ಸಿಬ್ಬಂದಿಗಳು ಪ್ರಧಾನ ಮಂತ್ರಿ ಜೀವನ ಜ್ಯೋತಿ ಯೋಜನೆ ಹಾಗೂ ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ ಕಡ್ಡಾಯ
ಮಾಂಜರಿ 09 : ಚಿಕ್ಕೋಡಿ ತಾಲೂಕಿನ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಪ್ರಧಾನ ಮಂತ್ರಿ ಜೀವನ ಜ್ಯೋತಿ ಯೋಜನೆ ಹಾಗೂ ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ ಕಡ್ಡಾಯವಾಗಿ ಮಾಡಿಸಬೇಕೆಂದು ಉಪವಿಭಾಗಾಧಿಕಾರಿಗಳಾದ ಸುಭಾಷ ಸಂಪಗಾಂವಿ ಹೇಳಿದರುಬುಧವಾರ ತಾಲೂಕ ಪಂಚಾಯತ ಸಭಾ ಭವನದಲ್ಲಿ ಪ್ರಧಾನ ಮಂತ್ರಿ ಜೀವನ ಜ್ಯೋತಿ ಯೋಜನೆ ಹಾಗೂ ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು ಪ್ರಧಾನ ಮಂತ್ರಿ ಜೀವನ ಜ್ಯೋತಿ ಯೋಜನೆ ಯಾವುದೇ ಕಾರಣದಿಂದ ಮರಣ ಹೊಂದಿದರೆ ಜೀವ ವಿಮಾ ರಕ್ಷಣೆಯಾಗಿದೆ ಇದು ಒಂದು ವರ್ಷದ ವಿಮಾ ಆಗಿದ್ದು ಇದನ್ನು ವರ್ಷದಿಂದ ವರ್ಷಕ್ಕೆ ನವಿಕರಿಸಬಹುದಾಗಿದೆ. 18 ರಿಂದ 50 ವರ್ಷ ವಯಸ್ಸಿನವರು ವಿಮಾ ರಕ್ಷಣೆಯನ್ನು ಮಾಡಬಹುದು ಹಾಗೂ ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆಯು ಅಪಘಾತವಾಗಿ ಮರಣ ಅಥವಾ ಅಂಗವೈಕಲ್ಯಕ್ಕೆ ರಕ್ಷಣೆಯನ್ನು ನಿಡುತ್ತದೆ ಎಂದು ಹೇಳಿದ್ದರುಬ್ಯಾಂಕ ಲೀಡ್ ಡಿಸ್ಟಿಕ್ ಮ್ಯಾನೇಜರ್ ಪ್ರಶಾಂತ ಗೋಡಕೆ ಮಾತನಾಡಿ ಪ್ರಧಾನ ಮಂತ್ರಿ ಜೀವನ ಜ್ಯೋತಿ ಯೋಜನೆಯು ವಾರ್ಷಿಕ ಪ್ರೀಮಿಯಂ ಪಾವತಿ 436 ರೂ ತುಂಬಿದರೆ ಒಂದು ವರ್ಷದವರೆಗೆ ಮಾನ್ಯವಾಗಿರುತ್ತದೆ ಹಾಗೂ ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ ವಾರ್ಷಿಕ ಪ್ರೀಮಿಯಂ ಪಾವತಿ 20 ರೂ ತುಂಬಿದರೆ ಒಂದು ವರ್ಷದವರೆಗೆ ಮಾನ್ಯವಾಗಿರುತ್ತದೆ ಹಾಗೂ ಸೈಬರ ಕ್ರೈಮದಿಂದ ಎಲ್ಲರೂ ಎಚ್ಚರಿಕೆದಿಂದ ಇರಬೇಕೆಂದು ಹೇಳಿದರು. ಹಾಗೂ ತಾಲೂಕ ಪಂಚಾಯತ ಕಾರ್ಯಾಲಯದಿಂದ ಜಾಥಾ ಪ್ರಾರಂಭವಾಗಿ ಬಸವೇಶ್ವರ ಸರ್ಕಲದವರೆಗೆ ಹಮ್ಮಿಕೊಳ್ಳಲಾಯಿತುಈ ಸಂದರ್ಭದಲ್ಲಿ ಸಹಾಯಕ ನಿರ್ಧೇಶಕರಾದ ಶಿವಾನಂಧ ಶಿರಗಾಂವೆ, ಸಹಾಯಕ ಲೆಕ್ಕಾಧಿಕಾರಿಯಾದ ರಾಜೇಂದ್ರ ಮೈಗೂರ ವ್ಯವಸ್ಥಾಪಕರಾದ ಉದಯಗೌಡ ಪಾಟೀಲ್ ಸಿಡಿಪಿಓ ಸಂತೋಷ ಕಾಂಬಳೆ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ಧೇಶಕರಾದ ಅರ್ಚನಾ ಸಾನೆ ,ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬಿ ಎ ಮೇಕನಮರಡಿ ಅನುಷ್ಠಾನ ಇಲಾಖೆಯ ಅಧಿಕಾರಿಗಳು, ತಾಲೂಕ ಪಂಚಾಯತ ಐ.ಇ.ಸಿ ಸಂಯೋಜಕರ ರಂಜೀತ ಕಾರ್ಣಿಕ, ಎಮ. ಐ. ಎಸ ಸಂಯೋಜಕ ಚೇತನ ಶಿರಹಟ್ಟಿ ಆಡಳಿತ ಸಹಾಯಕ ಅಕ್ಷಯ ಠಕ್ಕಪ್ಪಗೋಳ , ಅಂಗನವಾಡಿ ಕಾರ್ಯಕರ್ತರು, ನರೇಗಾ ಸಿಬ್ಬಂದಿಗಳು ಉಪಸ್ಥಿತರಿದ್ದರು.