ವಿಕಲಚೇತನರ ಕುಂದು ಕೊರತೆ ಸಭೆ ;ಜಿಲ್ಲೆಯಲ್ಲಿ 42 ಕೋಟಿ ರೂ. ಅಂಗವಿಕಲರಿಗೆ ಮಾಶಾಸನ


ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ಎಲ್ಲ ವಿಕಲಚೇತನರಿಗೆ ಒಟ್ಟು 42 ಕೋಟಿ ರೂ. ಮಾಶಾಸನ ನೀಡಲಾಗುತ್ತಿದೆ ಎಂದು ಅಂಗವಿಕಲರ ವ್ಯಕ್ತಿಗಳ ಹಕ್ಕುಗಳ ಅಧಿನಿಯಮದ ಆಯುಕ್ತರಾದ ವಿ.ಎಸ್.ಬಸವರಾಜು ಹೇಳಿದರು.

ಜಿಲ್ಲಾ ಪಂಚಾಯತ ಸಭಾಭವನದಲ್ಲಿಂದು ಜರುಗಿದ ವಿಕಲಚೇತನರ ಕುಂದು ಕೊರೆತೆ ಸಭೆಯ            ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಶೇ.90 ರಷ್ಟು ಅಂಗವಿಕಲರು ಪಿಂಚಣಿ ಪಡೆಯುತ್ತಿದ್ದಾರೆ. ಅಂಗವಿಕಲರ ಅಭಿವೃದ್ದಿಗೆ ಸರಕಾರ ಇಷ್ಠೊಂದು ಹಣ ಖಚರ್ು ಮಾಡುತ್ತಿದ್ದು, ಅವರನ್ನು ಮುಖ್ಯ ವಾಹಿನಿಗೆ ತರುವ ಕೆಲಸವಾಗಬೇಕು. ಜಿಲ್ಲೆಯಲ್ಲಿರುವ ಎಲ್ಲ ಸರಕಾರಿ ಕಟ್ಟಡಗಳಿಗೆ ರ್ಯಾಂಪ್ ವ್ಯವಸ್ಥೆ ಕಲ್ಪಿಸಬೇಕು. ಲೋಕೋಪಯೋಗಿ ಇಲಾಖೆಯವರು ತಮ್ಮ ವ್ಯಾಪ್ತಿಯಲ್ಲಿ ನಿಮರ್ಿಸಲಾದ ಕಟ್ಟಡಗಳಲ್ಲಿ ರ್ಯಾಂಪ್ ಸೌಲಭ್ಯ ಇದ್ದ ಬಗ್ಗೆ ಮಾಹಿತಿ ನೀಡಬೇಕು. ರ್ಯಾಂಪ್ ಇಲ್ಲದ ಕಟ್ಟಡಗಳಲ್ಲಿ ಅಂಗವಿಕಲರಿಗೆ ಮೀಸಲಿರಿಸಲಾದ ಶೇ.5 ರಷ್ಟು ಅನುದಾನದಲ್ಲಿ ರ್ಯಾಂಪ್ ನಿಮರ್ಿಸುವ ಕೆಲಸವಾಗಬೇಕೆಂದು ಸೂಚಿಸಿದರು.

