ಪ್ರಯತ್ನ ಸಂಘಟನೆಯಿಂದ ದೇಣಿಗೆ

Donation from the effort organization

ಬೆಳಗಾವಿ 07 - ಪ್ರಯತ್ನ ಸಂಘಟನೆಯವರು ಇದೇ ದಿ. 3 ರಂದು ಬೆಳಗಾವಿಯ ಎನ್ ಎಸ್ ಪೈ ಶಾಲೆಯ ಬಡ ವಿದ್ಯಾರ್ಥಿಗಳಿಗೆ ರೂ. 30000 ಹಣವನ್ನು ಶಾಲೆಗೆ  ನೀಡಿದರು. ಅಲ್ಲದೆ ಮಾತೃ ಸೇವಾ ಸಂಸ್ಥೆ ಯ ಜೊತೆಗೂಡಿ ಮರುಬಳಕೆ ಮಾಡಲು ಬರುವಂಥ ಇಂಗ್ಲಿಷ್, ಹಿಂದಿ, ಕನ್ನಡ ಅಕ್ಷರ ಮಾಲೆ ಪುಸ್ತಕ ಮತ್ತು ಪೆನ್ ಗಳನ್ನೂ ಬಾಲವಾಡಿಯ 30 ವಿದ್ಯಾರ್ಥಿಗಳಿಗೆ ವಿತರಿಸಿದರು.   

ಅದೇ ದಿನ ಶಾಲೆಯಲ್ಲಿ ಸಾವಿತ್ರಿಬಾಯಿ ಫುಲೆ ಜಯಂತಿಯನ್ನು ಆಚರಿಸಲಾಯಿತು. ಮುಖ್ಯೋಪಾಧ್ಯಾಯರಾದ ರಾಧಿಕಾ ನಾಯಿಕ್ ಅವರು ಸಾವಿತ್ರಿಬಾಯಿ ಸ್ತ್ರೀ ಸ್ವಾತಂತ್ರ್ಯಕ್ಕಾಗಿ ಹೋರಾಟ ಹಾಗೂ ಆಗಿನ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಬೇಕು, ಸಮಾಜ ಇದನ್ನು ಪ್ರೋತ್ಸಾಹಿಸಬೇಕೆಂಬ ಪುಲೆಯವರ ವಿಚಾರಗಳ ಕುರಿತು ಹೇಳಿದರು.   

ಈ ಸಂದರ್ಭದಲ್ಲಿ ಪ್ರಯತ್ನ ಸಂಘಟನೆಯ ಅಧ್ಯಕ್ಷ ಶಾಂತಾ ಆಚಾರ್ಯ ಅವರು ಸಂಘಟನೆಯು ನಡೆದು ಬಂದ ದಾರಿಯನ್ನು ತಿಳಿಸಿದರು. ಎಲ್ಲ ಮಕ್ಕಳಿಗೆ ತಿಂಡಿಯನ್ನೂ ಹಂಚಿದರು. ಶಾಲೆಯ ಮುಖ್ಯೋಪಾಧ್ಯಾಯರಾದ ರಾಧಿಕಾ ನಾಯಿಕ್, ಶಾಲೆಯ ಶಿಕ್ಷಕ ವೃಂದದವರು ಹಾಗು ಮಾತೃ ಸೇವಾ ಸಂಸ್ಥೆಯ ಸದಸ್ಯರು ಮತ್ತು ಸಂಘಟನೆಯ  ಸದಸ್ಯೆಯರಾದ ಬೀನಾ, ಶೋಭಾ, ವೀಣಾ, ಶ್ವೇತಾ, ಸುನೀತಾ, ಸುಮಾ, ಪದ್ಮ ಮೊದಲಾದವರು ಉಪಸ್ಥಿತರಿದ್ದರು.