ಹೊಂಬಳನಾಕಾ ಜನತಾ ಕಾಲೋನಿಗೆ 20 ದಿನದಿಂದ ಕುಡಿಯುವ ನೀರಿನ ಸಮಸ್ಯೆ: ಕೃಷ್ಣಾ ಹಡಪದ ಆಕ್ರೋಶ

ಗದಗ 21: ವಾರ್ಡ ನಂ 16 ರ ಹೊಂಬಳನಾಕಾ ಜನತಾ ಕಾಲೋನಿಗೆ ಕಳೆದ 20 ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿದೆ. ನಗರಸಭೆ ಅಧಿಕಾರಿಗಳು  ಸಮಸ್ಯೆಗೆ ಪರಿಹಾರ ಒದಗಿಸುತ್ತಿಲ್ಲ ಹಾಗೂ ನಮ್ಮ ಹೊಂಬಳನಾಕಾ ಜನತಾ ಕಾಲೋನಿಯು ನಗರಸಭೆಗೆ ಸಂಬಂದವೇ ಇಲ್ಲ ಅನ್ನೂವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ ಎಂದು ಹೊಂಬಳನಾಕಾ ಜನತಾ ಕಾಲೋನಿ ಅಭಿವೃದ್ಧಿ ಪರ ಸೇವಾ ಸಂಘದ ಅಧ್ಯಕ್ಷ ಕೃಷ್ಣಾ ಎಚ್ ಹಡಪದ ಅವರು ಆರೋಪಿಸಿ ಅಧಿಕಾರಿಗಳ ಬೇಜವಾಬ್ದಾರಿ ಧೋರಣೆ ಖಂಡಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.  

ಈ ಕುರಿತು ಪತ್ರಿಕಾ ಹೆಳಿಕೆ ನೀಡಿರುವ ಅವರು ಹೊಂಬಳನಾಕಾ ಜನತಾ ಕಾಲೋನಿಯು ಸ್ಲಂ ಪ್ರದೇಶವಾಗಿದ್ದು 40 ವರ್ಷ ಕಳೆದರು ಯಾವದೇ ರೀತಿಯ ಅಭಿವೃದ್ಧಿ ಕಾಮಗಾರಿಯ ಭಾಗ್ಯ ಕಾಣದೆ ಪ್ರಾಣಿಗಳು ವಾಸ ಮಾಡುತ್ತಿರುವ ಕಾಡಿನಂತಾಗಿ ವರಿವರ್ಥನೆಯಾಗಿದೆ ಈಂತಹ ಕೇಟ್ಟ ಪರಿಸ್ತಿತಿಯಲ್ಲಿರುವ ಈ ಬಾಗದ ಜನರು ಅತ್ಯಂತ ಕಡಬಡುವರಾಗಿದ್ದು 200.ರೂ 300.ರೂಪಾಯಿಗಳಿಗೆ ದಿನಪೂರ್ತಿ ದುಡಿಯುವಂತಹ ಓಣಿಯ ಸಾವಿರಾರು ಬಡ ಕೂಲಿ ಕಾರ್ಮಿಕರೇ ಹೆಚ್ಚಿರುವ ವಾರ್ಡ ನಂ 16 ರ ಹೊಂಬಳನಾಕಾ ಜನತಾ ಕಾಲೋನಿಯಲ್ಲಿ ಕುಡಿಯುವ ನೀರಿಗೆ ಬರ ಬಂದಿದೆ. ಎಂದು ಕೃಷ್ಣಾ ಎಚ್ ಹಡಪದ ಬೇಸರ ಹಾಗೂ ನೊವಿನಿಂದ ಹೆಳಿದ ಅವರು ಶಾಲೆಗೆ ರಜಾ ಹಾಕಿ ಮಕ್ಕಳು. ಕೂಲಿ ಕೆಲಸ ಬಿಟ್ಟು ಮಹಿಳೆಯರು ಪುರುಷರುಬೆಳಗ್ಗೆ ಎದ್ದು ಜಲಮೂಲ ಹುಡುಕಿಕೊಂಡು ಹೋಗಬೇಕಾದ ದುಸ್ಥಿತಿ ನಮ್ಮ ಓಣಿಯಲ್ಲಿ ಎದುರಾಗಿದೆ ಎಂದರು.  

ಕೂಡಲೇ ಗದಗ ವಾರ್ಡ ನಂ 16 ರ ಹೊಂಬಳನಾಕಾ ಜನತಾ ಕಾಲೋನಿಯಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ನಗರಸಭೆ ಅಧೀಕಾರಿಗಳು ಪರಿಹಾರ ಒದಗಿಸದಿದ್ದರೇ ಜಿಲ್ಲಾಧಿಕಾರಿಗಳಿಗೆ ಸಂಘದಿಂದ ದೂರು ನೀಡಲಾಗುವುದು ಎಂದು ಹೊಂಬಳನಾಕಾ ಜನತಾ ಕಾಲೋನಿ ಅಭಿವೃದ್ಧಿ ಪರ ಸೇವಾ ಸಂಘದ ಅಧ್ಯಕ್ಷರಾದ ಕೃಷ್ಣಾ ಎಚ್ ಹಡಪದ ಹಾಗೂ ಪದಾಧಿಕಾರಿಗಳು ಎಚ್ಚರಿಸಿದ್ದಾರೆ.