ಯರಗಟ್ಟಿ 24: ಕೆ.ಎಸ್.ಆರ್.ಟಿ.ಸಿ ಬಸ್ ಡಿಪೋ ಹಾಗೂ ಬಸ್ ನಿಲ್ದಾಣದ ಮೂಲಭೂತ ಸೌಕರ್ಯಗಳನ್ನು ಶೀಘ್ರದಲ್ಲೇ ಒದಗಿಸಲಾಗುವುದು. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಸೋಮವಾರ ಯರಗಟ್ಟಿ ಪಟ್ಟಣಕ್ಕೆ ಭೇಟಿ ಮಾಡಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವ ಬಸ್ ನಿಲ್ದಾಣಕ್ಕೆ ಮೂಲಭೂತ ಸೌಕರ್ಯಗಳನ್ನು ಶೀಘ್ರದಲ್ಲೇ ಒದಗಿಸಲು ಅಧಿಕಾರಿಗಳಿಗೆ ಸೂಚಿಸಲಾಗುವುದೆಂದು ಭರವಸೆ ನೀಡಿದರು.
ನೂತನ ಯರಗಟ್ಟಿ ತಾಲೂಕಿಗೆ ಬಸ್ ಡಿಪೋ ಹಾಗೂ ಇನ್ನಿತರ ಕಛೇರಿಗಳು ಪ್ರಾರಂಭಸಲು ಮುಖ್ಯ ಮಂತ್ರಿಗಳೂಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಈ ವೇಳೆ ರಾಜೇಂದ್ರಗೌಡ ಪಾಟೀಲ, ವಿಶಾಲಗೌಡ ಪಾಟೀಲ, ರಾಮೇಶಗೌಡ ಪಾಟೀಲ, ಎಚ್. ಕೆ. ಮಿಕಲಿ, ಸಿದ್ದು ದೇವರಡ್ಡಿ, ರಾಘವೇಂದ್ರ ದೇವರಡ್ಡಿ, ವೆಂಕಟೇಶ ದೇವರಡ್ಡಿ, ಮುತ್ತು ದೇವರಡ್ಡಿ ಸೇರಿದಂತೆ ಅನೇಕ ಇದ್ದರು.