ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ಔಷದಿ ವಿತಹರಣೆ

ಕೊಪ್ಪಳ 24: ಗಂಗಾವತಿಯ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ಔಷದಿ ವಿತಹರಣೆ  ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಪ್ರಸಕ್ತ ಸಾಲಿನ ಪಶುಭಾಗ್ಯ ಯೋಜನೆ ಅಡಿ "ಕರು ಸಾಕಾಣಿಕೆ" ಯೋಜನೆ ಫಲಾನುಭವಿಗಳಿಗೆ ಪಶು ಆಹಾರ,  ಜಂತುನಾಶಕ ಮತ್ತು ಬಲವರ್ಧಕ ಔಷಧಿಗಳ ವಿತರಣೆ ಕಾರ್ಯಕ್ರಮವನ್ನು ಗಂಗಾವತಿಯಲ್ಲಿ ಆಯೋಜಿಸಲಾಯಿತು ಕಾರ್ಯಕ್ರಮದ ಉದ್ಘಾಟನೆಯನ್ನು ಕೊಪ್ಪಳ ಜಿಲ್ಲಾ ಪಂಚಾಯತಿ ಅಧ್ಯಕ್ಷ ಹೆಚ್ ವಿಶ್ವನಾಥರೆಡ್ಡಿ ಯವರು ಉದ್ಘಾಟಿಸಿದರು. ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಜಿ.ಪಂ ಸದಸ್ಯ ಅಮರೇಶ್ ಗೋನಾಳ್ ರವರು ಗಂಗಾವತಿಯ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಅಧಿಕಾರಿಗಳು ಸೇರಿದಂತೆ ಫಲಾನುಭವಿಗಳು ಉಪಸ್ಥಿತರಿದ್ದರು.