ಸ್ಕೌಟ್ಸ, ಗೈಡ್ಸ್ನಿಂದ ಮಕ್ಕಳಲ್ಲಿ ಶಿಸ್ತು ಮತ್ತು ದೇಶಪ್ರೇಮ ಬೆಳೆಯುತ್ತದೆ: ಸುಜಾತಾ ಪಾಟೀಲ ಏಬರಟ್ಟಿ ಕೆ.ಎಚ್.ಪಿ.ಎಸ್. ಶಾಲೆಯಲ್ಲ್ಲಿ ನಡೆದ ಸ್ಕೌಟ್ಸ ಗೈಡ್ಸ ತಾಲೂಕಾ ಮಟ್ಟದ ರ್ಯಾಲಿ

ಲೋಕದರ್ಶನ ವರದಿ

ಮುಗಳಖೋಡ,16:  ಸ್ಕೌಟ್ಸ್ ಮತ್ತು ಗೈಡ್ಸ್ಗಳಲ್ಲಿ ಪಾಲ್ಗೋಳ್ಳುವುದರಿಂದ ಮಕ್ಕಳಲ್ಲಿ ಶಿಸ್ತು ಮತ್ತು ದೇಶ ಪ್ರೇಮ ಬೆಳೆಯುತ್ತದೆ. ಇಂತಹ ಕಾರ್ಯಕ್ರಮಗಳು ಮಕ್ಕಳಲ್ಲಿ ಒಳ್ಳೇಯ ಉತ್ಸಾಹ ಮೂಡಿಸಿ ಭಾವಿ ಸಮಾಜದಲ್ಲಿ ಈ ಮಕ್ಕಳು ಉನ್ನತ ಸ್ಥಾನ ಪಡೆಯಲು ಸಹಕಾರಿಯಾಗುತ್ತವೆ. ಈ ಮಕ್ಕಳು ಧರಿಸಿಸರುವ ಬಟ್ಟೆ ಕುಳಿತಿರುವ ಶಿಸ್ತು ಇದಕ್ಕೆ ಸಾಕ್ಷಿ ಎಂದು ರಾಯಬಾಗ ತಾಲೂಕಾ ಪಂಚಾಯ್ತಿ ಅದ್ಯಕ್ಷೆ ಸುಜಾತಾ ಪಾಟೀಲ ಹೇಳಿದರು.

ಇವರು ಸಮೀಪದ ಏಬರಟ್ಟಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ತಾಲೂಕಾ ಮಟ್ಟದ ಸ್ಕೌಟ್ಸ್ ಗೈಡ್ಸ್ ರಾಲಿಯನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಅದ್ಯಕ್ಷತೆಯನ್ನು ಗ್ರಾ.ಪಂ ಅದ್ಯಕ್ಷೆ ಮಹಾದೇವಿ ಗಾಣಿಗೇರ ವಹಿಸಿದ್ದರು, ತಾಲೂಕ ಪಂ. ಮಾಜಿ ಅದ್ಯಕ್ಷ ರವಿಶಂಕರ ನರಗಟ್ಟಿ, ಭೂ ದಾನಿಗಳಾದ ತಮ್ಮನಗೌಡ ಪಾಟೀಲ ಮತ್ತು ಶಂಕರಗೌಡ ಪಾಟೀಲ,. ಪಂ. ಉಪಾದ್ಯಕ್ಷರಾದ ಹಸಿನಾ ನದಾಪ, ಜಿಲ್ಲಾ ಸ್ಕೌಟ್ಸ ಗೈಡ್ಸ ತರಬೇತಿ ಆಯುಕ್ತರಾದ ಆರ್.ಎ.ನಿಂಬಾಳಕರ, ತಾಲೂಕಾ ದೈಹಿಕ ಶಿಕ್ಷಣ ಪರಿವೀಕ್ಷಕ ಡಿ.ಎಸ್.ಡಿಗ್ರಜ, ಸ್ಕೌಟ್ಸ್ನ ತಾಲೂಕಾ ಕಾರ್ಯದಶರ್ಿ ವಾಯ್.ಕೆ.ಭಜಂತ್ರಿ  ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸಮವಸ್ತ್ರ ದಾನಿಗಳಾದ ಮಾರುತಿ ಗಲಗಲಿ ಇವರನ್ನು ಸನ್ಮಾನಿಸಲಾಯಿತು. ಶಿಕ್ಷಕಿ ಎಸ್.ಎ.ದೇಸಾಯಿ ಸ್ವಾಗತಿಸಿದರು, ಜಿ.ಎ. ಗೌಡರ ನಿರೂಪಿಸಿದರು, ಬಿ.ಆರ್ ದಟವಾಡ ವಂದಿಸಿದರು. 

