ಶೈಕ್ಷಣಿಕ ವೆಚ್ಚ ವಿತರಣೆ
ಅಥಣಿ 20: ಪುರಸಭಾ ನಗರೋತ್ಥಾನ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಮಂಜೂರಾದ ಪರಿಶಿಷ್ಠ ಜಾತಿ ಪೌರ ಕಾರ್ಮಿಕರಿಗೆ, ಇತರ ವರ್ಗದ ಜನರಿಗೆ, ವಿಕಲ ಚೇತನರಿಗೆ ಮತ್ತು ಪರಿಶಿಷ್ಠ ಪಂಗಡ ವರ್ಗದ ಅರ್ಹ ಫಲಾನುಭವಿಗಳಿಗೆ ಇನ್ವರಟರ್ ಮತ್ತು ಬ್ಯಾಟರಿಗಳನ್ನು ಹಾಗೂ 2024-25 ನೇ ಸಾಲಿನ ಎಸ್.ಎಫ್.ಸಿ ಅನುದಾನದ ಶೇ.7.25 ಯೋಜನೆಯಡಿ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಮಂಜೂರಾದ ಶೈಕ್ಷಣಿಕ ವೆಚ್ಚವನ್ನು ಪುರಸಭೆಯ ಸಭಾ ಭವನದಲ್ಲಿ ಕೊಡಲಾಯಿತು.
ಅಧ್ಯಕ್ಷತೆ ವಹಿಸಿದ್ದ ಪುರಸಭಾಧ್ಯಕ್ಷೆ ಶಿವಲೀಲಾ ಬುಟಾಳಿ ಮಾತನಾಡಿ, ಅರ್ಹ ಫಲಾನುಭವಿಗಳನ್ನು ಗುರುತಿಸಿ ಇನ್ವರಟರ್ ಜೊತೆಗೆ ಬ್ಯಾಟರಿ ಹಾಗೂ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವೆಚ್ಚ ವಿತರಿಸಲಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸುವುದಾಗಿ ಹೇಳಿದರು.
ಉಪಾಧ್ಯಕ್ಷೆ ಭುವನೇಶ್ವರಿ ಯಕ್ಕಂಚಿ, ಪುರಸಭಾ ಸದಸ್ಯರಾದ ಮೃಣಾಲಿನಿ ದೇಶಪಾಂಡೆ, ಮಲ್ಲೇಶ ಹುದ್ದಾರ, ವೀಲೀನರಾಜ ಯಳಮೇಲಿ, ಸೈಯ್ಯದಮೀನ್ ಗದ್ಯಾಳ, ರಾಜಶೇಖರ ಗುಡೋಡಗಿ, ಪ್ರಮೋದ ಬಿಳ್ಳೂರ, ಉದಯ ಸೋಳಸಿ, ದತ್ತಾ ವಾಸ್ಟರ್ ಸೇರಿದಂತೆ ಪುರಸಭೆಯ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.