ಬಿರುಗಾಳಿ ಮಳೆಗೆ ನೆಲಕಚ್ಚಿದ ಹತ್ತಾರು ಎಕರೆ ಬಾಳೆ ಬೆಳೆ

ಬಿರುಗಾಳಿ ಮಳೆಗೆ ನೆಲಕಚ್ಚಿದ ಹತ್ತಾರು ಎಕರೆ ಬಾಳೆ ಬೆಳೆ  Dozens of acres of banana crop destroyed by torrential rain

ಕೊಲ್ಹಾರ 16: ತಾಲ್ಲೂಕಿನ ಮಸೂತಿ ಗ್ರಾಮದಲ್ಲಿ ಗುರುವಾರ ಸಂಜೆ ಸುರಿದ ಬಿರುಗಾಳಿ ಮಳೆಯಿಂದ ರೈತರು ಬೆಳೆದ ಹತ್ತಾರು ಎಕರೆ ಬಾಳೆ ನೆಲಕಚ್ಚಿದೆ ರೈತರ ಆಕ್ರಂದನ ಹೇಳುತ್ತೀರದಾಗಿದೆ. ಮಸೂತಿ ಗ್ರಾಮದಲ್ಲಿ ಬಾಳೆ ಬೆಳೆದ ರೈತ ಮಂಜುನಾಥ ಚನಗೊಂಡ ಎರಡು ಎಕರೆ, ಶ್ರೀಶೈಲ ಹಂಗರಗಿ, ಈರಣ್ಣ ಗಿಡ್ಡಪ್ಪಗೋಳ ಮೂರು ಎಕರೆ, ಚೆನ್ನಪ್ಪ ಬಿಸ್ಟಗೊಂಡ ಒಂದು ಎಕರೆ,ಕಲ್ಲೇಶ ಬಾಗಾನರ ಹಾಗೂ ಇನ್ನೂ ಹಲವು ರೈತರ ಸುಮಾರು ಹತ್ತಾರು ಎಕರೆ ಬಾಳೆ ನೆಲಕಚ್ಚಿದೆ. ಇಂತಹ ಬೇಸಿಗೆ ಕಾಲದಲ್ಲಿ ಬಾಳೆ ಬೆಳೆ ಉಳಿಸಿಕೊಳ್ಳಲು ರೈತರು ಹಣ ಖರ್ಚು ಮಾಡಿ ಬೋರ್ ವೇಲ್, ಬಾವಿ ತೆಗೆಸಿ ನೀರು ಪಡೆದು ಉತ್ತಮ ಗುಣಮಟ್ಟದ ಬಾಳೆ ಇನ್ನೇನು ಫಲ ಕೈಗೆ ಸಿಗುವ ಸಂದರ್ಭದಲ್ಲಿ ಬಿರುಗಾಳಿ ಮಳೆಯಿಂದ ರೈತರ ಬದುಕು ನುಚ್ಚು ನೂರಾಯಿತು ಎಂದು ರೈತರು ತಮ್ಮ ಅಳಿಲನ್ನು ತೋಡಿಕೊಂಡರು. ಎಲ್ಲಾ ರೈತರು ನಮಗೆ ಸರ್ಕಾರದಿಂದ ಸಹಾಯ ಸಹಕಾರ ಬೇಕು ಈಗ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರೀಶೀಲನೆ ಮಾಡಿದ್ದಾರೆ ಆದರೆ ಸರ್ಕಾರ ಬೇಗನೆ ನಮ್ಮ ನೋವಿಗೆ ಸ್ಪಂದಿಸುವ ಕೆಲಸ ಆಗಬೇಕು ಎಂದು ಎಲ್ಲಾ ರೈತರು ಒಕ್ಕೂರಲಿನಿಂದ ಹೇಳಿದರು.