ಶಿಗ್ಗಾವಿ : ತಾಲೂಕಿನ ಗುತ್ತಿಗೆದಾರರು, ಸಮಾಜ ಸೇವಕರು ಹಾಗೂ ಬನ್ನೂರಿನ ಭಾರತ ಸೇವಾ ಸಂಸ್ಥೆ ಅದ್ಯಕ್ಷರೂ ಆಗಿರುವ ಶ್ರೀಕಾಂತ ದುಂಡಿಗೌಡ್ರ ಅವರ 38 ನೇ ಜನ್ಮ ದಿನದ ಅಂಗವಾಗಿ ಅವರ ಅಭಿಮಾನಿ ಬಳಗದ ವತಿಯಿಂದ ಅವರ ಕಛೇರಿಯಲ್ಲಿ ಪತ್ರಿಕಾ ದಿನಾಚರಣೆ ಹಾಗೂ ವೈದ್ಯರ ದಿನಾಚರಣೆಯ ಪ್ರಯುಕ್ತ ತಾಲೂಕಿನ ವರದಿಗಾರರನ್ನ ಮತ್ತು ವೈದ್ಯರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ರಾಜಕೀಯ ಮುಖಂಡರು, ಸಮಾಜ ಸೇವಕರು, ಜನಪ್ರತಿನಿಧಿಗಳು, ಗುತ್ತಿಗೆದಾರರು ಸೇರಿದಂತೆ ವಿವಿಧ ಸಮಾಜದ ಮುಖಂಡರು ಅವರ ಅಭಿಮಾನಿಗಳು ಇದ್ದರು.