ಹಾವೇರಿ17: ರಾಷ್ಟ್ರೀಯ ವೃತ್ತಿಸೇವಾ ಯೋಜನೆಯಡಿ ಜನವರಿ 25 ರಂದು ಬೆಳಿಗ್ಗೆ 10 ಗಂಟೆಯಿಂದ ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣ ಆವರಣದಲ್ಲಿರುವ ಮುನ್ಸಿಪಲ್ ಹೈಸ್ಕೂಲ್ ಆವರಣದಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳವನ್ನು ಆಯೋಜಿಸಿದ್ದು, ನಿರುದ್ಯೋಗಿ ಯುವಕರು ಉದ್ಯೋಗ ಮೇಳದ ಸದುಪಯೋಗ ಪಡೆಸಿಕೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದ್ದಾರೆ.
ಹಾವೇರಿ ಜಿಲ್ಲಾಡಳಿತ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಜಿಲ್ಲಾ ನಗರಾಭಿವೃದ್ಧಿ ಹಾಗೂ ನಗರಸಭೆ ಇವರುಗಳ ಸಹಯೋಗದಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳ ನಡೆಯಲಿದ್ದು, ಉದ್ಯೋಗಾತ ಕಂಪನಿಗಳಿಗೆ ತಮಗೆ ಬೇಕಾದ ಅರ್ಹ ಅಭ್ಯಥರ್ಿಗಳನ್ನು ನೇಮಕಾತಿಮಾಡಿಕೊಳ್ಳಲು ವಿವಿಧ ವಿದ್ಯಾರ್ಹತೆ, ತರಬೇತಿ ಪಡೆದ ಅಭ್ಯಥರ್ಿಗಳಿಗೆ ಆಯ್ಕೆಮಾಡಿಕೊಳ್ಳಲು ಹಾಗೂ ನಿರುದ್ಯೋಗಿಗಳಿಗೆ ಉದ್ಯೋಗವಕಾಶ ವೇದಿಕೆ ಒದಗಿಸಿಕೊಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಉದ್ಯೋಗ ಮೇಳದಲ್ಲಿ ಕನಿಷ್ಠ ವಿದ್ಯಾರ್ಹತೆಯಿಂದ ಎಸ್.ಎಸ್.ಎಲ್.ಸಿ, ಪಿ.ಯು.ಸಿ., ಐ.ಟಿ.ಐ., ಡಿಪ್ಲೋಮಾ ಹಾಗೂ ವೃತ್ತಿ ಪರ ಕೋಸರ್್ಗಳು, ಪದವಿ, ಸ್ನಾತಕೋತ್ತರ ಪದವಿ ಹಾಗೂ ಇತರೆ ಯಾವುದೇ ವಿದ್ಯಾರ್ಹತೆ ಹಾಗೂ ಕೌಶಲ್ಯ ಹೊಂದಿರುವ ಅಭ್ಯಥರ್ಿಗಳು ಭಾಗವಹಿಸಿ ತಮ್ಮ ಆಯ್ಕೆ ಹಾಗೂ ಇಚ್ಛಾನುಸಾರ ಉದ್ಯೋಗಾವಕಾಶವನ್ನು ಪಡೆಯಲು ತಿಳಿಸಿದೆ.
ಸದರಿ ಮೇಳದಲ್ಲಿ 20ಕ್ಕೂ ಹೆಚ್ಚು ಉದ್ಯೋಗ ನೀಡುವ ಕಂಪನಿಗಳು ಭಾಗವಹಿಸಲಿವೆ ಹಾಗೂ ಒಂದು ಸಾವಿರಕ್ಕೂ ಅಧಿಕ ನಿರುದ್ಯೋಗಿಗಳು ಆಗಮಿಸುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದ್ದಾರೆ.