ಸಂಕೇಶ್ವರ : ಅಂಕಲಿಯ ಡಾ. ಪ್ರಭಾಕರ ಕೋರೆ ಕ್ರೆಡಿಟ್ ಸೌಹಾರ್ದ ಸಹಕಾರಿಯ 35 ಸ್ಥಳೀಯ ಶಾಖಾ ಉದ್ಘಾಟನೆಯು ಶನಿವಾರ ದಿ. 21ರಂದು ಸಂಜೆ 4.30 ಗಂಟೆಗೆ ಹುಕ್ಕೇರಿ ರಸ್ತೆಯ ಬಳಿ ನಡೆಯಲಿದೆ ಎಂದು ಪ್ರಧಾನ ವ್ಯವಸ್ಥಾಪಕ ಡಿ.ಎಸ್ ಕರೋಶಿ ಇಂದಿಲ್ಲಿ ಹೇಳಿದರು.
ನಗರದ ಸೌಹಾರ್ದ ನೂತನ ಕಟ್ಟಡದಲ್ಲಿ ಶುಕ್ರವಾರ ದಿನದಂದು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂಕಲಿಯ ಡಾ. ಪ್ರಭಾಕರ ಕೋರೆ ಕ್ರೆಡಿಟ್ ಸೌಹಾರ್ದ ಶಾಖೆ ಉದ್ಘಾಟನೆಯ ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ನಿಡಸೋಸಿಯ ಶಿವಲಿಂಗೇಶ್ವರ ಸ್ವಾಮೀಜಿಯವರು ವಹಿಸಿಕೊಳ್ಳುವರು. ಉದ್ಘಾಟಕರಾಗಿ ಹುಕ್ಕೇರಿ ಶಾಸಕ ಉಮೇಶ ಕತ್ತಿ ಆಗಮಿಸಲಿದ್ದು, ರಾಜ್ಯಸಭೆ ಸದಸ್ಯ ಡಾ. ಪ್ರಭಾಕರ ಕೋರೆ ಹಾಗೂ ಹಿರಾಶುಗರ ಚೇರಮನ್ ಅಪ್ಪಾಸಾಹೇಬ ಶಿರಕೋಳಿ, ಸಂಘದ ಅಧ್ಯಕ್ಷ ಮಹಾಂತೇಶ ಪಾಟೀಲ ಉಪಸ್ಥಿತರಿರುವರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಖಾ ಅಧ್ಯಕ್ಷ ಅಮೃತರಾಜ ನೇಸರಿ ಹಾಗೂ ಸಂಚಾಲಕ ಮಂಡಳಿ ಸದಸ್ಯರು ಹಾಜರುವರು, ಈ ಭಾಗದ ಸಂಘ-ಸಂಸ್ಥೆಗಳ ಸಹಕಾರಿಗಳು ಉಪಸ್ಥಿತರಿರುತ್ತಾರೆ ಎಂದು ತಿಳಿಸಿದ್ದಾರೆ.