ಫಲಾನುಭವಿಗಳಿಗೆ ವಸತಿ ಆದೇಶ ಪತ್ರ ವಿತರಣೆ

ಬಸವ ವಸತಿಯೋಜನೆಯಲ್ಲಿ ಮಂಜೂರಾದ 41 ಫಲಾನುಭವಿಗಳಿಗೆ ಮನೆ ಕಟ್ಟಡ ಆದೇಶ ಪತ್ರಗಳನ್ನು ವಿತರಿಸುತ್ತಿರುವ ಶಾಸಕ ಡಿ.ಎಮ್.ಐಹೊ

 

ರಾಯಬಾಗ 26: ತಾಲೂಕಿನ ಬಾವನಸೌಂದತ್ತಿ ಗ್ರಾಮವನ್ನು ಗುಡಿಸಲು ಮುಕ್ತವನ್ನಾಗಿ ಮಾಡಲು ಪಣತೊಟ್ಟಿದ್ದು, ಈಗಾಗಲೇ ಈ ಮೊದಲು ಗ್ರಾಮಕ್ಕೆ 400 ಮನೆಗಳನ್ನು ನೀಡಲಾಗಿದ್ದು, ಈಗ ಮತ್ತೆ 41 ಮನೆ ಇಲ್ಲದವರಿಗೆ ಮನೆಗಳನ್ನು ಮಂಜೂರು ಮಾಡಿಸಲಾಗಿದೆ ಎಂದು ಶಾಸಕ ಡಿ.ಎಮ್.ಐಹೊಳೆ ಹೇಳಿದರು.

ಮಂಗಳವಾರ ತಾಲೂಕಿನ ಬಾವನಸೌಂದತ್ತಿ ಗ್ರಾಮದ ಗ್ರಾಮ ಪಂಚಾಯತಿ ಆವರಣದಲ್ಲಿ ಬಸವ ವಸತಿಯೋಜನೆಯಲ್ಲಿ ಮಂಜೂರಾದ 41 ಫಲಾನುಭವಿಗಳಿಗೆ ಮನೆ ಕಟ್ಟಡ ಆದೇಶ ಪತ್ರಗಳನ್ನು ವಿತರಿಸಿ ಮಾತನಾಡಿದ ಅವರು, ಫಲಾನುಭವಿಗಳು ತಾವು ಸ್ವಲ್ಪ ಹಣವನ್ನು ಹಾಕಿ ಒಳ್ಳೆ ಗುಣಮಟ್ಟದ ಮನೆಗಳನ್ನು ನಿಮರ್ಿಸಿಕೊಳ್ಳುವುದರೊಂದಿಗೆ ಸರಕಾರ ಸಹಾಯಧನದೊಂದಿಗೆ ಕಡ್ಡಾಯವಾಗಿ ಶೌಚಾಲಯಗಳನ್ನು ಕಟ್ಟಿಕೊಂಡು ಬಯಲು ಮುಕ್ತ ಶೌಚಕ್ಕೆ ಕೈಜೋಡಿಸಬೇಕೆಂದು ಮನವಿ ಮಾಡಿಕೊಂಡರು. ಬಯಲು ಶೌಚದಿಂದ ಅನೇಕ ರೋಗ ರುಜಿನಗಳು ಹರಡುತ್ತವೆ ಅಲ್ಲದೇ ಮನೆ ಹೆಣ್ಣು ಮಕ್ಕಳ ಗೌರವ ಕಡಿಮೆಯಾಗುತ್ತದೆ. ಕಾರಣ ಪ್ರತಿಯೊಬ್ಬರು ಶೌಚಾಲಯಗಳನ್ನು ಕಟ್ಟಿಸಿಕೊಳ್ಳಬೇಕೆಂದರು.

ಗ್ರಾ.ಪಂ.ಸದಸ್ಯ ಅನೀಲ ಹಂಜೆ ಮಾತನಾಡಿ, ಶಾಸಕ ಡಿ.ಎಮ್.ಐಹೊಳೆ ಅವರು ಗ್ರಾಮಕ್ಕೆ ಸುವರ್ಣಗ್ರಾಮ ಯೋಜನೆಯಡಿ 1 ಕೋಟಿ ರೂ. ಮಂಜೂರು ಮಾಡಿಸಿದ್ದಾರೆ. ಅಷ್ಟೇ ಅಲ್ಲದೇ ಗ್ರಾಮಕ್ಕೆ ಸಾಕಷ್ಟು ಯೋಜನೆಗಳನ್ನು ಮಂಜೂರು ಮಾಡಿಸಿ, ಸಂಪೂರ್ಣ ಗ್ರಾಮವನ್ನು ಅಭಿವೃದ್ಧಿ ಪಡಿಸಿದ್ದಾರೆ ಎಂದರು.

ಗ್ರಾ.ಪಂ.ಅಧ್ಯಕ್ಷ ಅಜೀತ ಖೆಮಲಾಪೂರೆ, ಉಪಾಧ್ಯಕ್ಷೆ ಶೋಭಾ ಶಿಂದೆ, ಅನೀಲ ಹಂಜೆ, ತಾತ್ಯಾಸಾಬ ಕಾಟೆ, ಅಂಕುಶ ಜಾಧವ, ಶ್ರೀಮಂತ ಹಂಜೆ, ದಶರಥ ಕಾಟೆ, ಶಾಂತಿನಾಥ ಪಾಟೀಲ, ಶ್ರೀಕಾಂತ ಮಂಗಸೂಳೆ, ಗಂಗಾರಾಮ ಕುಂಬಾರ, ಬಾಹುಬಲಿ ಮಗದುಮ್ಮ, ಚಿದಾನಂದ ಮಂಗಸೂಳೆ, ರಾವಸಾಬ ಕಾಟೆ ಹಾಗೂ ಗ್ರಾ.ಪಂ.ಸದಸ್ಯರು, ಫಲಾನುಭವಿಗಳು ಮತ್ತು ಗ್ರಾಮಸ್ಥರು ಇದ್ದರು.