ಲೋಕದರ್ಶನ ವರದಿ
ವಿಜಯಪುರ 04: ರಾಮಾಯಣ ಮಹಾಕಾವ್ಯವನ್ನು ರಚಿಸಿದ ಮಹಷರ್ಿ ವಾಲ್ಮೀಕಿ ಅವರನ್ನು ಇಂದು ಕೇವಲ ಒಂದು ಸಮಾಜಕ್ಕೆ ಸೀಮಿತಗೊಳಿಸುತ್ತಿರುವುದು ವಿಷಾದದ ಸಂಗತಿಯಾಗಿದೆ ಎಂದು ರಾಜ್ಯ ಪ್ರಶಸ್ತಿ ಪುರಸ್ಕೃತ ಉಪನ್ಯಾಸಕ ಮಹಾದೇವ ರಬಿನಾಳ ಹೇಳಿದರು.
ಬಬಲೇಶ್ವರ ತಾಲೂಕಿನ ಶಿರಬೂರ ಗ್ರಾಮದ ಲಕ್ಷ್ಮೀ ದೇವಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಆದಿಕವಿ ಮಹಷರ್ಿ ವಾಲ್ಮೀಕಿ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಆದಿಕವಿ ಮಹಷರ್ಿ ವಾಲ್ಮೀಕಿ ಅವರು ರಾಮಾಯಣ ಮಹಾಕಾವ್ಯದ ಮೂಲಕ ಪ್ರತಿಪಾದಿಸಿದ ಮೌಲ್ಯಗಳು, ಆದರ್ಶ ತತ್ವಗಳು, ವಿಚಾರಧಾರೆಗಳಿಂದ ಜಗತ್ತೇ ಪೂಜಿಸುವ ಆದರಣೀಯ ಪುರುಷರಾಗಿದ್ದಾರೆ ಎಂದರು. ಸಹಸ್ರಾರು ವರ್ಷಗಳಿಂದ ಹಿಂದುಗಳ ಬದುಕು ಚಿಂತನೆ ಮತ್ತು ಸಂಸ್ಕೃತಿಗಳ ಮೇಲೆ ಗಾಢ ಪ್ರಭಾವ ಬೀರಿದ ಪವಿತ್ರ ಗ್ರಂಥವೇ ರಾಮಾಯಣ. ಮನುಕುಲ ಒಳಿತಿಗೆ ರಾಮಾಯಣ ಶ್ರೇಷ್ಠ ಗ್ರಂಥವಾಗಿದೆ ಎಂದರು.
ಉಪನ್ಯಾಸ ನೀಡಿದ ಸಾರವಾಡದ ಸ್ವಾಮಿ ವಿವೇಕಾನಂದ ಪ್ರೌಢ ಶಾಲೆಯ ಶಿಕ್ಷಕ ಡಿ.ಬಿ. ನಾಯಕ ರಾಮಾಯಣ ಮಹಾಕಾವ್ಯದ ಪ್ರತಿಯೊಂದು ಪಾತ್ರಗಳು ಒಂದೊಂದು ನೀತಿಕತೆಯನ್ನು ಹೇಳುತ್ತವೆ. ವಾಲ್ಮೀಕಿ ಸಮಾಜದಲ್ಲಿ ಅನೇಕ ದೇಶ ಭಕ್ತರು ಜನಿಸಿ ಈ ನಾಡಿಗೆ ಹಲವಾರು ಕೊಡುಗೆಗಳನ್ನು ನೀಡಿದ್ದಾರೆಂದರು.
ಅಖಿಲ ಭಾರತ ವಾಲ್ಮೀಕಿ ಸಮಾಜ ಸೇವಾ ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾಜರ್ುನ ಬಟಗಿ ಮಾತನಾಡಿ, ವಾಲ್ಮೀಕಿ ಸಮುದಾಯದವರು ಸರಕಾರದಸೌಲಭ್ಯಗಳನ್ನು ಪಡೆದುಕೊಂಡು ಆಥರ್ಿಕವಾಗಿ ಸ್ವಾವಲಂಬಿಗಳಾಗಿ ಬದುಕಬೇಕು. ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಪ್ರೊ.ಮಹಾದೇವ ರೆಬಿನಾಳ ಹಾಗೂ ನಂದಿ ಸಹಕಾರಿ ಸಕ್ಕರೆ ಕಾಖರ್ಾನೆಯ ಅಧ್ಯಕ್ಷ ಶಶಿಕಾಂತಗೌಡ ಪಾಟೀಲ ಮತ್ತು ನೌಕರ ಸಂಘದ ಬಬಲೇಶ್ವರ ತಾಲೂಕಾ ಘಟಕದ ಅಧ್ಯಕ್ಷ ಎಚ್.ಎಲ್. ಹಂಚನಾಳ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಶಂಕರಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯ ಮೇಲೆ ಮಲ್ಲಯ್ಯ ಹಿರೇಮಠ, ಸಚೀನ ಹಂಚಿನಾಳ, ಹಣಮಂತ ಜೋಗಿನ, ಪ್ರಕಾಶ ಬಡಿಗೇರ, ಲಕ್ಕಪ್ಪ ಬಡಿಗೇರ, ಮಂಜುನಾಥ ಬಡಿಗೇರ, ಯಮನಪ್ಪ ಹಂಚಿನಾಳ, ಕೃಷ್ಣಪ್ಪ ಬಡಿಗೇರ ಹಾಗೂ ವಾಲ್ಮೀಕಿ ಯುವಕ ಮಂಡಳದ ಪದಾಧಿಕಾರಿಗಳು ಮತ್ತು ಶಿರಬೂರ ಗ್ರಾಮದ ಸಮಸ್ತ ವಾಲ್ಮೀಕಿ ಬಂಧುಗಳು ಉಪಸ್ಥಿತರಿದ್ದರು. ಸಿದ್ದು ಬಡಿಗೇರ ನಿರೂಪಿಸಿದರು. ಶಾಸುಕುಮಾರ ನಾಯಕ ಸ್ವಾಗತಿಸಿದರು.