ಡಾ. ಗಿರೀಶ ಕಾರ್ನಾಡ್ ನಿಧನಕ್ಕೆ ಶ್ರದ್ಧಾಂಜಲಿ

 ಕಾಗವಾಡ 10: ಡಾ. ಗಿರೀಶ ಕಾರ್ನಾಡ್  ನಿಧನಕ್ಕೆ ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಇವರು ಶ್ರದ್ಧಾಂಜಲಿ ಸಭೆ ಹಮ್ಮಿಕೊಂಡು, ಸಂತಾಪ ಸೂಚಿಸಿದರು.

ಕಾಗವಾಡ ಮತಕ್ಷೇತ್ರದ ಶೇಡಬಾಳ ಗ್ರಾಮದಲ್ಲಿ ಕ್ಷೇತ್ರದ ಕಾರ್ಯಕರ್ತರೊಂದಿಗೆ ಶ್ರದ್ಧಾಂಜಲಿ ಸಭೆ ನೆರವೇರಿಸಿದರು.ಡಾ. ಗಿರೀಶ ಕಾರ್ನಾಡ್ ಇವರ ಪ್ರತಿಮೆಗೆ ಪೂಜೆ ಸಲ್ಲಿಸಿ ಪುಷ್ಪಾರ್ಪಣೆ ಮಾಡಿದರು.

ರಾಜ್ಯ ಅಷ್ಟೇ ಅಲ್ಲ. ಭಾರತ ದೇಶದಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದ ಕರ್ನಾಟಕದ  ಜನತೆಯ ಆಸ್ತಿಯಾಗಿರುವ ಡಾ. ಗಿರೀಶ ಕಾರ್ನಾಡ್ ಇವರನ್ನು ಕಳೆದುಕೊಂಡಿದ್ದರಿಂದ ರಾಜ್ಯದ ಸಾಹಿತ್ಯ ಕ್ಷೇತ್ರದಲ್ಲಿ ಹಾನಿಯಾಗಿದೆ ಎಂದು ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಶ್ರದ್ಧಾಂಜಲಿ ಸಭೆಯಲ್ಲಿ ಹೇಳಿದರು.

ಶೇಡಬಾಳದಲ್ಲಿ ದಿ. ಕೃಷ್ಣಾ ಕೊ-ಆಪ್ ಸೊಸೈಟಿಯ ಶಾಖೆ ಉದ್ಘಾಟನೆ ಪೂರ್ವನಿಯೋಜಿತ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಡಾ. ಗಿರೀಶ ಕಾಕಾರ್ನಾಡ್ಯವರ ನಿಧನದ ಸುದ್ದಿ ತಿಳಿದ ಬಳಿಕ ಎಲ್ಲ ಕಾರ್ಯಕ್ರಮಗಳನ್ನು ರದ್ದುಗೊಳಿಸಿ, ಶ್ರದ್ಧಾಂಜಲಿ ಸಭೆ ನೆರವೇರಿಸಿದರು.

ಸಭೆಯಲ್ಲಿ ಮುಂಬಯಿಯ ನಿವೃತ್ತ ಪೊಲೀಸ್ ಆಯುಕ್ತ ದಿಲೀಪ ಪಾಂಡುರಂಗ ಸೂರ್ಯವಂಶಿ, ಕಾಂಗ್ರೆಸ್ ಪಕ್ಷದ ಘಟಕ ಆಧ್ಯಕ್ಷರಾದ ವಿಜಯ ಅಕಿವಾಟೆ, ಶ್ರೀನಿವಾಸ್ ಪಾಟೀಲ, ಮಹಾದೇವ ಕೋರೆ, ಸುಭಾಷ ಕಠಾರೆ, ದಾದಾ ಪಾಟೀಲ, ಸುಧಾಕರ ಭಗತ್, ಕುಮಾರ ಬರಗಾಲೆ, ಅಶೋಕ ಪಾಟೀಲ, ಆರ್.ಎಂ.ಪಾಟೀಲ, ಸುಭಾಷ ಢಾಲೆ, ಜುಗೂಳ ಗ್ರಾಪಂ ಆಧ್ಯಕ್ಷ ಸಂಜಯ ಮಿಣಚೆ, ಕೃಷ್ಣಾ ಬ್ಯಾಂಕಿನ ವ್ಯವಸ್ಥಾಪಕ ಅರುಣಕುಮಾರ ತಿಕೋಟಿ, ಶಾಖಾ ವ್ಯವಸ್ಥಾಪಕ ಸೈಯದ್ ಮುಲ್ಲಾ, ವಿ.ಟಿ.ಪಾಟೀಲ, ಭರತೇಶ ಪಾಟೀಲ, ಸುಮತಿನಾಥ ಪಾಟೀಲ, ಸೇರಿದಂತೆ ಅನೇಕ ಕಾರ್ಯಕರ್ತರು ಶ್ರದ್ಧಾಂಜಲಿ ಸಲ್ಲಿಸಿದರು.

ಫೋಟೊ ಶೀರ್ಷಿಕೆ : 10 ಕಾಗವಾಡ 1 ಶೇಡಬಾಳದಲ್ಲಿ ಶಾಸಕ ಶ್ರೀಮಂತ ಪಾಟೀಲ ಮತ್ತು ಇತರರು ಡಾ. ಗಿರೀಶ ಕಾರ್ನಾಡ್  ಇವರಿಗೆ ಶ್ರದ್ಧಾಂಜಲಿ ಅರ್ಪಿಸುತ್ತಿರುವಾಗ.