ಕಾಗವಾಡ ಪಿಕೆಪಿಎಸ್ ಅಧ್ಯಕ್ಷರಾಗಿ ಸ್ವಪ್ನಿಲ್ ಪಾಟೀಲ್, ಉಪಾಧ್ಯಕ್ಷರಾಗಿ ಪದ್ಮಾಕರ ಕರವ ಅವಿರೋಧ ಆಯ್ಕೆ
ಕಾಗವಾಡ 25: ಮೊನ್ನೆ ನಡೆದ ಕಾಗವಾಡ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಯಲ್ಲಿ ರೈತ ಹಿತರಕ್ಷಣಾ ಪೆನಲ್ ಗೆಲುವು ಸಾಧಿಸಿದ್ದರು.ಸೋಮವಾರದಂದು ನಡೆದ ಅಧ್ಯಕ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಇಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾಯಿತು.ಕಾಗವಾಡ ಪಿಕೆಪಿಎಸ್ ನೂತನ ಅಧ್ಯಕ್ಷರಾಗಿ ಸ್ವಪ್ನಿಲ್ (ಕಾಕಾ)ಪಾಟೀಲ ಹಾಗೂ ಉಪಾಧ್ಯಕ್ಷರಾಗಿ ಪದ್ಮಾಕರ ಕರವ ಅವರನ್ನು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆ ಮಾಡಲಾಯಿತೆಂದು ಚುನಾವಣಾಧಿಕಾರಿ ಆರ್ ಎನ್ ನೂಲಿ ಘೋಷಿಸಿದರು.ಈ ವೇಳೆ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿ ಸ್ವಪ್ನಿಲ್ ಪಾಟೀಲ್, ನಮ್ಮನ್ನು ಅವಿರೋಧವಾಗಿ ಆಯ್ಕೆ ಮಾಡಿದ ಎಲ್ಲ ಸದಸ್ಯರಿಗೆ ಧನ್ಯವಾದಗಳು
.ನಿಮ್ಮ ಹಾಗೂ ರೈತರ ಆಶೀರ್ವಾದದಿಂದ ಅವಿರೋಧವಾಗಿ ಆಯ್ಕೆಯಾಗಿದ್ದು ನಮಗೆ ಹೆಮ್ಮೆಯ ಸಂಗತಿ.ರೈತರ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುವದಾಗಿ ಹೇಳಿದರು.ನಂತರ ಉಪಾಧ್ಯಕ್ಷ ಪದ್ಮಾಕರ ಕರವ ಮಾತನಾಡಿ,ರೈತರ ಹಿತಾಸಕ್ತಿಗಾಗಿ ಐದು ವರ್ಷಗಳ ಕಾಲ ಶ್ರಮಿಸುತ್ತೇವೆ, ಈಗಾಗಲೇ ಪತ್ತು ಮಂಜೂರಾಗಿದ್ದು ಬಿಡುಗಡೆಗೊಳಿಸುತ್ತಿದ್ದೇವೆ.ಇನ್ನೂ ಯಾರಿಗೆ ಬಂದಿಲ್ಲ ಅವರು ತಮ್ಮ ಹೆಸರು ನೊಂದಾಯಿಸಿಕೊಂಡು ಇದರ ಸದುಪಯೋಗಪಡಿಸಿಕೊಳ್ಳಬೇಕೆಂದರು.ಈ ವೇಳೆ ಮುಖಂಡರಾದ ಜ್ಯೋತಿಕುಮಾರ ಪಾಟೀಲ್,ಸೌರಭ ಪಾಟೀಲ್, ಅಣ್ಣಾಸಾಬ ಕಠಾರೆ,ಶಾಂತಿನಾಥ ಕರವ,ಸುಧೀರ ಕರವ,ಕಿರಣ ಕುಮಟೆ,ಬಾಳಗೌಡಾ ಪಾಟೀಲ್, ಪ್ರಕಾಶ ಪಾಟೀಲ್ ಸೇರಿದಂತೆ ಸರ್ವ ಸದಸ್ಯರು ಆಡಳಿತ ಸಿಬ್ಬಂದಿ ವರ್ಗ ಇದ್ದರು