ರ್ಯಾಲಿಗೆ ಚಾಲನೆ: ವಕೀಲರಾದ ಉದಯಕುಮಾರ ಮೋಳೆ, ಎಸ್.ಡಿ.ಎಂ.ಸಿ. ಸದಸ್ಯ ಮಹಮ್ಮದ ನದಾಪ, ಸ್ಕೌಟ್ಸ ದ್ವಜ ಹಾರಿಸಿ ಡ್ರಮ್ ಬಾರಿಸಿ ಸ್ವಚ್ಛತೆ ಮತ್ತು ಜಾಗೃತಾ ರ್ಯಾಲಿಗೆ ಚಾಲನೆ ನೀಡಿದರು.

  ರ್ಯಾಲಿಯಲ್ಲಿ ತಾಲೂಕಿನ ವಿವಿಧ ಶಾಲೆಗಳಿಂದ ಆಗಮಿಸಿದ ಸ್ಕೌಟ ಮತ್ತು ಗೈಡ ಮಕ್ಕಳು ಹಾಗೂ ಸ್ಕೌಟ ಮಾಸ್ಟರ್ರ ಗೈಡ ಕ್ಯಾಪ್ಟನ್ಸ ಪಾಲಗೊಂಡು ಊರಿನ ಪ್ರಮುಖ ಬೀದಿಗಳಲ್ಲಿ ಸ್ವಚ್ಛತೆ, ಶೌಚಾಲಯ ಬಳಕೆ, ಶುದ್ಧ ಕುಡಿಯುವ ನೀರಿನ ಕುರಿತು ತಿಳುವಳಿಕೆ ನೀಡಿದರು. ನಂತರ ಬಸ್ ನಿಲ್ದಾಣ, ಮಠ ಹಾಗೂ ಊರಿನ ಪ್ರಮುಖ ರಸ್ತೆಗಳನ್ನು ಮುಖ್ಯೋಪಾದ್ಯಾಯ ಎ.ಬಿ ಕವಲಗುಡ್ಡ ನೇತೃತ್ವದಲ್ಲಿ ಸ್ವಚ್ಛಗೊಳಿಸಲಾಯಿತು.

ನಂತರ ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ರಾಯಬಾಗ ಕ್ಷೇತ್ರಶಿಕ್ಷಣಾಧಿಕಾರಿ ಸಿ. ಆರ್. ಓಣಿಮಠ ಮಾತನಾಡಿ ರಾಯಬಾಗ ತಾಲೂಕಿನಲ್ಲಿ ಸುಮಾರು 80 ಜನ ಶಿಕ್ಷಕರು ಸ್ಕೌಟ್ಸ ತರಬೇತಿ ಹೊಂದಿದ್ದು ಮಕ್ಕಳಿಗೆ ಒಳ್ಳೆಯ ತರಬೇತಿ ನೀಡಿ ಮಕ್ಕಳಲ್ಲಿ ಶಿಸ್ತು ಸೇವಾ ಮನೋಭಾವ ಬೆಳೆಸಬೇಕು ಎಂದರು. ಯಬರಟ್ಟಿ ಶಾಲೆಯ ಸ್ಕೌಟ ಮಾಸ್ಟರ ಕೆ. ಎಸ್ ಹುಣಸಿಕಟ್ಟಿ ಹಾಗೂ ಗೈಡ್ ಕ್ಯಾಪ್ಟನ ಶ್ರೀಮತಿ ಎಸ್.ಎ. ದೇಸಾಯಿ ಹಾಗೂ ಶಾಲೆಯ ಎಲ್ಲ ಶಿಕ್ಷಕ ವೃಂದ ರ್ಯಾಲಿಯ ನೇತೃತ್ವ ವಹಿಸಿದ್ದರು.