ಲೋಕದರ್ಶನ ವರದಿ
ಮುಧೋಳ 10: ಚುನಾವಣೆ ಸಮಯದಲ್ಲಿ ಮಾತ್ರ ರಾಜಕಾರಣ,ಅಭಿವೃದ್ಧಿ ವಿಷಯದಲ್ಲಿ ಎಲ್ಲರೂ ಸೇರಿ ಪಕ್ಷಾತೀತವಾಗಿ ಕೆಲಸ ಮಾಡೋಣ ಎಂದು ಶಾಸಕ ಗೋವಿಂದ ಕಾರಜೋಳ ಹೇಳಿದರು.
ನಗರದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು,ಎಲ್ಲ 31 ವಾಡರ್ಿನ ಸದಸ್ಯರು ತಮ್ಮ ತಮ್ಮ ವಾಡರ್ಿನ ಜನಪ್ರತಿನಿಧಿಗಳು ಆಗಿದ್ದು, ಅವರ ವಾಡರ್ಿನ ಸಮಸ್ಯೆ ಹಾಗೂ ಪರಿಹಾರಕ್ಕಾಗಿ ಮತ್ತು ಬೇಡಿಕೆಗೆ ಅನುಗುಣವಾಗಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.
ಸಮಸ್ಯೆಗಳ ಆಗರವಾಗಿದ್ದ ನಗರದಲ್ಲಿ ನಗರಸಭೆಯ 14ನೇ ಹಣಕಾಸು ಯೋಜನೆಯ ಅನುದಾನ ಹಾಗೂ 2018-19ನೇಎಸ್ಎಫ್ಸಿ ಯೋಜನೆಗಳ ಅಡಿಯಲ್ಲಿ ಕಡುಬಡವರ ಕಲ್ಯಾಣಕ್ಕಾಗಿ ಹಾಗೂ ವಿಕಲಚೇತನರ ಕಲ್ಯಾಣಕ್ಕಾಗಿ ಸಮರ್ಪಕವಾಗಿ ಬಳಕೆ ಮಾಡಿ ಎಲ್ಲ ನಗರಸಭೆ ಸದಸ್ಯರಿಗೆ ಸರಿಯಾಗಿ ಗೌರವಿಸ ಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಸುಮಾರು 5.87ಕೋಟಿ ರೂ.ಗಳ ವೆಚ್ಚದಲ್ಲಿ ವಿವಿಧ ಕಾಮಗಾರಿಗಳನ್ನು ನಗರಸಭೆ ವತಿಯಿಂದ ಕೈಗೊಂಡಿದ್ದು, ಇನ್ನೂ ಹೆಚ್ಚಿನ ಅನುದಾನ ದೊರೆತರೆ ಅಭಿವೃದ್ಧಿ ಕಾರ್ಯ ಪೂರ್ಣಗೊಳ್ಳಲಿದೆ. ನಗರದ ಒಟ್ಟು 31 ವಾಡರ್್ಗಳ ವಿವಿಧ ಕಾಮಗಾರಿಗಳಿಗಾಗಿ ಭೂಮಿ ಪೂಜೆ ನಡೆದಿದ್ದು,ಕಾಮಗಾರಿ ಯಶಸ್ವಿಯಾಗಿ ಪೂರ್ಣಗೊಂಡಾಗ ಮಾತ್ರ ನಾಗರಿಕರು ನಿಟ್ಟುಸಿರು ಬಿಡಲಿದ್ದಾರೆ.
ಕ್ಷೇತ್ರದಲ್ಲಿ ಅಭಿವೃದ್ಧಿ ಕುಂಠಿತಗೊಳ್ಳಲು ಕಾರಣವೇನು ಎಂಬ ಸುದ್ದಿಗಾರರ ಪ್ರಶ್ನೇಗೆ ಉತ್ತರಿಸಿದ ಶಾಸಕ ಗೋವಿಂದ ಕಾರಜೋಳ ಅವರು, 25 ವರ್ಷಗಳ ಹಿಂದೆ ತಾಲೂಕಿನಲ್ಲಿ ಕೇವಲ ಒಂದೇ ಒಂದು ಸಕ್ಕರೆ ಕಾಖರ್ಾನೆ ಇತ್ತು. ಇಂದು ಮುಧೋಳ ಕ್ಷೇತ್ರ ಸಕ್ಕರೆ,ಸಿಮೆಂಟ್ ಉದ್ದಿಮೆಯಲ್ಲಿ ರಾಷ್ಟ್ರದ ಗಮನ ಸೆಳೆದಿದೆ. ಇದು ಪ್ರಗತಿಯ ಸಂಕೇತ ಅಲ್ಲವೇ ಎಂದು ಉತ್ತರಿಸಿ,ರಾಜ್ಯದಲ್ಲಿ ಸಕರ್ಾರಗಳು ಬದಲಾಗುವುದರಿಂದ ಅಭಿವೃದ್ಧಿ ಸ್ವಲ್ಪ ಪ್ರಮಾಣದಲ್ಲಿ ಕುಂಠಿತ ಆಗಬಹುದು ಎಂದರು.
