ಆನೆಗಳಿಗೆ ತೊಂದರೆ ನೀಡಬೇಡಿ ಡಿಎಫ್ಒ ಆರ್.ಜಿ.ಭಟ್ಟ

ಲೋಕದರ್ಶನ ವರದಿ

ಮುಂಡಗೋಡ 17: ತಾಲೂಕಿನಲ್ಲಿ ಆನೆದಾಳಿಯಿಂದ ರೈತಕಂಗಾಲಾಗಿದ್ದು ಒಂದರ ಮೇಲೊಂದರಂತೆ ಆನೆಗಳು ವಿವಿಧಡೆ ದಾಳಿ ನಡೆಸುತ್ತಾ ಇವೆ.

ಇಂದು ಚೌಡಳ್ಳಿ ಅರಣ್ಯ  ಉಪವಲಯದ ಕರವಳ್ಳಿ ಹಾಗೂ ತೆಗಿನಕೊಪ್ಪ ಗ್ರಾಮದ ಹೊಲ ಗದ್ದೆ ತೋಟಗಳಿಗೆ ದಾಳಿ ನಡೆಸಿ ಅಪಾರ ನಷ್ಟವುಂಟು ಮಾಡಿವೆ.

  ಆನೆದಾಳಿಯಿಂದ ಹೊಲಗದ್ದೆಗಳಲ್ಲಿಯ ಭತ್ತ ಹಾಗೂ ಬಾಳೆ ಅಡಿಕೆ ತೋಟಗಳ ಬೆಳೆಗಳು ನಾಶವಾಗಿದ್ದು ಸ್ಥಳಕ್ಕೆ ಯಲ್ಲಾಪುರ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ಆರ್.ಜಿ.ಭಟ್ಟ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮಕೈಗೊಳ್ಳಲು ಆರ್ ಎಫ್ ಒ ಸುರೇಶ ಕುಲ್ಲೋಳ್ಳಿ ಅವರಿಗೆ ಸೂಚಿಸಿ ಹಾಗೂ ಬೆಳೆ ನಾಶದ ಕುರಿತು ರೈತ ಚಿಂತೆ ಮಾಡುವುದು ಬೇಡ ಸರಕಾರದಿಂದ ಆದಷ್ಟು ಬೇಗ  ಪರಿಹಾರ ಕೊಡಿಸಲಾಗುವುದು  ಆನೆಗಳಿಗೆ ಯಾವುದೆ ರೀತಿಯಿಂದ ತೊಂದರೆ ನೀಡಬೇಡಿ ಹಾಗೂ ಆನೆ ದಾಳಿ ನಡೆದರೆ ತಕ್ಷಣ ಇಲಾಖೆಗೆ ತಿಳಿಸಿ ಎಂದು ರೈತರಿಗೆ ತಿಳಿಸಿದ್ದಾರ

ಚೌಡಳ್ಳಿ ಉಪವಲಯದ ಕರವಳ್ಳಿ ತೆಗ್ಗಿನಕೊಪ್ಪ ಗ್ರಾಮದ ಸವರ್ೇನಂ 6/1 ನಿಂಗಪ್ಪ ತಿಪ್ಪಣ ಕೋಣನಕೇರಿಯವರಿಗೆ ಸೇರಿದ 111ಬಾಳೆ, ಅಡಿಕೆ 39 ಹಾಗೂ ಬತ್ತ, ಸವೇನಂ 6/2 ಅಜ್ಜಪ್ಪ ಶಿವಪ್ಪ ಮತ್ತಿಗಟ್ಟಿ ಯವರಿಗೆ ಸೇರಿದ 109 ಬಾಳೆಗಿಡ 22 ಅಡಿಕೆಗಿಡ ಹಾಗೂ ಬತ್ತ ಆನೆಗಳು ದಾಳಿ ನಡೆಸಿ ರೈತನ ಬೆಳೆಗಳನ್ನು ನಾಶಪಡಿಸಿವೆ ಇದರಿಂದ ರೈತ ಕಂಗಲಾಗಿದ್ದು. ರೈತನು ಅಧಿಕಾರಿಗಳಿಗೆ ಸಮರ್ಪಕವಾದ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾನೆ