ.ಇಓ ಸಮೀರ ಮುಲ್ಲಾ, ಸಿಡಿಪಿಓ ಮಹಾಂತೇಶ ಭಜಂತ್ರಿ, ಸಮಾಜ ಕಲ್ಯಾಣಾಧಿಕಾರಿ ಮಹೇಶ ಉಣ್ಣಿ, ಸಿಪಿಐ ಮಂಜುನಾಥ ಕುಸಗಲ್,  ಪಿಎಸ್ಐ ಎಂ.ಎಸ್.ಹೂಗಾರ , ಗ್ರೇಡ್-2 ತಹಸೀಲ್ದಾರ ಮಂಜುನಾಥ ಮುನವಳ್ಳಿ,  ತಾಲ್ಲೂಕಾ ವೈದ್ಯಾಧಿಕಾರಿ ಡಾ. ಎಸ್.ಎಸ್.ಸಿದ್ದನ್ನವರ, ಅರಣ್ಯ ಅಧಿಕಾರಿ ಗಾಯಿತ್ರಿ ಲೋಕನ್ನವರ, ಡಾ.ಭಾರತಿ ಹುಡೇದ, ಡಾ.ಸುಷ್ಮಾ ಬಾಳಿಮಟ್ಟಿ, ತಾಪಂ.ಅಧ್ಯಕ್ಷೆ ನೀಲವ್ವ ಫಕೀರನ್ನವರ,  ಗ್ರಾ.ಪಂ ಅಧ್ಯಕ್ಷೆ ಯಲ್ಲವ್ವಾ ಹಳೇಮನಿ, ಉಪಾಧ್ಯಕ್ಷ ಬಸವರಾಜ ಕೊಡ್ಲಿ, ಜಿ.ಪಂ ಸದಸ್ಯ ಅನಿಲ ಮೇಕಲಮರಡಿ, ಕಂದಾಯ ನೀರಿಕ್ಷಕ ಎಂ.ಡಿ.ಹಿರೇಮಠ, ಗ್ರಾಮ ಲೆಕ್ಕಾಧಿಕಾರಿ ಎಸ್.ಬಿ.ಮಠದ, ಅರುಣ ಕೊಟಿಹಾಳ, ಎನ್.ವಾಯ್.ಕುರಿ, ರಮೇಶ ಶೀಗಿಹಳ್ಳಿ, ಪಿ.ಎಮ್.ಕಂಬಾರ, ಲಾಲಸಾಬ ತಡಕೋಡ, ತಾ.ಪಂ ಸದಸ್ಯ ಗೌಸಸಾಬ ಬುಡ್ಡೆಮುಲ್ಲಾ, ಪಿಡಿಒ ಮಮತಾಜ ಛಬ್ಬಿ,  ಬಸವರಾಜ ಕಮತ, ಮಲ್ಲಿಕಾಜರ್ುನ ಕೊಡೊಳ್ಳಿ, ಉಮೇಶ ಲಾಳ, ಅರುಣ ಯಲಿಗಾರ,  ಗ್ರಾ. ಪಂ ಸದಸ್ಯರು, ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಸಂಘ, ಸಂಸ್ಥೆಗಳ ಪದಾಧಿಕಾರಿಗಳು,  ಮಹಿಳಾ ಸ್ತ್ರೀ ಶಕ್ತಿ ಸಂಘಗಳು, ವಿದ್ಯಾಥರ್ಿಗಳು, ಸಂಗೊಳ್ಳಿ ಗ್ರಾಮದ ವಿವಿಧ ಕನ್ನಡಪರ ಸಂಘಟನೆಗಳು, ಆರೋಗ್ಯ ಇಲಾಖೆ, ಅಗ್ನಿ ಶಾಮಕದಳ, ಕಂದಾಯ, ಪೊಲೀಸ್, ಶಿಕ್ಷಣ, ತಾ.ಪಂ, ಗ್ರಾ.ಪಂ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬಂದಿ ಉಪಸ್ಥಿತರಿದ್ದರು.

ಗೈರು!! ಗೈರು!!: ಸಂಗೊಳ್ಳಿ ಉತ್ಸವದಲ್ಲಿ ಧ್ವಜಾರೋಹಣ ಮಾಡಬೇಕಾಗಿದ್ದ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ, ಜಾನಪದ ಕಲಾಮೇಳ ಉದ್ಘಾಟಿಸಬೇಕಾಗಿದ್ದ ರೇಲ್ವೇ ರಾಜ್ಯ ಸಚಿವ ಸುರೇಶ ಅಂಗಡಿ ಗೈರು ಎದ್ದು ಕಾಣುತಿತ್ತು.