ಮುಧೋಳ ಜನತೆಯ ಬಹುದಿನಗಳ ಕನಸಾದ ಬೈ-ಪಾಸ್ ರಸ್ತೆಯ ಭೂ-ಸ್ವಾಧೀನ ಕಾರ್ಯ ಅಂತಿಮ ಹಂತದಲ್ಲದೆ. 50ಕೋಟಿ ರೂ.ವೆಚ್ಚದ ಈ ಬೃಹತ್ ಯೋಜನೆಗೆ ಮುಂದಿನ ಎರಡು ತಿಂಗಳಲ್ಲಿ ಟೆಂಡರ್ ಕರೆಯುವ ಸಾಧ್ಯತೆ ಇದೆ ಎಂದು ಹೇಳಿದರು. ತಾವು 2011-12ರಲ್ಲಿಯೇ ಬೈ-ಪಾಸ್ ರಸ್ತೆಯ ಯೋಜನೆಗಾಗಿ ಭೂ-ಸ್ವಾಧೀನ ಪಡಿಸಿಕೊಳ್ಳುವದಕ್ಕಾಗಿ ಹಣ ಕಟ್ಟಲಾಗಿತ್ತಾದರೂ ಹಿಂದಿನ ಸಕರ್ಾರ ಈ ವಿಷಯದಲ್ಲಿ ಸಹಕರಿಸಲೇ ಇಲ್ಲ. ಕಾಂಗ್ರೆಸ್ ಸಕರ್ಾರದ ಅಸಹಕಾರದಿಂದ ಬೈ-ಪಾಸ್ ರಸ್ತೆ ಯೋಜನೆ ಸಮಸ್ಯೆಯಾಗಿ ಉಳಿದಿದೆ ಕ್ಷೇತ್ರದಲ್ಲಿ ರಾಜಕೀಯ ಏನೇ ಇದ್ದರೂ ಅಭಿವೃದ್ಧಿ ಕಾರ್ಯದಲ್ಲಿ ಎಲ್ಲರೂ ಪಕ್ಷಾತೀತವಾಗಿ ಸಹಕರಿಸಬೇಕು ಎಂದು ಕಾರಜೋಳ ಹೇಳಿದರು.
ನಗರದ ವಿವಿಧ ವಾರ್ಡಗಳಲ್ಲಿ ನಗರಾಭಿವೃದ್ಧಿ ಕಾರ್ಯಗಳಿಗೆ ಭೂಮಿ ಪೂಜೆ ನಡೆಸಿದ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ಕೆ.ಆರ್.ಮಾಚಪ್ಪನ್ನವರ,ನಗರ ಬಿಜೆಪಿ ಅಧ್ಯಕ್ಷ ಗುರುರಾಜ ಕಟ್ಟಿ,ಕಲ್ಲಪ್ಪಣ್ಣ ಸಬರದ,ನಗರಸಭೆ ಮಾಜಿ ಸದಸ್ಯ ಸೋನಾಪ್ಪಿ ಕುಲಕಣರ್ಿ,ಕುಮಾರ ಹುಲಕುಂದ,ಪ್ರದೀಪ ನಿಂಬಾಳಕರ,ಶಬ್ಬೀರ ಮುಲ್ಲಾ,ಗಡ್ಡಿ,ಪೌರಾಯುಕ್ತ ರಮೇಶ ಜಾಧವ,ನಗರಸಭೆ ಸದಸ್ಯರಾದ ಸ್ವಾತಿ ಎಸ್.ಕುಲಕಣರ್ಿ,ವಿನೋದ ಕಲಾಲ,ಎಸ್.ಎಸ್.ರಜಪೂತ,ಸಂದೀಪ ಮಾನೆ,ಸುನೀಲ ನಿಂಬಾಳಕರ, ಲಮಾಣಿ,ಜೋಶಿ,ಶ್ರೀಮತಿ ಸಿಂಗಾಡಿ, ಶ್ರೀಮತಿ ಮಾನೆ ಮುಂತಾದವರು ಉಪಸ್ಥಿತರಿದ್ದರು.