ಹಾವೇರಿ:ಎ. 03: ಮೂರು ದಿನದೊಳಗಾಗಿ ಜಿಲ್ಲೆಯ ಎಲ್ಲ ಉಜ್ವಲ ಯೋಜನೆಯ ಫಲಾನುಭವಿಗಳೀಗೆ ಗೃಹ ಬಳಕೆ ಅಡುಗೆ ಅನಿಲ ಸಿಲೆಂಡರ್ಗಳನ್ನು ವಿತರಿಸಲು ಜಿಲ್ಲೆಯ ಎಲ್ಪಿಜಿ ವಿತರಕರಿಗೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಸೂಚನೆ ನೀಡಿದರು.
ಜಿಲ್ಲೆಯ ಗೃಹ ಬಳಕೆಯ ಅನಿಲ ಸಿಲೆಂಡರ್ ವಿತರಕರೊಂದಿಗೆ ವಿಡಿಯೋ ಸಂವಾದ ನಡೆಸಿದ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಕರೋನಾ ವೈರಸ್ (ಕೋವಿಡ್-19) ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ದೇಶಾದ್ಯಂತ ಲಾಕ್ಡೌನ್ ಘೋಷಣೆಯಾಗಿದೆ. ಈ ಹಿನ್ನೆಲೆಯಲ್ಲಿ ಭಾರತ ಸಕರ್ಾರವು ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಹಾವೇರಿ ಜಿಲ್ಲೆಯ 1,28,881 ಉಜ್ವಲ ಫಲಾನುಭವಿಗಳಿಗೆ ಎಪ್ರಿಲ್, ಮೇ ಹಾಗೂ ಜೂನ್ ತಿಂಗಳವರೆಗೆ ಉಚಿತ ಎಲ್.ಪಿ.ಜಿ. ಸಿಲಿಂಡರ್ಗಳನ್ನು ಪೂರೈಸಲು ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಎಲ್ಲ ವಿತರಕರು ಅಗತ್ಯ ಕ್ರಮವಹಿಸುವಂತೆ ತಿಳಿಸಿದರು.
ಉಜ್ವಲ ಗ್ರಾಹಕರು ತಮ್ಮ ನೊಂದಾಯಿತ ಮೊಬೈಲ್ನಲ್ಲಿ ಗ್ಯಾಸ್ ಸಿಲೆಂಡರ್ ಬುಕ್ ಮಾಡಿದರೆ ಅವರ ಮನೆಗೆ ಸಿಲೆಂಡರ್ ತಲುಪಿಸುವ ವ್ಯವಸ್ಥೆ ಮಾಡಬೇಕು. ಒಂದೊಮ್ಮೆ ಮೊಬೈಲ್ ನೊಂದಾಯಿಸದೇ ಇರುವ ಗ್ರಾಹಕರ ಮನೆ ಮನೆಗೆ ತೆರಳಿ ವಿತರಕರೆ ನೊಂದಣಿ ಕಾರ್ಯವನ್ನು ಕೈಗೊಳ್ಳುವಂತೆ ಸೂಚನೆ ನೀಡಿದರು.
