ಲೋಕದರ್ಶನ ವರದಿ
ಸಿದ್ದಾಪುರ; ನಾವು ಇಂದಿಗೂ ಬ್ರಟಿಷ್ ವ್ಯವಸ್ಥೆಗೆ ಜೋತುಬಿದ್ದಿದ್ದೇವೆ. ಅದನ್ನು ತೆಗೆದು ಹಾಕಬೇಕು. ನಾವು ಪ್ರಯತ್ನಶೀಲರಾಗಬೇಕು. ಮಹಿಳೆಯರಲ್ಲಿ ಸ್ವಾಭಿಮಾನ ಬೆಳೆಯಬೇಕು. ನಮ್ಮ ಜವಬ್ದಾರಿಯನ್ನು ಅರಿತು ಕೆಲಸ ಮಾಡಬೇಕು. ಸ್ವಾವಲಂಬನೆಯ ಜೀವನ ನಡೆಸುವುದಕ್ಕೆ ಮಹಿಳೆಯರು ಮುಂದಾಗಬೇಕು ಎಂದು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಅವರು ತಾಲೂಕಿನ ಕೋಲಶಿಸರ್ಿ ಪಂಚಾಯತದ ವ್ಯಾಪ್ತಿಯ ಕಸ್ತೂರಿನಲ್ಲಿ ಅರಣ್ಯ ಇಲಾಖೆ, ಗ್ರಾಮ ಅರಣ್ಯ ಸಮಿತಿ ಕಸ್ತೂರು- ಹಲಗಡಿಕೊಪ್ಪ, ಆಧಾರ ಶಿಕ್ಷಣ,ಸ್ವ-ಉದ್ಯೋಗ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ ಆಶ್ರಯದಲ್ಲಿ ಗ್ರೀನ ಇಂಡಿಯಾ ಮಿಷನ್ ಯೋಜನೆಯ ವಿಶೇಷ ಘಟಕ ಯೋಜನೆಯಡಿಯಲ್ಲಿ ಹೊಲಿಗೆ ತರಬೇತಿ ಪಡೆದ 23 ಅರ್ಹ ಫಲಾನುಭವಿಗಳಿಗೆ ಹೊಲಿಗೆ ಯಂತ್ರ ವಿತರಿಸಿ ಮಾತನಾಡಿದರು. ಕೊಟ್ಟಿರುವ ಹೊಲಿಗೆ ಯಂತ್ರದ ದುರುಪಯೋಗ ಆಗಬಾರದು. ಅದನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು ಎಂದುರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಡಿ.ಎಫ್.ಓ ಸುದರ್ಶನ್ ಎನ್.ಡಿ ಮಾತನಾಡಿ ಅರಣ್ಯದ ಸುತ್ತಲು ಇರುವ ಕುಟುಂಬದ ಜನರು ಜೀವನಕ್ಕೆ ಅರಣ್ಯದ ಅವಲಂಬಿತರಾಗಬಾರದು. ಸ್ವ-ಉದ್ಯೋಗಿಗಳಾಗಬೇಕು. ಸ್ವಾವಲಂಬನೆಯ ಜೀವನವನ್ನು ನಡೆಸುವಂತಾಗಬೇಕು ಎನ್ನುವುದು ಯೋಜನೆಯ ಉದ್ದೇಶವಾಗಿದೆ. ಅದರಂತೆ ತರಬೇತಿ ಪಡೆದವರಿಗೆ ಸ್ವಂತ ಉದ್ಯೋಗ ನಡೆಸುವುದಕ್ಕೆ ಅನುಕೂಲ ಆಗಲಿ ಎಂದು ಹೊಲಿಗೆ ಯಂತ್ರವನ್ನು ಇಲಾಖೆ ಈ ಯೋಜನೆಯಲ್ಲಿ ನೀಡುತ್ತಿದೆ. ಇದರ ಪ್ರಯೋಜನ ಪಡೆದುಕೊಳ್ಳಿ ಎಂದರು.
