ಧಾರವಾಡ 06: ದಕ್ಷ ಆಡಳಿತಗಾರರು, ಶೇಷ್ಠ ಸಾಹಿತಿಗಳು, ಹೃದಯ ಶ್ರೀಮಂತ ಧೀಮಂತ ಡಾ. ಸಿದ್ದಯ್ಯ ಪುರಾಣಿಕ ಜನ್ಮ ಶತಮಾನ ವಷರ್ಾಚರಣೆಯನ್ನು ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಬಸನ ಶಾಂತಿ ಮಿಷನ್ ಸಂಯುಕ್ತ ಆಶ್ರಯದಲ್ಲಿ ಆಚರಿಸಲಾಯಿತು. ಉಪನ್ಯಾಸಕರಾಗಿ ಆಗಮಿಸಿದ್ದ ಪ್ರೊ. ಭಾಗ್ಯಜ್ಯೋತಿ ಹಿರೇಮಠ ಅವರು ಸಿದ್ದಯ್ಯ ಪುರಾಣಿಕರ ವೃತ್ತಿ ಜೀವನ ಮತ್ತು ಸಾಹಿತ್ಯಿಕ ಸಾಧನೆಯನ್ನು ಕುರಿತು ವಿವರಿಸಿದರು. ಅತಿಥಿಗಳಾಗಿ ಆಗಮಿಸಿದ್ದ ಡಾ. ಶ್ಯಾಮಸುಂದರ ಬಿದರಕುಂದಿ ಅವರು ಡಾ. ಸಿದ್ದಯ್ಯ ಪುರಾಣಿಕ ಅವರ ವ್ಯಕ್ತಿತ್ವ ಮತ್ತು ಅಧಿಕಾರದ ಬಳಕೆ, ಸಾಹಿತ್ಯ ಕೊಡುಗೆಯನ್ನು ಎಳೆ ಎಳೆಯಾಗಿ ಬಿಡಿಸಿ ವಿವರಿಸಿದರು. ಸಾಹಿತ್ಯ ಸಾಧಕರನ್ನು ಸ್ಮರಿಸುವುದು ಅವರ ಸಾಹಿತ್ಯವನ್ನು ಓದುವುದರಿಂದ ಬದುಕಿನಲ್ಲಿ ಹೊಸತನವನ್ನು ಕಂಡುಕೊಳ್ಳಲು ಸಾಧ್ಯ ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಪ್ರೊ. ಮಲ್ಲಿಕಾಜರ್ುನ ಹಿರೇಮಠ ಅವರು ಕಾವ್ಯಾನಂದರ ಕಾವ್ಯ ಲೋಕದಲ್ಲಿ ಮಾನವೀಯ ಮೌಲ್ಯಗಳನ್ನು ಮತ್ತು ನಿಸರ್ಗ, ಆಧ್ಯಾತ್ಮವನ್ನು ಸೊಗಸಾಗಿ ಕಾಣಬಹುದು. ಸಾಹಿತ್ಯ, ಆಧ್ಯಾತ್ಮ, ಮಾನವೀಯತೆ ಅವರ ಕಾವ್ಯದ ವೈಶಿಷ್ಠ ಎಂದರು.
ಇದೇ ಸಂದರ್ಭದಲ್ಲಿ ಕದಳಿ ಮಹಿಳಾ ವೇದಿಕೆ ಪದಾಧಿಕಾರಿಗಳು ಮತ್ತು ಆರತಿ ಪಾಟೀಲ ಹಾಗೂ ಸಂಗಡಿಗರು ಕಾವ್ಯಾನಂದರ ಕವನ ಗಾಯನ ಮಾಡಿದರು. ಡಾ. ಅಜರ್ುನ ವಠಾರ, ಶ್ರೀಧರ ಕುಲಕಣರ್ಿ ಶಾಸ್ತ್ರೀಯ ಸಂಗೀತದಲ್ಲಿ ಕಾವ್ಯಾನಂದರ ಕವನಗಳನ್ನು ಹಾಡಿದರು. ಸಂಗೀತ ಸಾಹಿತ್ಯ ಆಧ್ಯಾತ್ಮದಲ್ಲಿ ಕಾವ್ಯಾನಂದರ ಸಾಧನೆಯನ್ನು ಸ್ಮರಿಸಲಾಯಿತು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಸ್ವಾಗತಿಸಿದರು. ಕಸಾಪ ಗೌರವ ಕಾರ್ಯದಶರ್ಿ ಡಾ. ಜಿನದತ್ತ ಹಡಗಲಿ ವಂದಿಸಿದರು. ಕಸಾಪ ಗೌರವ ಕಾರ್ಯದಶರ್ಿ ಪ್ರೊ. ಕೆ.ಎಸ್.ಕೌಜಲಗಿ ಕಾರ್ಯಕ್ರಮ ನಿರೂಪಿಸಿದರು. ಬಸವ ಶಾಂತಿ ಮಿಷನ್ದ ಅಧ್ಯಕ್ಷರಾದ ಮಹಾದೇವ ಹೊರಟ್ಟಿ ಸಂಯೋಜಕರಾದ ಪ್ರೇಮಕ್ಕಾ ಹೊರಟ್ಟಿ, ಕಸಾಪ ಗೌರ ಕೋಶಾಧ್ಯಕ್ಷ ಪ್ರೊ. ಎಸ್.ಎಸ್.ದೊಡಮನಿ, ಪ್ರೊ. ಎ.ಜಿ.ಸಬರದ, ಅರವಿಂದ ಯಾಳಗಿ, ಮಾರ್ಕಂಡೇಯ ದೊಡ್ಡಮನಿ, ಡಾ. ರಮ್ಜಾನ್ ದಗರ್ಾ, ಪ್ರೊ. ಎನ್.ಎ.ಮೂಲಿಮನಿ, ಬಾಲಚಂದ್ರ ಹುಲಕುಂದ, ಡಾ. ಪ್ರೀಯಾ ಹೊರಟ್ಟಿ, ಪ್ರಭಾಕರ ಜೋಶಿ, ಗಣೇಶ ಜೋಶಿ, ಮಂಜುನಾಥ ಮೊಹರೆ, ಎಫ್.ಬಿ.ಕಣವಿ ಮುಂತಾದವರು ಉಪಸ್ಥಿತರಿದ್ದರು.