ಪಿಕೆಪಿಎಸ್ ಅಧ್ಯಕ್ಷರಾಗಿ ಬಸನಗೌಡ, ಉಪಾಧ್ಯಕ್ಷರಾಗಿ ದಾವಲಸಾ ಅವಿರೋಧ ಆಯ್ಕೆ

Basanagowda as PKPS president, Davalasa as vice president elected unopposed

ತಾಳಿಕೋಟಿ, 24; ತಾಲೂಕಿನ ಬೆಕಿನಾಳ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ ಇದರ ನೂತನ ಅಧ್ಯಕ್ಷರಾಗಿ ಬಸನಗೌಡ ನಿಂಗನಗೌಡ ಪಾಟೀಲ ಹಾಗೂ ಉಪಾಧ್ಯಕ್ಷರಾಗಿ ದಾಬಲಸಾಬ ಅಲ್ಲಿಸಾ ಪಿರಾಪೂರ ಅವಿರೋಧವಾಗಿ ಆಯ್ಕೆಯಾದರು.  

ಸೋಮವಾರ ಸಂಘದ ಸಭಾಂಗಣದಲ್ಲಿ ನಡೆದ ಈ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಸನಗೌಡ ನಿಂಗನಗೌಡ ಪಾಟೀಲ (ಬನ್ನಿಹಟ್ಟಿ ಪಿಟಿ) ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ದಾವಲಸಾಬ ಅಲ್ಲಿಸಾ ಪಿರಾಪೂರ( ಬೆಕಿನಾಳ) ಇವರಿಬ್ಬರೇ ನಾಮಪತ್ರ ಸಲ್ಲಿಸಿರುವುದರಿಂದ ಇವರಿಬ್ಬರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಲೀಲಾವತಿಗೌಡ ಘೋಷಿಸಿದರು. 

ಸಂಘದ ಒಟ್ಟು 12 ಜನ ನಿರ್ದೇಶಕರಲ್ಲಿ10 ಜನ ನಿರ್ದೇಶಕರು ಚುನಾವಣಾ ಸಭೆಯಲ್ಲಿ ಹಾಜರಿದ್ದು ಇಬ್ಬರು ಗೈರಾಗಿದ್ದರು ಸಂಘದ ಕಾರ್ಯದರ್ಶಿ ಬಾಬಾಗೌಡ ಕರಕಳ್ಳಿ ಸಹಾಯಕ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ವಿಜಯೋತ್ಸವ: ಸಂಘದ ಅಧ್ಯಕ್ಷ ಉಪಾಧ್ಯಕ್ಷರ ಹೆಸರುಗಳು ಘೋಷಣೆಯಾಗುತ್ತಿದ್ದಂತೆಯೇ ಅವರ ಅಪಾರ ಬೆಂಬಲಿಗರು ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಮಠ, ಬಿ.ಬಿ.ಪಾಟೀಲ, ಯಮನೂರ​‍್ಪ ಸಿಂದಗಿರಿ ಹಾಗೂ ಅಲ್ಲಾಭಕ್ಷ ಹಕೀಮ ಇವರ ನೇತೃತ್ವದಲ್ಲಿ ಪಟಾಕಿ ಸಿಡಿಸಿ ಗುಲಾಲು ಎರಚಿ ಸಿಹಿ ವಿತರಿಸಿ ವಿಜಯೋತ್ಸವ ಆಚರಿಸಿದರು.  

ಈ ಸಂದರ್ಭದಲ್ಲಿ ಸಂಘದ ನೂತನ ಅಧ್ಯಕ್ಷರಾದ ಬಸನಗೌಡ ನಿಂಗನಗೌಡ ಪಾಟೀಲ ಅವರು ಮಾತನಾಡಿ ಇಂದು ಎಲ್ಲ ನಿರ್ದೇಶಕರು ಸೇರಿ ನಮ್ಮಿಬ್ಬರನ್ನು ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ ಅವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ನಾವೆಲ್ಲರೂ ಒಂದಾಗಿ ಸಂಘದ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇವೆ ಇದಕ್ಕೆ ನಿಮ್ಮೆಲ್ಲರ ಸಹಕಾರ ಇರಲಿ ಎಂದರು. 

 ಈ ವೇಳೆ ಮುಖಂಡರಾದ ಬಸಯ್ಯ ಬೆನಾಳಮಠ,ಅಪ್ಪಾಸಾಹೇಬ ಬಿರಾದಾರ, ಅಶೋಕಗೌಡ ಪಾಟೀಲ ಸಂಘದ ನೂತನ ನಿರ್ದೇಶಕರಾದ ರಮೇಶ ಬಸನಗೌಡ ವಡ್ಡೋಡಗಿ, ಶ್ರೀಶೈಲ ಬಸವರಾಜ ಸಂಗಾಪೂರ, ಶರಣಯ್ಯ ಈರಯ್ಯ ಬೆನಾಳಮಠ, ರೇಣುಕಾ ಷಣ್ಮುಖಪ್ಪ ನಾಯಕಲ, ಮಕ್ಕಾಬಿ ಅಲ್ಲಾ ಭಕ್ಷ ಮಸರಕಲ್, ಬಾವಾಸಾ ನಬಿಸಾ ವಾಲಿಕಾರ, ಚಂದವ್ವ ಸಿದ್ದಪ್ಪ ಮಾದರ, ವಿಶ್ವನಾಥ ಶಂಕರಗೌಡ ಕರಕಳ್ಳಿ ಹಾಗೂ ಬೆಕಿನಾಳ, ಬನ್ನಿಹಟ್ಟಿ ಪಿಟಿ, ಬೂದಿಹಾಳ ಪಿಟಿ, ವಣಕಿಹಾಳ ಗ್ರಾಮಗಳ ಅಪಾರ ಬೆಂಬಲಿಗರು ಇದ್ದರು.