ಕೆನರಾ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅಶೋಕ ಬಾಸರಕೋಡ, ತಾಲೂಕ ಪಂಚಾಯತ ಅಧ್ಯಕ್ಷ ಸುಧೀರ್ ಗೌಡರ್, ಜಿಲ್ಲಾ ಪಂಚಾಯತ ಸದಸ್ಯರುಗಳಾದ ನಾಗರಾಜ ನಾಯ್ಕ ಬೇಡ್ಕಣಿ, ಎಂ.ಜಿ.ಹೆಗಡೆ ಗೆಜ್ಜೆ, ತಾಲೂಕಾ ಪಂಚಾಯತ ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ, ಪ.ಪಂ ಮಾಜಿ ಅಧ್ಯಕ್ಷ ಕೆ.ಜಿ.ನಾಯ್ಕ ಹಣಜೀಬೈಲ್,ಕೋಲಶಿಸರ್ಿ ಗ್ರಾಮ ಪಂಚಾಯತ ಉಪಾಧ್ಯಕ್ಷ ಕೆ.ಆರ್.ವಿನಾಯಕ, ಸದಸ್ಯ ನಾರಾಯಣ ನಾಯ್ಕ, ಆಧಾರ ಸಂಸ್ಥೆಯ ಅಧ್ಯಕ್ಷ ನಾಗರಾಜ ನಾಯ್ಕ ಮಾಳ್ಕೋಡ ಉಪಸ್ಥಿತರಿದ್ದರು.
ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷರಾದ ಶಿವಾನಂದ ಗೌಡರ್ ಅಧ್ಯಕ್ಷತೆ ವಹಿಸಿ ಮಾತನಾಡಿ ಗ್ರಾಮ ಅರಣ್ಯ ಸಮಿತಿಯ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಅನೇಕ ಕಾರ್ಯಕ್ರಮಗಳನ್ನು ಜಾರಿಮಾಡಿದೆ. ಸ್ಥಳೀಯರಿಗೆ ಇದರಿಂದ ಪ್ರಯೋಜನವಾಗಿದೆ. ಅದರಂತೆ ಸ್ವ-ಉದ್ಯೋಗ ನಡೆಸುವುದಕ್ಕೆ ತರಬೇತಿಯನ್ನು ನೀಡಿ ಇಂದು ಹೊಲಿಗೆ ಯಂತ್ರ ನೀಡುತ್ತಿದ್ದೇವೆ. ಇದರ ಉಪಯೋಗ ಆಗಬೇಕು ಎಂದರು.
ಜ್ಯೋತಿ ಗೌಡರ್ ಪ್ರಾಥರ್ಿಸಿದರು, ಶಿಬಿರಾಥರ್ಿಗಳು ಧ್ಯೇಯಗೀತೆ ಹಾಡಿದರು. ಪ್ರಮೀಳಾ ಪೈಗೀಣಿಕರ ಮತ್ತು ಗೀತಾ ರಮೇಶ ನಾಯ್ಕ ಅನಿಸಿಕೆ ಹೇಳಿದರರು.ವಲಯ ಅರಣ್ಯಾಧಿಕಾರಿ ವೈ.ಕೆ.ಕಿರಣಕುಮಾರ ಸ್ವಾಗತಿಸಿದರು. ಎ.ಸಿ.ಎಫ್ ಅಬ್ದುಲ್ ಅಜೀಜ್ ಶೇಖ್ ಪ್ರಾಸ್ತಾವಿಕ ಮಾತನಾಡಿದರು. ಆಧಾರ ಸಂಸ್ಥೆಯ ಸಂಯೋಜಕ ಸುರೇಶ ಮಡಿವಾಳ ಕಡಕೇರಿ ಕಾರ್ಯಕ್ರಮ ನಿರ್ವಹಿಸಿದರು .ಉಪವಲಯ ಅರಣ್ಯಾಧಿಕಾರಿ ಮಂಜುನಾಥ ಸ್ವಾಮಿ ವಂದಿಸಿದರು.