ಹಾವೇರಿ:ಎ. 04: ಹಾವೇರಿ ಜಿಲ್ಲೆಯ ನಗರ ಪ್ರದೇಶದ ಕೊಳಗೇರಿಗಳಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ, ನಿರಾಶ್ರಿತರಿಗೆ ಇಂದು ಸಕರ್ಾರದ ವತಿಯಿಂದ ಉಚಿತ ಹಾಲು ವಿತರಣೆಗೆ ಚಾಲನೆ ನೀಡಲಾಯಿತು.
ಹಿರೇಕೆರೂರು ಪುಟ್ಟಣದಲ್ಲಿ ಕೃಷಿ ಸಚಿವರಾದ ಬಿ.ಸಿ.ಪಾಟೀಲ, ಹಾವೇರಿ ನಗರದಲ್ಲಿ ಶಾಸಕರಾದ ನೆಹರು ಓಲೇಕಾರ ಹಾಗೂ ಬ್ಯಾಡಗಿ ಪಟ್ಟಣದಲ್ಲಿ ಶಾಸಕರಾದ ವಿರುಪಾಕ್ಷಪ್ಪ ಬಳ್ಳಾರಿ ಅವರು ಹಾಲು ವಿತರಣೆಗೆ ಚಾಲನೆ ನೀಡಿದರು.
ಹಿರೇಕೆರೂರು ಪಟ್ಟಣದಲ್ಲಿ ಹಾಲು ವಿತರಣೆಗೆ ಚಾಲನೆ ನೀಡಿದ ಕೃಷಿ ಸಚಿವರಾದ ಬಿ.ಸಿ.ಪಾಟೀಲ ಅವರು ಮಾತನಾಡಿ, ಇಂದಿನಿಂದ ಮುಖ್ಯಮಂತ್ರಿಗಳಾದ ಬಿ.ಸಿ.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಸಕರ್ಾರ ಬಡ ಜನರಿಗೆ ಲಾಕ್ಡೌನ್ನಿಂದಾಗಿ ಯಾವುದೇ ತೊಂದರೆಯಾಗಬಾರದೆಂಬ ಉದ್ದೇಶದಿಂದ, ಜನತೆಯ ಆರೋಗ್ಯ ದೃಷ್ಟಿಯಿಂದ ಉಚಿತ ಹಾಲವನ್ನು ವಿತರಿಸುತ್ತಿದೆ.
ಧಾರವಾಡ ಜಿಲ್ಲಾ ಹಾಲು ಒಕ್ಕೂಟದಲ್ಲಿ ಹೆಚ್ಚುವರಿ 19 ಸಾವಿರ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಈ ಹಾಲನ್ನು ಆಯಾ ಹಾಲು ಒಕ್ಕೂಟದ ವ್ಯಾಪ್ತಿಯಲ್ಲಿರುವ ನಿರಾಶ್ರಿತರು, ಕೊಳಚೆ ಪ್ರದೇಶದವರಿಗೆ ಹಾಗೂ ಕೂಲಿ ಕಾಮರ್ಿಕರಿಗೆ ಪ್ರತಿ ದಿನ ಒಂದು ಲೀಟರ್ ಹಾಲು ಉಚಿತವಾಗಿ ಎಪ್ರಿಲ್ 14ರವರೆಗೆ ವಿತರಿಸಿ ಪೌಷ್ಠಿಕ ಆಹಾರ ನೀಡಲಾಗುತ್ತದೆ. ಆ ಮೂಲಕ ಬಡವರಲ್ಲಿ ಪೌಷ್ಠಿಕತೆಯನ್ನು ಹೆಚ್ಚಳಮಾಡಿ ಆಹಾರ ಭದ್ರತೆ ಒದಗಿಸಲಾಗುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ
ರಾಜ್ಯ ಉಗ್ರಾಣ ನಿಗಮದ ಆಧ್ಯಕ್ಷ ಯು.ಬಿ.ಬಣಕಾರ ಅವರು ಸೇರಿದಂತೆ ಪಟ್ಟಣ ಪಂಚಾಯತಿಯ ಸದಸ್ಯರು ಉಪಸ್ಥಿತರಿದ್ದರು.
