ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ರ ದಿನಾಚರಣೆ: ಶೈಕ್ಷಣಿಕ ಕಾರ್ಯಾಗಾರ

ಧಾರವಾಡ 23: ಸೋಮವಾರ ಮುಂಜಾನೆ 10.30ಕ್ಕೆ ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಹಾಗೂ ಧಾರವಾಡ ಜಿಲ್ಲಾ ಪ್ರಾಚಾರ್ಯರ ಸಂಘದ ಆಶ್ರಯದಲ್ಲಿ ಬಿ.ವ್ಹಿ.ಬಿಯ ಬಯೋಟಿಕ್ ಹಾಲಿನಲ್ಲಿ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರು ಮತ್ತು ಉಪನ್ಯಾಸಕರು ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ರ ಜನ್ಮದಿನೋತ್ಸವವನ್ನು ಆಚರಿಸುವುದರ ಮೂಲಕ ಶೈಕ್ಷಣಿಕ ಕಾರ್ಯಾಗಾರವನ್ನು ನಡೆಸಿದರು.   

ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ವಿಧಾನ ಪರಿಷತ್ ಶಾಸಕರಾದ ಶ್ರೀ. ಎಸ್‌. ವಿ. ಸಂಕನೂರ ರವರು ಜ್ಯೋತಿ ಬೆಳಗುವುದರೊಂದಿಗೆ ಶಿಕ್ಷಕರ ಕಾರ್ಯವಿಧಾನವನ್ನು ಮತ್ತು ಸರ್ವಾಂಗೀಣ ಅಭಿವೃದ್ದಿಗೆ ಶಿಕ್ಷಕರ ಕ್ರೀಯಾಶೀಲತೆ ಅವಶ್ಯಕತೆ ಎಂಬುವುದರ ಮೂಲಕ ಅನೇಕ ರಾಷ್ಟ್ರಗಳ ಶಿಕ್ಷಕರ ಸ್ಥಾನಮಾನಗಳ ಉದಾಹರಣೆಯೊಂದಿಗೆ ನಮ್ಮನ್ನು ಹೋಲಿಸಿಕೊಂಡರು.  ಅಲ್ಲದೇ ಹೆಚ್ಚು ಫಲಿತಾಂಶವನ್ನು ನೀಡುವುದರ ಮೂಲಕವಾಗಿ ಸಮುದಾಯದ ಋಣವನ್ನು ತೀರಿಸಬೇಕೆಂಬುವುದನ್ನು ವಿವರಿಸಿದರು.  

ಶ್ರೀ ಹಿರೇಮಲ್ಲೂರು ಈಶ್ವರನ್ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಶಶಿಧರ್ ತೋಡಕರ್‌ರವರು ಉಪನ್ಯಾಸ ನೀಡುತ್ತಾ ಶಿಕ್ಷಕರ ಮಹತ್ವ, ಬದ್ದತೆ, ಸಮಯ ಪಾಲನೆ, ಪಠ್ಯೇತರ ಆಲೋಚನೆಗಳು ಮುಂತಾದ ವಿಷಯಗಳು ಸಮಗ್ರ ಅಭಿವೃದ್ಧಿಗೆ ಸಹಾಯಕವಾಗಿವೆ ಎಂದರು.  

ಉಪನಿರ್ದೇಶಕರಾದ ಕೆ. ಪಿ. ಸುರೇಶ ಅಧ್ಯಕ್ಷೀಯ ಸಮಾರೋಪದ ಮಾತುಗಳಲ್ಲಿ ಎಲ್ಲ ಪ್ರಾಚಾರ್ಯರನ್ನು ಮತ್ತು ಉಪನ್ಯಾಸಕರನ್ನು ಎಚ್ಚರಿಸುವುದರ ಜೊತೆಗೆ ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ಫಲಿತಾಂಶ ಸುಧಾರಣೆಗೆ ಶಿಕ್ಷಕ ಮತ್ತು ವಿದ್ಯಾರ್ಥಿಗಳ ಪಾಲ್ಗೊಳ್ಳವುಕೆ ಅನಿವಾರ್ಯ ಎಂಬುದನ್ನು ತಿಳಿಸಕೊಟ್ಟರು.  

ಪ್ರಾರಂಭದಲ್ಲಿ ಪಿ.ಸಿ.ಜಾಬಿನ ಕಾಲೇಜಿನ ವಿದ್ಯಾರ್ಥಿನಿಯರು ಪ್ರಾರ್ಥನೆಯನ್ನು ಸಲ್ಲಿಸಿದರು, ಶ್ರೀಮತಿ ಶೋಭಾ ಜಾಬಿನ್ ಭಕ್ತಿಗೀತೆ ಮತ್ತು ನಾಡಗೀತೆಯನ್ನು ಹಾಡಿದರು.  ಪ್ರಾಚಾರ್ಯರ ಸಂಘದ ಅಧ್ಯಕ್ಷರಾದ ಶ್ರೀ. ಡಿ. ಹನಮಂತಪ್ಪ ಸ್ವಾಗತಿಸಿದರು, ಕಾರ್ಯದರ್ಶಿಗಳಾದ ಶ್ರೀ. ಸಂದೀಪ ಬೂದಿಹಾಳರವರು ಪರಿಚಯ ಮತ್ತು ಪ್ರಾಸ್ತಾವಿಕ ಮಾತುಗಳನ್ನಾಡಿದರು.   

ವೇದಿಕೆಯಮೇಲೆ ಪ್ರಾರ್ಚಾರುಗಳಾದ ಶ್ರೀ. ಅಶೋಕ ಸವಣೂರ, ಶಶಿಧರ ತೋಡಕರ್, ವಿ. ಆರ್‌. ವಾಘ್ಮೋಡೆ, ಶ್ರೀಮತಿ ಟಿ.ಪಿ.ನಾರಾಯಣಕರ್ ಎಸ್‌. ಶ್ರೀಕಾಂತ ಉಪಸ್ಥಿತರಿದ್ದರು.  ಕಾರ್ಯಕ್ರಮದ ನಿರೂಪಣೆಯನ್ನು ಎಫ್‌. ಬಿ. ಸೊರಟೂರ,  ಮತ್ತು ಅನಂದ ಮುಳಗುಂದರವರು ವಂದನೆಗಳನ್ನು ಸಲ್ಲಿಸಿದರು.