ಭೂ ದಾಖಲೆಗಳ ಗಣಕೀಕರಣ ಕಾರ್ಯ ಜಿಲ್ಲೆಯಲ್ಲಿ ಸರಿಯಾಗಿ ಮಾಡಿ- ಸಚಿವ ಶಿವರಾಜ ಎಸ್‌. ತಂಗಡಗಿ

Computerization of land records should be done properly in the district - Minister Shivraj S. Take i

ಭೂ ದಾಖಲೆಗಳ ಗಣಕೀಕರಣ ಕಾರ್ಯ ಜಿಲ್ಲೆಯಲ್ಲಿ  ಸರಿಯಾಗಿ ಮಾಡಿ- ಸಚಿವ ಶಿವರಾಜ ಎಸ್‌. ತಂಗಡಗಿ 

ಕೊಪ್ಪಳ 08: ಭೂ ದಾಖಲೆಗಳ ಗಣಕೀಕರಣ ಕಾರ್ಯ ಕೊಪ್ಪಳ ಜಿಲ್ಲೆಯಲ್ಲಿ ಸರಿಯಾಗಿ ಮಾಡಿ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ಎಸ್‌. ತಂಗಡಗಿ ಹೇಳಿದರು. 

ಅವರು ಬುಧವಾರ ಬೆಂಗಳೂರಿನ ತಮ್ಮ ಕಛೇರಿಯಿಂದ ಗೂಗಲ್ ಮೀಟ್ ಮೂಲಕ ಭೂ ಸುರಕ್ಷಾ ಯೋಜನೆ ಅಡಿ ಕೊಪ್ಪಳ ಜಿಲ್ಲೆಯ ಎಲ್ಲಾ ತಾಲೂಕಿನ ಭೂ ದಾಖಲೆಗಳ ಗಣಕೀಕರಣ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು. 

ಜಿಲ್ಲೆಯ ಎಲ್ಲಾ ತಾಲ್ಲೂಕಿನಲ್ಲಿ ಭೂ ದಾಖಲೆಗಳ ಗಣಕೀಕರಣ ಸರಿಯಾಗಿ ನಡೆಯಬೇಕು. ವಿಶೇಷವಾಗಿ ನೀರಾವರಿ ಭಾಗದಲ್ಲಿ ಇವುಗಳ  ಸಮಸ್ಯೆಗಳು ಹೆಚ್ಚಾಗಿ ಕಂಡು ಬರುತ್ತವೆ. ತಾಲ್ಲೂಕು ಕಛೇರಿ. ಸರ್ವೆ ಮತ್ತು ನೊಂದಣಿ ಇಲಾಖೆಗಳ ಎಲ್ಲಾ ಭೂ ದಾಖಲೆಗಳ ಡಿಜಿಟಲೀಕರಣದಿಂದ ಹಳೆಯ ದಾಖಲಾತಿಗಳ ಸಂರಕ್ಷಣೆ ಮಾಡಲು ಅನುಕೂಲವಾಗುತ್ತದೆ  ಎಂದರು. 

ಇದರಿಂದ ಹಳೆಯ ದಾಖಲೆಗಳ ಸಂರಕ್ಷಣೆ ಹಾಗೂ ಕಳುವಾಗಲು. ತಿದ್ದಲು ಅಸಾಧ್ಯ. ನೇರವಾಗಿ ಡಿಜಿಟಲ್ ಮಾಧ್ಯಮ ಮೂಲಕ ಭೂ ದಾಖಲೆ ಪಡೆದುಕೊಳ್ಳುವ ಸೌಲಭ್ಯ ಜನರಿಗೆ ಇರಲಿದೆ. ವಿಳಂಬ. ಅಡೆ ತಡೆಗಳನ್ನು ಆಲಿಸಿ. ತ್ವರಿತ ಆಡಳಿತ ಸೇವೆಯನ್ನು ಜನರಿಗೆ ಒದಗಿಸುವುದು ಇದರ ಉದ್ದೇಶವಾಗಿದೆ. ಕೊಪ್ಪಳ ಕಾರಟಗಿಯಲ್ಲಿ ಮೊದಲಿಗೆ ಪಾಯಲೇಟ ಬೇಸ ಮಾಡಿರುವುದು ಯಶಸ್ವಿಯಾಗಿದೆ ಅಲ್ಲಿ ಚೆನ್ನಾಗಿ ಮಾಡುತ್ತಿದ್ದಾರೆ ಅದರಂತೆ ಜಿಲ್ಲೆಯ ಎಲ್ಲಾ ತಾಲ್ಲೂಕಿನಲ್ಲಿ ಈ ಕೆಲಸ ನಡೆಯಬೇಕೆಂದು  ಹೇಳಿದರು. 

ಕೊಪ್ಪಳ ತಹಶಿಲ್ದಾರ ಕಛೇರಿಯಿಂದ ಭೂ ದಾಖಲೆಗಳ ಗಣಕೀಕರಣಕ್ಕೆ ಥಂಬ್ ನೀಡಿದ ನಂತರ ಜಿಲ್ಲಾಧಿಕಾರಿ ನಲಿನ್ ಅತುಲ್ ಅವರು ಜಿಲ್ಲೆಯ ಎಲ್ಲಾ ತಾಲ್ಲೂಕಿನಲ್ಲಿ ಭೂ ದಾಖಲೆಗಳ ಗಣಕೀಕರಣ ನಡೆಯುತ್ತಿದೆ. 3 ಲಕ್ಷ್ಯಕಿಂತ ಹೆಚ್ಚಿನ ಫೈಲುಗಳು ಆಗುತ್ತವೆ. ಆನಲೈನ ಮೂಲಕ ಭೂ ದಾಖಲೆಗಳ ಡಿಜಿಟಲೀಕರಣ ಮಾಡಲಾಗುತ್ತಿದೆ. ಭೂ ದಾಖಲೆಗಳ ಗಣಕೀಕರಣಕ್ಕೆ ಸಮಸ್ಯೆಗಳಾಗದಂತೆ ಪ್ರತಿ ತಾಲೂಕಿನಲ್ಲಿ 6 ಜನ ಆಪರೇಟರ. 3 ಸ್ಕ್ಯಾನರ. ಯುಪಿಎಸ್ ಸೇರಿದಂತೆ ಇತರೆ ಗಣಕೀಕರಣಕ್ಕೆ ಬೇಕಾಗುವ ಎಲ್ಲಾ ಉಪಕರಣಗಳನ್ನು ನೀಡಲಾಗಿದೆ. ಈ ಕಾರ್ಯ ರಾಜ್ಯದ ಎಲ್ಲಾ ಕಡೆಯು ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದರು. 

ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ. ಕೊಪ್ಪಳ ತಹಶಿಲ್ದಾರ ವಿಠಲ ಚೌಗಲಾ. ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಕೃಷ್ಣಮೂರ್ತಿ ದೇಸಾಯಿ. ಜಿಲ್ಲಾ ಎಲ್ಲಾ ತಾಲೂಕಿನ ತಹಶಿಲ್ದಾರರು. ಉಪ ತಹಶಿಲ್ದಾರರು. ಭೂ ದಾಖಲೆಗಳ ಗಣಕೀಕರಣ ಸಿಬ್ಬಂದಿಗಳು ಸೇರಿದಂತೆ ಇತರರು ಗೂಗಲ್ ಮೀಟ್ ಮೂಲಕ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.