ಹಾವೇರಿ ನಗರದ ಅಗ್ನಿಶಾಮಕ ಕಚೇರಿಯ ಹಿಂಭಾಗದಲ್ಲಿ ವಾಸಮಾಡುತ್ತಿರುವ ಅಲೆಮಾರಿ ಕುಟುಂಬಗಳಿಗೆ ಹಾಗೂ ತರಳಬಾಳು ಬಡಾವಣೆಗಳಲ್ಲಿ ವಾಸಮಾಡುವ ವಲಸೆಕಾಮರ್ಿಕರಿಗೆ ಶಾಸಕರಾದ ನೆಹರು ಓಲೇಕಾರ ಅವರು ಉಚಿತ ಹಾಲು ವಿತರಿಸಿದರು.
ಈ ಸಂದರ್ಭದಲ್ಲಿ ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷರಾದ ಬಸವರಾಜ ಅರಬಗೊಂಡ, ನಗರಸಭೆ ಸದಸ್ಯರಾದ ಗಿರೀಶ ತುಪ್ಪದ, ಬಾಬು ಮೋಮಿನಗಾರ, ಜಗದೀಶ ಮಲಗೋಡ, ತಹಶೀಲ್ದಾರ ಶಂಕರ, ಪೌರಾಯುಕ್ತ ಬಸವರಾಜ ಜಿದ್ದಿ, ಪಶು ಸಂಗೋಪನಾ ಇಲಾಖೆ ಸಹಾಯಕ ನಿದರ್ೆಶಕ ಪರಮೇಶ್ವರ ಹುಬ್ಬಳ್ಳಿ ಉಪಸ್ಥಿತರಿದ್ದರು.
ಬ್ಯಾಡಗಿ ನಗರದ ಕೊಳಗೇರಿ ವಾಸಿಗಳಿಗೆ, ವಲಸೆ ಕಾಮರ್ಿಕರಿಗೆ ಶಾಸಕರಾದ ವಿರುಪಾಕ್ಷಪ್ಪ ಬಳ್ಳಾರಿ ಅವರು, ಸ್ಥಳೀಯ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳೊಂದಿಗೆ ಉಚಿತ ಹಾಲು ವಿತರಿಸಿದರು.
ರಾಣೇಬೆನ್ನೂರು, ಬಂಕಾಪುರ, ಶಿಗ್ಗಾಂವ, ಸವಣೂರು ಹಾಗೂ ಹಾನಗಲ್ ಪಟ್ಟಣಗಳಲ್ಲಿ ಉಚಿತ ಹಾಲು ವಿತರಣೆ ನಗರ ಸ್ಥಳೀಯ ಸಂಸ್ಥೆಗಳ ವತಿಯಿಂದ ವಿತರಿಸಲಾಯಿತು.
ಐದು ಸಾವಿರ ಲೀಟರ್: ಎಪ್ರಿಲ್ 14ರವರೆಗೆ ಉಚಿತವಾಗಿ ಹಾಲು ವಿತರಣೆ ನಡೆಯಲಿದ್ದು, ಹಾವೇರಿ ಜಿಲ್ಲೆಯಲ್ಲಿ ನಿರಾಶ್ರಿತರು ಹಾಗೂ ಸ್ಲಂ ಕುಟುಂಬಗಳ ಜನ ಸೇರಿದಂತೆ 21,190 ಜನರನ್ನು ಗುರುತಿಸಲಾಗಿದೆ. ಮೊದಲ ಹಂತದಲ್ಲಿ ನಗರಗಳಲ್ಲಿ ವಿತರಿಸಲಾಗುತ್ತಿದ್ದು, ಹಂತ ಹಂತವಾಗಿ ಜಿಲ್ಲೆಯ ಪಟ್ಟಣಗಳಿಗೂ ವಿತರಣೆ ಮಾಡುವಂತೆ ಸೂಚಿಸಲಾಗಿದೆ.