ಶಿರಹಟ್ಟಿ 21 : ಪಟ್ಟಣದ ಮುಖ್ಯ ರಸ್ತೆಯು ಇಕ್ಕಟ್ಟಾಗಿರುವುದರಿಂದ ಪಿ,ಎಸ್,ಐ ಅವರು ಜಾರಿಗೊಳಿಸಿದ ಒನ್ ಸೈಡ್ ಪಾಕಿಂರ್ಗ್ ವ್ಯವಸ್ಥೆಗೆ ಸಾರ್ವಜನಿಕರ ಸ್ಪಂದನೆಯನ್ನು ನೋಡಿ ಬಹಳ ಖುಷಿ ಆಯಿತು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ ಎಸ್ ನೇಮಗೌಡ ಅವರು ಹೇಳಿದರು.
ಅವರು ಶುಕ್ರವಾರ ಪಟ್ಟಣದ ಪೊಲೀಸ್ ಠಾಣೆಗೆ ಭೇಟಿ ನೀಡಿ ಮಾತನಾಡುತ್ತಾ ಪೊಲೀಸ್ ಇಲಾಖೆಯಿಂದ ಈಗಾಗಲೇ ಆಯಕಟ್ಟಿನ ಸ್ಥಳಗಳಲ್ಲಿ ಸಿ ಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಸಾರ್ವಜನಿಕ ಕೂಡಾ ವ್ಯಾಪಾರ ಮಾಡುವ ಸ್ಥಳದಲ್ಲಿ ಮತ್ತು ತಮ್ಮ ಮನೆಗಳಿಗೆ ಸಿ ಸಿ ಕ್ಯಾಮರಾಗಳನ್ನು ತಾವು ಕೂಡಾ ಹಾಕಿಕೊಳ್ಳಬೇಕು ಎಂದರು. ಬೈಕ್ ಸವರಾರು ಕಡ್ಡಾಯವಾಗಿ ಹೆಲ್ಮೆಟ್ ಹಾಕಿಕೊಂಡು ಹೋಗಬೇಕು ಇಲ್ಲವಾದರೆ ಪಟ್ಟಣದಲ್ಲಿ ಈಗಾಗಲೇ ಥರ್ಡ್ ಐ ಕ್ಯಾಮರಾವನ್ನು ಅಳವಡಿಸಿರುವುದರಿಂದ ದಂಡ ಬೀಳುತ್ತದೆ, ಅಲ್ಲದೆ ಹೆಲ್ಮೆಟ್ ಇಲ್ಲದೆ ಸಂಚಾರ ಮಾಡುವುದರಿಂದ ಸಣ್ಣ ಪುಟ್ಟ ಅಪಘಾತಗಳಿಗೂ ದೊಡ್ಡ ಬೆಲೆ ಕಟ್ಟಬೇಕಾಗುವುದು ಎಂದು ಹೇಳಿದರು.
ಈ ಸಮಯದಲ್ಲಿ ಸಿ ಪಿ ಐ ನಾಗರಾಜ ಮಾಡಳ್ಳಿ, ಪಿ,ಎಸ್, ಐ, ಚನ್ನಯ್ಯ ದೇವೂರ ಕ್ರೈಮ ಪಿ, ಎಸ್ಹಾ, ಐ ಶೇಖರ ಕಡುಬಿನ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿಗಳು ಹಾಜರಿದ್ದರು."