ಮಾದಕ ವಸ್ತುಗಳ ಆಕರ್ಷಣೆಗೆ ಒಳಗಾಗಬೇಡಿ: ನ್ಯಾ. ಜಿ.ಎಸ್.ಸಂಗ್ರೇಶಿ


ಗದಗ 25: ಇತ್ತೀಚಿನ ದಿನಗಳಲ್ಲಿ ನಾನಾ ರೀತಿಯ ವ್ಯಸನಿಗಳಿಗೆ ಒಳಗಾಗುವ ಜನರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ.   ಮುಖ್ಯವಾಗಿ ವಿದ್ಯಾಥರ್ಿಗಳು, ಪ್ರೌಢ ವಯಸ್ಕರು ಸಿಗರೇಟ, ಗಾಂಜಾ, ಮಧ್ಯ ಸೇವನೆಯಂತಹ ಮಾದಕ ವಸ್ತುಗಳ ಆಕರ್ಷಣೆಗೆ ಒಳಗಾಗಿ ತಮ್ಮ ಆರೋಗ್ಯ ಹಾಳು ಮಾಡಿಕೊಳ್ಳುವುದಲ್ಲದೇ ಪಾಲಕರಿಗೆ ಹೊರೆಯಾಗಿ, ಸಮಾಜಕ್ಕೆ ಬೇಡವಾಗಿ ಮಾನಸಿಕವಾಗಿ ಹಿಂಸೆ ಅನುಭವಿಸುತ್ತಿದ್ದಾರೆ. ಕಾರಣ ಮಾದಕ ವಸ್ತುಗಳ ದುರಪಯೋಗ ಮತ್ತು ಕಾನೂನು ಬಾಹಿರ ಸಾಗಾಟ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಮುಖ್ಯವಾಗಿ ಯುವ ಜನರಿಗೆ ಈ ಬಗ್ಗೆ ಪ್ರಾತ್ಯಕ್ಷಿಕೆಯ ಮೂಲಕ ಜಾಗೃತಿ ಮೂಡಿಸುವುದು ಅವಶ್ಯವಿದುದ್ದರಿಂದ ಇಂದು ಈ ಕಾಲೇಜಿನಲ್ಲಿ ಮಾದಕ ವಸ್ತುಗಳ ದುರುಪಯೋಗ ಕುರಿತು ಕಾನೂನು ಕಾಯರ್ಾಗಾರ ಏರ್ಪಡಿಸಿದೆ. ವಿಶ್ವ ಮಾದಕ ವರದಿ ಪ್ರಕಾರ ಜಗತ್ತಿನಾದ್ಯಾಂತ ಪ್ರತಿ 20 ಜನರಲ್ಲಿ ಒಬ್ಬರು ಯಾವುದಾದರೊಂದು ಮಾದಕ ವಸ್ತುಗಳ ದಾಸರಾಗಿದ್ದಾರೆ. ಕಾರಣ ಇಂತಹ ಒಳ್ಳೇಯ ಪರಿಸರದಲ್ಲಿ ಅಭ್ಯಾಸ ಮಾಡುವ ತಾವುಗಳು ಮಾದಕ ವಸ್ತುಗಳ ಉಪಯೋಗದಿಂದ ದೇಹದ ಮೇಲೆ ಆಗುವ ಪರಿಣಾಮಗಳ ಬಗ್ಗೆ ತಮ್ಮ ಸ್ನೇಹಿತರಿಗೆ ಅಕ್ಕಪಕ್ಕದವರಿಗೆ ಮಾದಕ ವಸ್ತುಗಳ ದುರುಪಯೋಗಗಳ ಜಾಗೃತಿ ಮೂಡಿಸಿ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷರಾದ ಜಿ.ಎಸ್.ಸಂಗ್ರೇಶಿಯವರು ನುಡಿದರು. 

ಅವರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಬಿಪಿನ್- ವಿನಯ ಚಿಕ್ಕಟ್ಟಿ ಪಿ.ಯು. ಕಾಲೇಜ, ಗದಗ ಇವರ ಸಂಯುಕ್ತಾಶ್ರಯದಲ್ಲಿ ಚಿಕ್ಕಟ್ಟಿ ಕಾಲೇಜಿನಲ್ಲಿ ಕಾಲೇಜು ವಿದ್ಯಾಥರ್ಿಗಳಿಗಾಗಿ ಅಂತರ್ ರಾಷ್ಟ್ರೀಯ ಮಾದಕ ದುರುಪಯೋಗ ಮತ್ತು ಕಾನೂನು ಬಾಹಿರ ಸಾಗಾಟ ವಿರೋಧಿ, ರಾಷ್ಟ್ರ ನಿಮರ್ಾಣದಲ್ಲಿ ಯುವಕರ ಪಾತ್ರ ಹಾಗೂ ರ್ಯಾಗಿಂಗ್ ನಿಷೇಧ ಕುರಿತು ಏರ್ಪಡಿಸಿದ್ದ ಕಾನೂನು ಕಾರ್ಯಗಾರವನ್ನು ಜಿಲ್ಲಾ ನ್ಯಾಯಾಧೀಶರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದಶರ್ಿಗಳಾದ. ರೇಣುಕಾ ಜಿ. ಕುಲಕಣರ್ಿ ಆಗಮಿಸಿ ಕಾನೂನು ಸೇವಾ ಪ್ರಾಧಿಕಾರದ ಧೇಯೋದ್ದೇಶಗಳ ಕುರಿತು ಮಾತನಾಡಿದರು. 

