ಲೋಕದರ್ಶನ ವರದಿ
ಅಥಣಿ 26: ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ ಇವರನ್ನು ಕಾಂಗ್ರೆಸ್ ಪಕ್ಷ ಎರಡು ಬಾರಿ ಚುನಾವಣೆಯಲ್ಲಿ ಸೋಲಿಸಿತು. ದೇಹಲಿಯಲ್ಲಿ ಅವರ ಅಂತಿಮ ಸಂಸ್ಕಾರಕ್ಕೂ ಸ್ಥಳಾವಕಾಶ ನೀಡಲಿಲ್ಲ. ಆದರೂ ಕಾಂಗ್ರೆಸ್ನವರು ಮಾತ್ರ ಮತಬ್ಯಾಂಕ್ಗಾಗಿ ಬಾಬಾಸಾಹೇಬ ಅಂಬೇಡ್ಕರ ಅನುಯಾಯಿ ಎಂದು ಹೇಳಿಕೊಳ್ಳುತ್ತಿದ್ದಾರೆಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ಕುಮಾರ ಕಟೀಲ್ ಹೇಳಿದರು.
ಸಂವಿಧಾನ ದಿನದ ಅಂಗವಾಗಿ ಅಂಬೇಡ್ಕರ ಭಾವ ಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸಿ ಮಾತನಾಡಿ, ಡಾ.ಅಂಬೇಡ್ಕರ ರಚಿಸಿದ ಸಂವಿಧಾನ ಎಲ್ಲರಿಗೂ ಸಮಾಮವಾದ ಅಧಿಕಾರ ನೀಡಿದೆ ಅಲ್ಲದೆ ಮೇಲು, ಕೀಳು ಯಾರಲ್ಲಿಯೂ ಎಲ್ಲರೂ ಸಮಾನರು ಎನ್ನುವ ಭಾವ ಮೂಡಿ ಚಹಾ ಮಾರುವ ವ್ಯಕ್ತಿ ದೇಶದ ಪ್ರಧಾನಿಯಾಗಿದ್ದಾರೆ ಎಂದು ಹೇಳಿದರು. ನವೆಂಬರ 26ರ ದಿನವನ್ನು ಪ್ರಧಾನಿ ನರೇಂದ್ರ ಮೋದಿಯವರೇ ಇಂದಿನ ದಿನವನ್ನು ಸಂವಿಧಾನದ ದಿನ ಎಂದು ಘೋಶಿಸಿದ್ದಾರೆ ಎಂದ ಅವರು ಜನೇವರಿ 26 ರಂದು ಸಂವಿಧಾನಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಯಿತು ಎಂದು ಹೇಳಿದರು.
ಡಿಸಿಎಮ್ ಗೋವಿಂದ ಕಾರಜೋಳ ಮಾತನಾಡಿ, ಶೋಷಿತರಿಗೆ ಬದಕುವ ಅಧಿಕಾರವನ್ನು ಸಂವಿಧಾನದ ಮೂಲಕ ಡಾ.ಅಂಬೇಡ್ಕರ ನೀಡಿದರು. ಸಮಾನತೆಯ ತತ್ವವನ್ನು ಸಂವಿಧಾನದಲ್ಲಿ ಅಳವಿಡಿಸುವ ಮೂಲಕ ವಿಶ್ವದ ಅನೇಕ ರಾಷ್ಟ್ರಗಳಿಗೆ ನಮ್ಮ ಸಂವಿಧಾನ ಮಾದರಿಯಾಗುವಂತೆ ಮಾಡಿದರು ಎಂದ ಅವರು ಇಂತಹ ಅಮೂಲ್ಯ ಸಂವಿಧಾನ ನೀಡಿದ ಡಾ.ಅಂಬೇಡ್ಕರರ ಸ್ಮರಣೆ ಇಂದು ನಡೆಯಲಿ ಎಂದರು.
ಡಿಸಿಎಮ್ ಲಕ್ಷ್ಮಣ ಸವದಿ, ಬಿಜೆಪಿ ಅಭ್ಯಥರ್ಿ ಮಹೇಶ ಕುಮಠಳ್ಳಿ, ಬಿಜೆಪಿ ಮುಖಂಡರಾದ ಶ್ರೀಕಾಂತ ಕುಲಕಣರ್ಿ, ಉಮೇಶ ಬಂಟೋಡ್ಕರ, ಆನಂದ ದೇಶಪಾಂಡೆ, ಮಲ್ಲು ಹುದ್ದಾರ, ಪ್ರಭಾಕರ ಚವ್ಹಾಣ, ಸುಶೀಲ ಪತ್ತಾರ ಸೇರಿದಂತೆ ನೂರಾರು ಕಾರ್ಯಕರ್ತರು, ಮುಖಂಡರು, ಅಭಿಮಾನಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ನಂತರ ತೆರೆದ ವಾಹನದಲ್ಲಿ ರಾಜ್ಯ ಅಧ್ಯಕ್ಷರು, ಡಿಸಿಎಮ್ ಸವದಿ, ಕಾರಜೋಳ ಮೆರವಣಿಗೆಯಲ್ಲಿ ತೆರಳಿ ಲಿಡಕರ್ ಕಾಲನಿಯಲ್ಲಿರುವ ಜಗಜೀವನರಾಮ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.