ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಹಸಿರು ಕನರ್ಾಟಕ ಕಾರ್ಯಕ್ರಮಕ್ಕೆ ಚಾಲನೆ


ಲೋಕದರ್ಶನ ವರದಿ

ಬಳ್ಳಾರಿ16: ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವದ್ಯಾಲಯವು 72ನೇ ಸ್ವಾತಂತ್ರ್ಯ ದಿನಾಚರಣೆಯನ್ನು ದ್ವಜಾರೋಹಣ ಮಾಡುವ ಮೂಲಕ ಬಹಳ ವಿಜ್ರಂಭಣೆಯಿಂದ ಆಚರಿಸಿತು. ಹಾಗು 'ಹಸಿರು ಕನರ್ಾಟಕ' ಕಾರ್ಯಕ್ರಮಕ್ಕೆ ಕುಲಪತಿಗಳು ಸಸಿ ನೆಡುವ ಮೂಲಕ ಚಾಲನೆ ನೀಡಿದರು. 

ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಪ್ರಭಾರ ಕುಲಸಚಿವ ಪ್ರೊ||ಕೆ.ವಿ.ಪ್ರಸಾದ್ ರವರು ಮಾತನಾಡಿ ಭಾರತದ ಸ್ವಾತಂತ್ರ್ಯ ಇನ್ನಷ್ಟು ಪ್ರಖರವಾಗಿ ಬೆಳಗಬೇಕು ಎಂದರು. ಇನ್ನೂರ್ವ ಮುಖ್ಯ ಅತಿಥಿಗಳಾದ ಪ್ರೊ||ಹೊನ್ನುಸಿದ್ದಾರ್ಥ ಕುಲಸಚಿವರು ಪರಿಕ್ಷಾಂಗ ವಿಭಾಗ ಮಾತನಾಡಿ ಸಂವಿದಾನವನ್ನು ಉಳಿಸಿ ಜಾತಿ ಮತ್ತು ಮತ ಬೇದದ ಭಾವನೆಯನ್ನು ಕಡಿಮೆ ಮಾಡುವ ಸ್ವಾತಂತ್ರ್ಯ ನಮಗೆ ಬೇಕು ಎಂದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಾನ್ಯ ಕುಲಪತಿಗಳಾದ ಪ್ರೊ.ಎಂ.ಎಸ್.ಸುಭಾಷ್ ಮಾತನಾಡಿ ಭಾರತದ ಆಥರ್ಿಕ ಪರಿಸ್ಥಿತಿ ಬಹಳ ಗಂಭೀರವಾಗಿದ್ದು, ಡಾಲರ್ ವಿರುದ್ದ ರೂಪಾಯಿ ಮೌಲ್ಯ 70 ರೂಪಾಯಿಗಳಿಗೆ ಕುಸಿದಿದ್ದು ಆಗಾತಕಾರಿ ಬೆಳವಣಿಗೆ ಎಂದರು. 

ಮುಂದುವರೆದು ಪರಿಶಿಷ್ಟ ಜಾತಿ,ಪರಿಶಿಷ್ಟ ವರ್ಗ,ಒ.ಬಿ.ಸಿ. ವಿದ್ಯಾಥರ್ಿಗಳು ಒಂದಿಷ್ಟು ಬಿಡಿಗಾಸಿಗಾಗಿ ತಮ್ಮನ್ನು ರಾಜಕೀಯಕ್ಕೆ ಮಾರಿಕೊಳ್ಳುತ್ತಿರುವುದು ದುರಾದೃಷ್ಟಕರ ಇವತ್ತು ಐ.ಎ.ಎಸ್ ಅಧಿಕಾರಿಗಳು ಮತ್ತು ಮಠಗಳು ರಾಜಕೀಯ ಜಾಲದೊಳಗೆ ಸಿಲುಕಿರುವುದು ಅಪಾಯದ ಸಂಕೇತ. ನಮ್ಮ ವಿಶ್ವವಿದ್ಯಾಲಯಗಳು ಮುಂದಿನ ದಿನಗಳಲ್ಲಿ ಖಾಸಗಿ ವಿಶ್ವವಿದ್ಯಾಯಗಳಿಗೆ ಸ್ಪಧರ್ಿಸುವಲ್ಲಿ ಹಿಂದೆ ಬೀಳಬಹುದು ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮವನ್ನು ಪ್ರೊ.ಎನ್.ಶಾಂತನಾಯ್ಕ್ ರವರು ನಡೆಸಿಕೊಟ್ಟರು ಹಾಗೂ ಕುಮಾರಿ ಮಾನಸ ತಂಡದವರು ದೇಶಭಕ್ತಿ ಗೀತೆಯನ್ನು ಹಾಡಿದರು ಮತ್ತು ಪ್ರೊ.ರಮೇಶ್ ಓಲೆಕಾರ ಡಾ.ಕವಿತಾ ಸಂಗನಗೌಡ ಹಾಗು ವಿಶ್ವವಿದ್ಯಾಲಯದ ಪ್ರಾದ್ಯಾಪಕರುಗಳು ಭೋಧಕ ಭೋದಕೇತರ ಸಿಬ್ಬಂಧಿಗಳು ಮತ್ತು ವಿದ್ಯಾಥರ್ಿ ವಿದ್ಯಾಥರ್ಿನಿಯರು ಹಾಜರಿದ್ದರು.