ಲೋಕದರ್ಶನವರದಿ
ಶಿಗ್ಗಾವಿ ೦೪: ದೇಶದ ಬದಲಾವಣೆಯಲ್ಲಿ ಶಿಕ್ಷಣದ ಪಾತ್ರ ಮುಖ್ಯವಾಗಿದ್ದು, ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡುವ ಕಡೆ ಇಂದಿನ ಪಾಲಕರು ಗಮನ ಹರಿಸಬೇಕಿದೆ ಎಂದು ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಸಂಚಾಲಕ ಪ್ರಕಾಶ ಹಾದಿಮನಿ ಹೇಳಿದರು.
ಬುಧವಾರ ತಾಲೂಕಿನ ಕ್ಯಾಲಕೊಂಡ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾನವ ಬಂಧುತ್ವ ವೇದಿಕೆ ಮತ್ತು ಸತೀಶ ಜಾರಕಿಹೊಳಿ ಅಭಿಮಾನಿ ಬಳಗದ ವತಿಯಿಂದ ಶಾಲೆಯ ಮಕ್ಕಳಿಗೆ ನೋಟ್ ಬುಕ್ ವಿತರಿಸಿ ಮಾತನಾಡಿದ ಅವರು, ಇಂದು ಶಿಕ್ಷಣ ಎಂಬುದು ಖಾಸಗೀ ಶಾಲೆಗಳ ಕೈಯಲ್ಲಿ ಸಿಲುಕಿ ವ್ಯಾಪಾರೀಕರಣವಾಗಿದ್ದು ಬಡ ವಿದ್ಯಾಥರ್ಿಗಳಿಗೆ ಪೂರಕ ಶಿಕ್ಷಣ ವ್ಯವಸ್ಥೆಯ ಬರಬೇಕಿದೆ ಎಂದ ಅವರು ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂವಿಧಾನದ ಕುರಿತು ತಿಳುವಳಿಕೆಯಾಗಬೇಕಿದೆ, ದೇಶದ ನಾಗರಿಕರಿಗೆ ಸಂವಿಧಾನ, ಹಕ್ಕು ಮತ್ತು ಸಮಾನತೆಯನ್ನು ನೀಡಿದೆ, ಸಂವಿಧಾನ ಸಮರ್ಪಕ ಬಳಕೆಯಾಗುತ್ತಿಲ್ಲ, ಸಂವಿಧಾನವನ್ನೂ ಸಹಿತ ದಿಕ್ಕರಿಸುವ ಬೆಳವಣಿಗೆಯಾಗುತ್ತಿದೆ ಎಂದು ವಿಷಾದಿಸಿದರು.
ತಾಲೂಕಾ ಸರಕಾರಿ ನೌಕರ ಸಂಘದ ಅದ್ಯಕ್ಷ ಅರುಣ ಹುಡೇದಗೌಡ್ರ ಮಾತನಾಡಿ, ಮಾನವ ಬಂಧುತ್ವ ವೇಧಿಕೆ ಎಂಬುದು ಶಿಕ್ಷಣಕ್ಕೆ ಮತ್ತು ಶಿಕ್ಷಣವಂತ ಮಕ್ಕಳಿಗೆ ಉತ್ತಮ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದು ಮಕ್ಕಳಿಗೆ ಪ್ರೋತ್ಶಾಹಪೂರಕ ಸನ್ಮಾನ, ಅಭಿನಂದಿಸುವಿಕೆ ಜೊತೆಗೆ ಧನ ಸಹಾಯವನ್ನೂ ಸಹಿತ ಮಾಡುತ್ತ ಬರುತ್ತಿದ್ದು ಇಂತಹ ಕಾರ್ಯಕ್ರಮಗಳಿಂದ ಶಿಕ್ಷಣದಿಂದ ವಂಚಿತವಾದ ವಿದ್ಯಾಥರ್ಿಗಳನ್ನೂ ಸಹಿತ ಮೇಲೆತ್ತುವ ಕಾರ್ಯ ಶ್ಲಾಘನೀಯ ಎಂದರು.
ಶಿಕ್ಷಣ ಇಲಾಖೆಯ ಸಿಆರ್ಪಿ ಜಿ ಬಿ ಹಸಬಿ ಮಾತನಾಡಿ, ಕಳೆದ 2008 ರಿಂದ ತಾಲೂಕಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬರುತ್ತಿದ್ದ ಶಿಕ್ಷಣದ ಏಳಿಗೆಯಲ್ಲಿ ತಂದೆಯವರ ಹಾದಿಯಲ್ಲಿ ಅವರ ಮಗ ಮುಂದುವರೆಸಿಕೊಂಡು ಬರುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
ಈ ಸಂದರ್ಭದಲ್ಲಿ ಶಾಲೆಯ ಎಲ್ಲ ವಿದ್ಯಾಥರ್ಿಗಳಿಗೆ ನೋಟ್ ಬುಕ್ ವಿತರಿಸಲಾಯಿತು.
ನೂತನ ಕ್ಷೇತ್ರಶಿಕ್ಷಣಾಧಿಕಾರಿ ಐ ಎಂ ಬೆನಕೊಪ್ಪ, ಭರಮಗೌಡ್ರ ಪಾಟೀಲ, ವಿಶಾಲ ಮರಾಠೆ, ಸುನೀಲ ಬಂಡಿವಡ್ಡರ, ಹನುಮವ್ವ ಗೊಜಗೋಜಿ, ಶರಣಪ್ಪ ಅಯ್ಯಣ್ಣವರ, ಎಫ್ ಎಂ ಹಾದಿಮನಿ, ರಘುನಾಥ ತಳವಾರ, ಸಿ ಎಚ್ ಬ್ಯಾಹಟ್ಟಿ, ಆರ್ ಡಿ ಜಾವಕಿ, ಕೆ ಎಂ ಸುಣಗಾರ ಸೇರಿದಂತೆ ಗ್ರಾಮದ ಮುಖಂಡರು ಮತ್ತು ಶಾಲಾ ವಿದ್ಯಾಥರ್ಿಗಳು ಇದ್ದರು, ಕಾರ್ಯಕ್ರಮವನ್ನ ಶಿಕ್ಷಕ ಜಿ ಆರ್ ಪಾಟೀಲ ನಿರೂಪಿಸಿ ವಂದಿಸಿದರು.