ಉಪನ್ಯಾಸಕರಾಗಿ ಆಗಮಿಸಿದ್ದ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗದ ಮನೋವೈದ್ಯರಾದ ಡಾ:ವೈಶಾಲಿ ಹೆಗಡೆ ಅವರು ಅಂತರ್ ರಾಷ್ಟ್ರೀಯ ಮಾದಕ ವಸ್ತುಗಳ ದುರುಪಯೋಗ ಮತ್ತು ಕಾನೂನು ಬಾಹಿರ ಸಾಗಾಟ ವಿರೋಧಿ ಕುರಿತು ಉಪನ್ಯಾಸ ನೀಡಿ ಭಾರತದಲ್ಲಿ 7.32 ಕೋಟಿ ಜನ ಮದ್ಯ ಮತ್ತು ಮಾದಕ ವಸ್ತುಗಳ ವ್ಯಸನಿಗಳಿದ್ದಾರೆ. ಇನ್ನೋರ್ವ ಉಪನ್ಯಾಸಕರಾದ ಯುವ ನ್ಯಾಯವಾದಿ ಸಿ.ಎಸ್.ಶೆಟ್ಟರ ಅವರು ರಾಷ್ಟ್ರ ನಿಮರ್ಾಣದಲ್ಲಿ ಯುವಕರ ಪಾತ್ರ ಹಾಗೂ ರ್ಯಾಗಿಂಗ್ ನಿಷೇಧ ಕುರಿತು ಉಪನ್ಯಾಸ ನೀಡಿ ವಿದ್ಯಾಥರ್ಿಗಳು ಜೀವನದಲ್ಲಿ ಯಾವ ರೀತಿ ಬದುಕು ಸಾಗಿಸಬೇಕು,  ದೇಶಕ್ಕೆ ನಮ್ಮ ಕೊಡುಗೆ ಏನು, ಮತ್ತೊಬ್ಬರ ಹಕ್ಕಿಗೆ ಚ್ಯುತಿ,  ಬರದಂತೆ ಜೀವನ ಸಾಗಿಸಬೇಕು, ಪಾಲಕರಿಗೆ, ಶಿಕ್ಷಕರಿಗೆ ಗೌರವ ತರುವ ದಿಸೆಯಲ್ಲಿ ವಿದ್ಯಾಥರ್ಿ ಜೀವನ ಸಾಗಿಸಬೇಕು, ರಾಷ್ಟ್ರ ನಿಮರ್ಾಣದಲ್ಲಿ ಯುವ ಜನತೆ ಪಾಲ್ಗೊಳ್ಳುವ ಮೂಲಕ ಉತ್ತಮ ಸಮಾಜ ನಿಮರ್ಾಣಕ್ಕೆ ಮಾದರಿಯಾಗಬೇಕು ಎಂದು ಉಪನ್ಯಾಸ ನೀಡಿದರು.  

ಸಮಾರಂಭದಲ್ಲಿ ಪ್ರೊ:ವಿನಯ ಚಿಕ್ಕಟ್ಟಿ, ಪ್ರೊ:ಎಲ್.ಡಿ.ಮೇಹರವಾಡೆ ವೇದಿಕೆ ಮೇಲೆ ಉಪಸ್ಥಿತರಿದ್ದರು.   ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಭಾರತೀಯ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿಗಳಾದ ಪ್ರೊ:ಕೆ.ಎಚ್.ಬೇಲೂರ ಅಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾಥರ್ಿಗಳು ತೆಲೆ ತಗ್ಗಿಸಿ ಓದಿದರೆ ಮಾತ್ರ ತೆಲೆ ಎತ್ತಿ ನಡೆಯಲು ಸಾಧ್ಯ ಎಂದು ಡಾ: ಅಂಬೇಡ್ಕರ ರವರ ಜೀವನ ಎಲ್ಲರಿಗೂ ಮಾರ್ಗದರ್ಶಕವಾಗಿದೆ ಎಂದು ನುಡಿದರು.  ಪ್ರಾರಂಭದಲ್ಲಿ ಕು:ಪ್ರತಿಭಾ ಹಾಗೂ ಸಂಗಡಿಗರು ಪ್ರಾಥರ್ಿಸಿದರು.  ಕು:ರೋಷಿಣಿ ಮುಲ್ಲಾನವರು ಸ್ವಾಗತಿಸಿದರು.  ಚಿಕ್ಕಟ್ಟಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಪ್ರೊ:ಎಸ್.ವಾ.ಚಿಕ್ಕಟ್ಟಿಯವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ: ಎಚ್.ಎಸ್.ದಳವಾಯಿ ಕಾರ್ಯಕ್ರಮವನ್ನು ನಿರೂಪಿಸಿದರು.  ದೀಪಿಕಾ ವಾರಕರ ವಂದಿಸಿದರು.