ಉಚಿತ ಸಿಲೆಂಡರ್ ಪಡೆಯಲು ಅನುಕೂಲವಾಗುವಂತೆ ಉಜ್ವಲ ಫಲಾನುಭವಿಗಳ ಖಾತೆಗೆ ಸಕರ್ಾರವು ನೇರವಾಗಿ ಹಣ ಜಮಾ ಮಾಡುತ್ತದೆ. ಗ್ರಾಹಕರು ಹಣ ಸಂದಾಯ ಮಾಡಿ ಸಿಲೆಂಡರ್ಗಳನ್ನು ಪಡೆಯಬೇಕು. ನೊಂದಾಯಿತ ಮೊಬೈಲ್ಸಂಖ್ಯೆಯಿಂದ ಸಿಲೆಂಡರ್ ಬುಕ್ ಮಾಡಿದರೆ ಮನೆಗೆ ಸಿಲೆಂಡರ್ ಬರಲಿದೆ. ಆ ಸಂದರ್ಭದಲ್ಲಿ ನಿಮ್ಮ ಬುಕ್ಕಿಂಗ್ ಮಾಡಿದ ಸಂದರ್ಭದಲ್ಲಿ ಮೊಬೈಲ್ಗೆ ಬರುವ ಒಟಿಪಿ ಸಂಖ್ಯೆಯನ್ನು ತಿಳಿಸಿ ಸಿಲೆಂಡರ್ ಪಡೆಯಬೇಕು ಹಾಗೂ ಗ್ರಾಹಕರು ಕಡ್ಡಾಯವಾಗಿ ತಮಗೆ ನೀಡಿದ ಎಲ್.ಪಿ.ಜಿ. ಗ್ಯಾಸ್ ಪುಸ್ತಕದಲ್ಲಿ ರಿಫಿಲ್ ಸರಬರಾಜು ಮಾಡಿದ ಮಾಹಿತಿಯನ್ನು ಸರಬರಾಜುದಾರರಿಂದ ದಾಖಲಿಸಬೇಕು. ಹಾಗೂ ಬಿಲ್ಲಿನಲ್ಲಿ ಹೆಬ್ಬಟ್ಟು ಅಥವಾ ರುಜುಮಾಡಿ ಕೊಡಬೇಕಾಗುತ್ತದೆ ಎಂದರು.
ಗ್ರಾಹಕರ ಸುರಕ್ಷತೆಯ ಹಿತದೃಷ್ಟಿಯಿಂದ ಉಜ್ವಲ ಯೋಜನೆಯಡಿ ಫಲಾನುಭವಿಗಳ ಮನೆಗಳಿಗೆ ಉಚಿತವಾಗಿ ಸಿಲೆಂಡರ್ ತಲುಪಿಸಲಾಗುತ್ತದೆ. ಎಲ್.ಪಿ.ಜಿ. ಅಗತ್ಯ ಸರಕುಗಳ ಅಡಿಯಲ್ಲಿ ಬರುವುದರಿಂದ ಸಿಲೆಂಡರ್ ಪೂರೈಕೆಗೆ, ಸಾಗಾಣಿಕೆಗೆ ಯಾವುದೇ ಅಡ್ಡಿ ಆತಂಕಗಳಿರುವುದಿಲ್ಲ. ಸಮಸ್ಯೆಗಳು ಉಂಟಾದಲ್ಲಿ ಜಿಲ್ಲಾಡಳಿತದ ಗಮನಕ್ಕೆ ತರಲು ವಿತರಕರಿಗೆ ತಿಳಿಸಿದರು.
ಪಡಿತರ ವಿತರಣೆ: ಜಿಲ್ಲೆಯ ಏಳು ತಾಲೂಕುಗಳ 68 ಪಡಿತರ ವಿತರಣಾ ಕೇಂದ್ರಗಳ ಮೂಲಕ 3404 ಪಡಿತರ ಚೀಟಿದಾರರಿಗೆ 1310.50 ಕ್ವಿಂಟಾಲ್ ಅಕ್ಕಿ ಮತ್ತು 109.64 ಕ್ವಿಂಟಾಲ್ ಗೋಧಿಯನ್ನು ಹಂಚಿಕೆ ಮಾಡಲಾಗಿದೆ ಎಂದು ಸಭೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿದರ್ೆಶಕ ವಿನೋದಕುಮಾರ ಹೆಗ್ಗಳಗಿ ಅವರು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಯೋಗೇಶ್ವರ, ಉಪವಿಭಾಗಾಧಿಕಾರಿ ಡಾ.ದಿಲೀಷ್ ಶಶಿ ಹಾಗೂ ವಿವಿಧ ತಾಲೂಕಿನ ಸಿಲೆಂಡರ್ ವಿತರಕರು ಭಾಗವಹಿಸಿದ್ದರು.