ಡಾ.ಲತಾ ಅವರಿಗೆ ಬಸವ ಶ್ರೀಗಳಿಂದ ಸನ್ಮಾನ

ಲೋಕದರ್ಶನವರದಿ

ಶಿಗ್ಗಾವಿ: ಪಟ್ಟಣದ ವಿರಕ್ತಮಠದಲ್ಲಿ ನಡೆದ ಶರಣ ಸಂಸ್ಕೃತಿ ಉತ್ಸವ, ಲಿಂ. ಸಂಗನಬಸವ ಮಹಾಸ್ವಾಮಿಗಳ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ವಚನ ನಿಧಿ ವನಿತಾ ಸಂಘದ ಅಧ್ಯಕ್ಷರಾದ ಡಾ|| ಲತಾ ನಿಡಗುಂದಿ ಅವರನ್ನು ಸಾನಿದ್ಯ ವಹಿಸಿದ ಸಂಗನ ಬಸವ ಶ್ರೀಗಳು ಸನ್ಮಾನಿಸಿದರು. 

ಈ ಸಂದರ್ಭದಲ್ಲಿ ಸಾನಿದ್ಯ ವಹಿಸಿದ ಸಂಗನ ಬಸವ ಶ್ರೀಗಳು, ಹುಬ್ಬಳ್ಳಿ ಧಾರವಾಡ ಅವಳಿ ನಗರದ ಸಿ.ಜಿ.ಎಸ್.ಟಿ ಉಪ ಆಯುಕ್ತರಾದ ವನಶ್ರೀ ಹುಲ್ಲಣ್ಣವರ, ಯೋಗ ಪಟು ಕುಮಾರಿ ವಿಜಯಲಕ್ಷ್ಮೀ ಬನ್ನಿಮಟ್ಟಿ, ಪಟ್ಟಣದ ವಚನ ನಿಧಿ ವನಿತಾ ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು.