ರಾಣೇಬೆನ್ನೂರು16: ಹಾವೇರಿ ನಗರದಲ್ಲಿ ಜಿಲ್ಲಾಮಟ್ಟದ ವಕೀಲರ ಹಾರ್ಡ್ ಟೆನ್ನಿಸ್ ಬಾಲ್ ಕ್ರೀಡಾಕೂಟವು ರವಿವಾರ ನಡೆಯಿತು. ಧಾರವಾಡ, ಶಿರಸಿ ಹಾಗೂ ಬ್ಯಾಡಗಿ ತಂಡಗಳ ಮೇಲೆ ಭರ್ಜರಿ ಗೆಲುವನ್ನು ಸಾಧಿಸಿದ ರಾಣೇಬೆನ್ನೂರು ವಕೀಲರ ಕ್ರಿಕೆಟ್ ತಂಡವು ಎಂದಿನಂತೆ ಚಾಂಪಿಯನ್ಶಿಪ್ ಪಟ್ಟವನ್ನು ಉಳಿಸಿಕೊಂಡು ಸಾಧನೆ ಮೆರೆದಿದೆ. ಅಂತಿಮ ಪಂದ್ಯದಲ್ಲಿ ಹಾವೇರಿ ವಕೀಲರ ತಂಡದ ವಿರುದ್ಧ ಭರ್ಜರಿ ಗೆಲುವನ್ನು ಸಾಧಿಸಿ ನಗದು ಮೊತ್ತ 10 ಸಾವಿರ ಹಾಗೂ ಆಕರ್ಷಕ ಪಾರಿತೋಷಕ ತನ್ನದಾಗಿಸಿಕೊಂಡು ಸಂಭ್ರಮಿಸಿದೆ.
ಮಂಜುನಾಥ ಹೆಚ್.ಗೌಳಿ ನಾಯಕತ್ವದ ತಂಡದಲ್ಲಿ ದಿಲೀಪ್ ಮೊಟೇಬೆನ್ನೂರು ಶಶಿಧರ ಕುಬಸದ, ಪ್ರಕಾಶ್ ಹೆಚ್.ಆರ್. ಆನಂದ ಹೆಚ್. ವಿಠಲ್ ವ್ಹಿ.ಪಿ. ಪ್ರಕಾಶ್ ಎಸ್. ದೀಲಿಪ್ ಎಚ್., ನಟರಾಜ ಜಿ.ಎಸ್., ಬಸನಗೌಡ ಹುಲ್ಮನಿ, ಹೆಚ್.ಸಂದೀಪ್, ಹನುಮಂತ ಹೆಚ್.ವಿ., ಹಾಗೂ ಸೂರ್ಯಕಾಂತ ಕೆ.ಬಿ. ಸಾಧನೆ ಮೆರೆದ ಕ್ರೀಡಾಪಟುಗಳಾಗಿದ್ದಾರೆ.