ಲೋಕದರ್ಶನ ವರದಿ
ತಾಳಿಕೋಟೆ,6: ಶಿಕ್ಷಣವೆಂಬುದು ಮನುಷ್ಯನ ಜೀವನ ರೂಪಿಸುವದರ ಜೊತೆಗೆ ಸಮಾಜದಲ್ಲಿ ಸಮಾನತೆಯನ್ನು ತರಲು ಬಹು ಮುಖ್ಯವಾದ ಪಾತ್ರ ವಹಿಸುತ್ತದೆ ಆದ್ದರಿಂದ ಮಕ್ಕಳಿಗೆ ಮೊದಲು ಶಿಕ್ಷಣವಂತರನ್ನಾಗಿ ಮಾಡಿ ಉನ್ನತ ಸ್ಥಾನದ ಘಟ್ಟಕ್ಕೆ ಮುಟ್ಟಿಸಬೇಕೆಂದು ಕನರ್ಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ದೇವೇಂದ್ರ ಹಾದಿಮನಿ ಅವರು ನುಡಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ವಿವಿಧ ದಲಿತಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ 62 ನೇ ಮಹಾಪರಿನಿವರ್ಾಹಣ ಕಾರ್ಯಕ್ರಮದಲ್ಲಿ ಮುಖ್ಯತಿಥಿಗಳಾಗಿ ಆಗಮಿಸಿ ಮಾತನಾಡುತ್ತಿದ್ದ ಅವರು ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ತಮ್ಮ ಜೀವನದುದ್ದಕ್ಕೂ ಅನೇಕ ಕಷ್ಟಗಳನ್ನು ಅನುಭವಿಸಿ ಸಾಧನೆಯ ಮೇಟ್ಟಿಲು ಹತ್ತಿದವರಾಗಿದ್ದಾರೆ ಸಮಾಜದಲ್ಲಿ ದಲಿತರು, ಸೋಷಿತರು ಸಮಾನತೆ ಯಿಂದ ಬಧುಕಲೆಂಬ ಕಾರಣಕ್ಕಾಗಿ ಭೌಧ ಧರ್ಮವನ್ನು ಸ್ವಿಕಾರ ಮಾಡಿದರು. ಅಲ್ಲದೇ ಭಾರತ ದೇಶಕ್ಕೆ ಸಂವಿದಾನವೆಂಬ ಪವಿತ್ರ ಗ್ರಂಥವನ್ನು ರಚಿಸಿ ಕೊಟ್ಟಿದ್ದಾರೆ ಅಂತಹ ಪವಿತ್ರ ಸಂವಿದಾನವನ್ನು ಗಾಳಿ ಗಂದ ಗೊತ್ತಿಲ್ಲದವರು ತಿದ್ದಲು ಕೆಲವರು ಹವಣಿಸುತ್ತಾ ಸಾಗಿದ್ದಾರೆ ಅಂತವರಿಗೆ ಯಾವದೇ ರೀತಿಯಿಂದಲೂ ದಲಿತ ಬಂದುಗಳು ಅವಕಾಶವನ್ನು ಕೊಡಬಾರದೆಂದ ಅವರು ಸಮಾಜದಲ್ಲಿ ಸಮಾನತೆ ಬರಲು ಶಿಕ್ಷಣದಿಂದ ಮಾತ್ರ ಸಾಧ್ಯವೆಂಬುದನ್ನು ಬಾಬಾಸಾಹೇಬರು ಸಾರಿ ಹೋಗಿದ್ದಾರೆ ಅವರ ಆದರ್ಶ ಮತ್ತು ಅವರು ಹಾಕಿಕೊಟ್ಟ ಮಾರ್ಗದಲ್ಲಿ ಎಲ್ಲರೂ ಸಾಗಬೇಕಾಗಿದೆ ಎಂದರು.
