ಬೆಳಗಾವಿ 03: ಶಾಲಾ ಮಕ್ಕಳಿಗೆ ಪುಸ್ತಕೀಯ ಜ್ಞಾನದ ಜೊತೆಗೆ ಮಾನವೀಯ ಮೌಲ್ಯಗಳನ್ನು ಹೆಚ್ಚಿಗೆ ಕಲಿಸಬೇಕಾಗಿದೆ. ಬದಲಾಗುತ್ತಿರುವ ಪರಿಸ್ಥಿತಿಯಲ್ಲಿ ಸಂಬಂಧಗಳು ಕೃತಕವಾಗುತ್ತಿವೆ ಹಿಂದಿನ ಕಾಲದ ಕುಟುಂಬ ವ್ಯವಸ್ಥೆ ಹಾಗೂ ಕುಟುಂಬದಲ್ಲಿನ ಪ್ರೀತಿ ವಾತ್ಸಲ್ಯಗಳು ನಶಿಸುತ್ತಾಸಾಗಿ ಸಮಾಜದಲ್ಲಿ ಮಕ್ಕಳು ತಂದೆ ತಾಯಿಗಳನ್ನು ವೃದ್ಧಾಶ್ರಮಕ್ಕೆ ಸೇರಿಸುತ್ತಿರುವದರಿಂದ ವೃದ್ಧಾಶ್ರಮಗಳ ಸಂಖ್ಯೆಯು ಹೆಚ್ಚುತ್ತಿದೆ. ಮಕ್ಕಳಿಗೆ ಸಮೃದ್ಧಿ ಪಡೆದುಕೊಳ್ಳುವದಕಿಂತ ಸಂತೃಪ್ತಿ ಹೇಗೆ ಪಡೆದುಕೊಳ್ಳಬೇಕೆಂಬುದನ್ನು ಕಲಿಸುವ ಅಗತ್ಯತೆ ಇದೆ ಎಂದು ಪೋಡಾರ ಶಾಲೆಯ ಸಂಯೋಜಕ ಎಸ್,ಎನ್.ದೇಸಾಯಿ ಅಭಿಪ್ರಾಯಪಟ್ಟರು.
ಬೆಳಗಾವಿಯ ದೇವರಾಜ ಅರಸ ಬಡಾವಣೆಯ ನಾಗನೂರು ಶಿವಬಸವೇಶ್ವರ ಟ್ರಸ್ಟಿನ ಚಿನ್ನಮ್ಮಾ ಬ ಹಿರೇಮಠ ವೃದ್ಧಾಶ್ರಮಕ್ಕೆ ಪೋಡಾರ ಶಾಲಾ ಮಕ್ಕಳು ಭೇಟಿನೀಡಿ ಹಿರಿಯನಾಗರಿಕರಿಗೆ ಸಿಹಿತಿಂಡಿ, ಬಿಸ್ಕಿಟ್ ಹಾಗೂ ಬಟ್ಟೆಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಾಲೆಯ ಕಾರ್ಯಕ್ರಮ ಸಂಯೋಜಕಿ ಶೀಲತ ಬಸುತರ್ೆಕರ ಮಾತನಾಡಿ ಹಿರಿಯ ನಾಗರಿಕರ ಬಗ್ಗೆ ಮಕ್ಕಳಲ್ಲಿ ಗೌರವ ಭಾವನೆ ಮೂಡಬೇಕಾಗಿದೆ. ಅಭ್ಯಾಸದ ಜೊತೆಗೆ ಮಕ್ಕಳಲ್ಲಿ ಸಮಾಜದ ಬಗೆಗಿನ ಪ್ರೀತಿ, ಕಳಕಳಿ ಬರುವ ಉದ್ದೇಶದಿಂದ ಇಂತಹ ಬೇಟಿಗಳ ಮೂಲಕ ವಿದ್ಯಾಥರ್ಿಗಳಲ್ಲಿ ಸಮಾಜಮುಖಿ ಚಿಂತನೆ ಬೆಳೆಸಲಾಗುತ್ತಿದೆ ಎಂದರು.
ವೃದ್ಧಾಶ್ರಮಕ್ಕೆ ದೇಣಿಗೆ ನೀಡಿದ ಪೋಡಾರ ಶಾಲೆಯ ಮಕ್ಕಳು ಹಾಗೂ ಆಡಳಿತ ಮಂಡಳಿಯವರನ್ನು ವೃದ್ಧಾಶ್ರಮದ ಸಂಯೋಜಕ ಎಂ.ಎಸ್.ಚೌಗಲಾ ಅಭಿನಂದಿಸಿದರು.