ವಿವಿಧ ಸಾಮಗ್ರಿ ವಿತರಣೆ

ಲೋಕದರ್ಶನವರದಿ

ಬ್ಯಾಡಗಿ : ಸ್ಥಳಿಯ ಭಾರತೀಯ ಜೀವ ವಿಮಾ ನಿಗಮದ  ತಾಲೂಕ ಜೀವ ವಿಮಾ ಪ್ರತಿನಿಧಿಗಳ ಲಿಯಾಫಿ ಸಂಘದ ವತಿಯಿಂದ ಚಿಕ್ಕೋಡಿ ತಾಲೂಕ ಮಾಂಜರಿ ಬಾಗಲಕೋಟಿ ಜಿಲ್ಲೆಯ ಬಾದಾಮಿ ತಾಲೂಕ ಹಾಗೂ ಮಂಗಳೂರಿನ ನೆರೆ ಸಂತ್ರಸ್ತರಿಗೆ ತಾಲೂಕಿನ ಪ್ರತಿನಿಧಿಗಳ ಪರವಾಗಿ  ಸಂಗ್ರಹಿಸಲಾದ ಬಟ್ಟೆ ಮತ್ತು ಪಾತ್ರೆ ಹಾಗೂ ವಿವಿಧ ಸಾಮಗ್ರಿಗಳನ್ನು ಇಲ್ಲಿನ ತಾಪಂ ಸಾಮಥ್ರ್ಯಸೌಧದಲ್ಲಿ ನಡೆದ ಅಂತರಾಷ್ಟ್ರೀಯ ಸಾಕ್ಷರತಾ ದಿನಾಚರಣೆಯ ಸಂದರ್ಭದಲ್ಲಿ  ವಿತರಣೆ ಮಾಡಲಾಯಿತು.

     ತಾಪಂ ಅಧ್ಯಕ್ಷೆ ಸವಿತಾ ಸುತ್ತುಕೋಟಿ, ಉಪಾಧ್ಯಕ್ಷೆ ಶಾಂತಮ್ಮ ದೇಸಾಯಿ, ಸ್ಥಾಯಿ ಸಮಿತಿ ಅಧ್ಯಕ್ಷ ಯಲ್ಲನಗೌಡ್ರ ಕರೇಗೌಡ್ರ ಸದಸ್ಯ ಗುಡ್ಡಪ್ಪ ಕೋಳೂರು, ತಾಪಂ ಕಾರ್ಯನಿವರ್ಾಹಕ ಅಧಿಕಾರಿ ಅಬಿದ್ ಗದ್ಯಾಳ, ಪುರಸಭಾ ಮುಖ್ಯಾಧಿಕಾರಿ ವಿ.ಎಂ. ಪೂಜಾರ,  ಡಿಪೋ ವ್ಯವಸ್ಥಾಪಕ ಮಂಜುನಾಥ್ ಕಡ್ಲಿಕೊಪ್ಪ, ಲಿಯಾಫಿ ಸಂಘದ ಅಧ್ಯಕ್ಷ ನಾಗೇಶ ಗುತ್ತಲ, ಉಪಾಧ್ಯಕ್ಷ ಬಸವರಾಜಯ್ಯ ಹಿರೇಮಠ,  ಕಾರ್ಯದಶರ್ಿ ಚಂದ್ರಶೇಖರ ಹುದ್ದಾರ, ಸಹಕಾರ್ಯದಶರ್ಿ ಮಾಲತೇಶ ಎಲಿ, ಎಮ್.ಬಿ.ಅಂಗಡಿ, ಸಾಕ್ಷರತಾ ಸಂಯೋಜಕ ಎಮ್.ಎಸ್ ದಂಡಗಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.