ಬಸ್ ಸ್ಟ್ಯಾಂಡ್ ರಸ್ತೆಯ ಡಾ,"ಪುನೀತ್ ರಾಜಕುಮಾರ್ 50ನೇ ಹುಟ್ಟು ಹಬ್ಬ
ರಾಣೇಬೆನ್ನೂರ 17: ಇಲ್ಲಿನ ಬಸ್ ಸ್ಟ್ಯಾಂಡ್ ರಸ್ತೆಯ, ಡಾ,"ಪುನೀತ್ ರಾಜಕುಮಾರ್ ವೃತ್ತದಲ್ಲಿ ಅವರ 50ನೇ ಹುಟ್ಟು ಹಬ್ಬದ ಪ್ರಯುಕ್ತ, ವಿವಿಧ ಕನ್ನಡ ಪರ ಸಂಘಟನೆಗಳು ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದ್ದರು. ನಗರ ಪಿಎಸ್‌ಐ ಗಡ್ಡೆಪ್ಪ ಗುಂಜುಟಗಿ, ಸಿಪಿಐ ಡಾ ಶಂಕರ್, ಅವರುಗಳು ಪುನೀತ್ ರಾಜಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ವರ್ಷಾಚರಣೆ ಸಂಭ್ರಮಕ್ಕೆ ಚಾಲನೆ ನೀಡಿದರು. ನಗರಸಭಾ ಅಧ್ಯಕ್ಷ ಚಂಪಕ ರ. ಬಿಸಲಹಳ್ಳಿ, ಅವರು ಸಮಾರಂಭ ಉದ್ಘಾಟಿಸಿದರು.ಉಪಾಧ್ಯಕ್ಷ ಕೆ. ಎಂ.ಪಿ. ಮಣಿ ಪವಾರ, ಕರವೇ ಉಪಾಧ್ಯಕ್ಷ ಕೊಟ್ರೇಶಪ್ಪ ಎಮ್ಮಿ, ರಾಜ್ಯ ಸಂಚಾಲಕ ಮಲ್ಲಿಕಾರ್ಜುನ ಸಾವಕ್ಕಳ್ಳವರ್, ಭಾಷಾ ಸಾಬ್ ಹಂಪಾಪಟ್ಟಣ ಆಟೋ ಸಂಘದ ಅಧ್ಯಕ್ಷ ಚಂದ್ರ್ಪ ಬಣಕಾರ, ಮತ್ತಿತರರು.
ಉಪಸ್ಥಿತರಿದ್ದರು. ಸ್ವಾಮಿ ವಿವೇಕಾನಂದ ಆಟೋ ಚಾಲಕರ ಮಾಲಕರ ಸಂಘ ಮತ್ತುಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕ್ರಮ ಆಯೋಜಿಸಿತ್ತು. ವಿವಿಧ ಸಂಘಟನೆಗಳು ಜನ್ಮದಿನೋತ್ಸವದ ಪ್ರಯುಕ್ತ ಸಾರ್ವಜನಿಕವಾಗಿ ಮಹಾಪ್ರಸಾದ ವ್ಯವಸ್ಥೆ ಮಾಡಿದ್ದರು. ಕಾರ್ಯಕ್ರಮದಲ್ಲಿ ಪರಶುರಾಮ ಕುರುವತ್ತಿ, ರಿಯಾಜ್ ಅಹಮದ್ ದೊಡ್ಡಮನಿ, ಮೃತ್ಯುಂಜಯ ಕರಿಯಜ್ಜಿ, ನಾಗರಾಜ ಮಾಕನೂರು, ಪಿ. ವಿ. ಮಠದ, ಯಲ್ಲಪ್ಪ, ನಾಗರಾಜ, ಮಂಜುನಾಥ್ ಕೋಲಕಾರ ಸೇರಿದಂತೆ ವಿವಿಧ ಸಂಘಟನೆಗಳ ನೂರಾರು ಕಾರ್ಯಕರ್ತರು ಆಟೋ ಚಾಲಕರು ಮತ್ತು ಮಾಲಕರು ಪುನೀತ್ ರಾಜಕುಮಾರ್ ಅಭಿಮಾನಿಗಳು ಪಾಲ್ಗೊಂಡಿದ್ದರು.