ಇನ್ನೋರ್ವ ದಲಿತ ಸೇನೆ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದಶರ್ಿ ಬಸವರಾಜ ಕಟ್ಟಿಮನಿ ಅವರು ಮಾತನಾಡಿ ಸಮಾಜದಲ್ಲಿ ಮತ್ತೋಬ್ಬರನ್ನು ಬೊಟ್ಟು ಮಾಡಿ ಕೆಟ್ಟವರೆನ್ನುವದನ್ನು ಬಿಟ್ಟು ನಮ್ಮ ಜೀವನದಲ್ಲಿ ಸುದಾರಿಸಿಕೊಳ್ಳುವದನ್ನು ಕಲಿಯಬೇಕಾಗಿದೆ ಸಮಾನ ಮನಸ್ಕರದಿಂದ ಬಾಳಬೇಕಾದರೆ ಶಿಕ್ಷಣದಿಂದಲೇ ಮಾತ್ರ ಸಾಧ್ಯವಾಗಲಿದೆ ಮಕ್ಕಳಿಗೆ ಮೊದಲು ಶಿಕ್ಷಣದಿಂದ ಮುನ್ನಡೆಸಲು ಮುಂದಾಗಬೇಕು ಬಾಬಾಸಾಹೇಬ ಅಂಬೇಡ್ಕರ್ ಅವರು ಶಿಕ್ಷಣ ಸಂಘಟನೆ ಹೋರಾಟ ಎಂಬ ಹೇಳಿದ ತತ್ವಗಳೇ ಬೇರೆಯಾಗಿವೆ ಆದರೆ ಇಂದಿನ ದಿನಮಾನದಲ್ಲಿ ಕೆಲವು ಸಂಘಟನೆಗಳು ಮಾಡುವ ಹೋರಾಟಗಳ ರೀತಿಯೇ ಬೇರೆಯಾಗಿವೆ ಇದನ್ನು ಪ್ರತಿಯೊಬ್ಬರೂ ಅಥರ್ೈಸಿಕೊಳ್ಳಬೇಕಾಗಿದೆ ಸಮಾಜದಲ್ಲಿ ದಲಿತ ವರ್ಗದ ಜನರಿಗೆ ಸಮಾನತೆ ಸಿಗುವದಿಲ್ಲಾವೆಂಬ ಕಾರಣದಿಂದ ಮತ್ತು ಸಮಾಜದಲ್ಲಿ ಸದಾ ತುಳಿತಕ್ಕೆ ಒಳಗಾಗಬಾರದೆಂಬ ಕಾರಣದಿಂದ 1956 ಅಕ್ಟೋಬರ್ 14 ರಂದು ಸುಮಾರು 5 ಲಕ್ಷ ಜನರೊಂದಿಗೆ ಭೌಧ ಧರ್ಮವನ್ನು ಸ್ವಿಕಾರ ಮಾಡಿದರು ಇದನ್ನು ಪ್ರತಿಯೊಬ್ಬರು ಅರಿತುಕೊಳ್ಳಬೇಕಾಗಿದೆ ವರ್ಷಕ್ಕೆ ಒಬ್ಬರಾದರೂ ಭೌದ ಧರ್ಮವನ್ನು ಸ್ವಿಕಾರ ಮಾಡುವದರೊಂದಿಗೆ ಸಮಾನತೆಯ ಬಧುಕನ್ನು ರೂಪಿಸಿಕೊಳ್ಳಬೇಕೆಂದರು.
ಇನ್ನೋರ್ವ ಅತಿಥಿ ಅಸ್ಕಿ ಸಕರ್ಾರಿ ಪ್ರಾಥಮಿಕ ಶಾಲೆಯ ಮುಖ್ಯಗುರುಗಳಾದ ಮಲ್ಲಪ್ಪ ಚಲಾಕಾರ ಅವರು ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ಜೀವನದಲ್ಲಿ ಅನುಬವಿಸಿದ ಎಡರು ತೊಡರುಗಳು ಹಾಗೂ ದಲಿತ ಬಾಂದವರಿಗೆ ಸಮಾನತೆಯ ದಾರಿಯನ್ನು ಕಲ್ಪಿಸಿಕೊಡಲು ಭೌಧ ಧರ್ಮ ದಿಕ್ಷೀ ಕುರಿತು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವಿಧ ದಲಿತಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಮುತ್ತಪ್ಪ ಚಮಲಾಪೂರ, ಅವರು ವಹಿಸಿದ್ದರು.
ಕಾರ್ಯಕ್ರಮಕ್ಕೂ ಮೊದಲು ಡಾ.ಬಾಬಾಸಾಹೇಬ ಅಂಬೇಡ್ಕರ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮತ್ತು ದೀಪ ಬೆಳಗುವದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಈ ಸಮಯದಲ್ಲಿ ಶಾಂತಪ್ಪ ಚಲವಾದಿ, ಮಾಳಪ್ಪ ಮಾಳಳ್ಳಿ, ಡಿಎಸ್ಎಸ್ ಸಂಚಾಲಕ ಸಿದ್ದು ಬಾರಿಗಿಡದ, ಬಸವರಾಜ ಗುಂಡಕನಾಳ, ಮರೇಪ್ಪ ಚಲವಾದಿ, ಶಂಕರ ಕಟ್ಟಿಮನಿ, ರಾಮಣ್ಣ ಕಟ್ಟಿಮನಿ, ನಾಗೇಶ ಕಟ್ಟಿಮನಿ, ಮಹಾಂತೇಶ ಕಟ್ಟಿಮನಿ, ದೇವು ಗೊಟಗುಣಕಿ, ಪ್ರಕಾಶ ಪೂಜಾರಿ, ಭೀಮಣ್ಣ ರತ್ನಾಕರ, ಪರಶುರಾಮ ಹರಿಜನ, ನಿಂಗಪ್ಪ ಹೊಸಮನಿ, ಶಿವು ಬೂದಿಹಾಳ, ಭೀಮರಾಯ ಕಟ್ಟಿಮನಿ, ಶರಣು ರಕ್ಕಸಗಿ, ಶರಣು ತಳವಾರ, ಗುರುಪ್ರಸಾದ ಬಿ.ಜಿ, ಸಮಿಉಲ್ಲಾ ಅರಬ, ನಬಿ ಲಾಹೋರಿ, ಮೊದಲಾದವರು ಇದ್ದರು.
ಡಿಎಸ್ಎಸ್ ಸಂಚಾಲಕ ಕಾಶಿನಾಥ ಕಾರಗನೂರ ಸ್ವಾಗತಿಸಿದರು. ಮಹೇಶ ಚಲವಾದಿ ನಿರೂಪಿಸಿದರು. ಸಿದ್ದು ಬಾರಿಗಿಡದ ವಂದಿಸಿದರು.