ಜಿಲ್ಲೆಯಲ್ಲಿರುವ ಅಂಗವಿಕಲರಿಗಿರುವ ಸೌಲಭ್ಯಗಳ ಕುರಿತು ಎಂ.ಆರ್.ಡಬ್ಲೂ, ಎ.ಆರ್.ಡಬ್ಲುಗಳಿಗೆ ತರಬೇತಿ ನೀಡುವುದು ಅಗತ್ಯವಾಗಿದ್ದು, ಜಿಲ್ಲಾ ಮಟ್ಟದಲ್ಲಿ ತರಬೇತಿ ಕಾಯರ್ಾಗಾರ ಹಮ್ಮಿಕೊಳ್ಳುವಂತೆ ಸೂಚಿಸಲಾಯಿತು. ಅಲ್ಲದೇ ತಾಲೂಕಾ ಮಟ್ಟದಲ್ಲಿ ತಹಶೀಲ್ದಾರ ನೇತೃತ್ವದಲ್ಲಿ ಪ್ರತಿ ತಿಂಗಳಿಗೊಮ್ಮೆ ಅಂಗವಿಕಲರ ಕುಂದು ಕೊರತೆ ಸಭೆ ನಡೆಸಬೇಕು. ಈ ಸಭೆಯಲ್ಲಿ ಆಯಾ ತಾಲೂಕಾ ಎಂ.ಆರ್.ಡಬ್ಲೂಗಳು ತಮ್ಮ ವ್ಯಾಪ್ತಿಯಲ್ಲಿರುವ ಅಂಗವಿಕಲರ ಕುಂದು ಕೊರತೆಗಳ ಪಟ್ಟಿ ಮಾಡಿಕೊಂಡು ಸಭೆಯಲ್ಲಿ ಚಚರ್ಿಸಿ ನಿವಾರಿಸುವ ಕೆಲಸವಾಗಬೇಕೆಂದರು.

ಆಸ್ತಿ ವಿವಾದಕ್ಕೆ ಸಂಬಂಧಿಸಿದ ಅಂಗವಿಕಲರ ವ್ಯಾಜ್ಯಗಳು ಇದ್ದಲ್ಲಿ ಸಂಬಂಧಿಸಿದ ತಹಶೀಲ್ದಾರರ ಜೊತೆ ಎಂ.ಆರ್.ಡಬ್ಲೂಗಳು ಸಂಪಕರ್ಿಸಿ ಮಾಹಿತಿ ಪಡೆದು ವ್ಯಾಜ್ಯಗಳನ್ನು ಇತ್ಯರ್ಥ ಪಡಿಸುವ ಕೆಲಸವಾಗಬೇಕೆಂದರು. ಸರಕಾರಿ ಕಚೇರಿಯಲ್ಲಿ ಅಂಗವಿಕಲರು ಇದ್ದಲ್ಲಿ ಅವರಿಗೆ ಎಲ್ಲ ರೀತಿಯ ವ್ಯವಸ್ಥೆ ಕಲ್ಪಿಸಬೇಕು. ತಹಶೀಲ್ದಾರರ ಜೊತೆಗೆ ಸಂಪರ್ಕದಲ್ಲಿದ್ದು, ಕಂದಾಯ ಇಲಾಖೆಯಲ್ಲಿ ಅಂಗವಿಕಲರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದು ಅವರಿಗೆ ಮುಟ್ಟಿಸುವ ಕೆಲಸವಾಗಬೇಕೆಂದು ಆಯುಕ್ತರು ತಿಳಿಸಿದರು. ಪ್ರತಿ ತಾಲೂಕಿನಲ್ಲಿ ಅಂಗವಿಕಲರ ಮಾಶಾಸನ ಆಂದೋಲ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಸಭೆಗೆ ತಿಳಿಸಲಾಯಿತು.

ಅಂಗನವಾಡಿ ಕಾರ್ಯಕತರ್ೆ ಹುದ್ದೆಯಲ್ಲಿ ಅಂಗವಿಕಲರಿಗೆ ಆದ್ಯತೆ ನೀಡುತ್ತಿಲ್ಲವೆಂದು ಹುನಗುಂದ ತಾಲೂಕಿನ ಅಂಗವಿಕಲ ಮಹಿಳೆಯ ಸಭೆಗೆ ತಿಳಿಸಿದಾಗ ಈ ಕುರಿತು ಕ್ರಮಕೈಗೊಳ್ಳಲು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿದರ್ೇಶಕರಿಗೆ ಸೂಚಿಸಲಾಯಿತು. ಮಾಶಾಸನಕ್ಕೆ ಅಜರ್ಿ ಸಲ್ಲಿಸುವ ಅಂಗವಿಕಲರ ಕುಟುಂಬದ ಆದಾಯದ ಪ್ರಮಾಣವನ್ನು ಹೆಚ್ಚಿಸಬೇಕು. ಹಾಗೂ ನ್ಯಾಯ ಬೆಲೆ ಅಂಗಡಿ ಲೈಸನ್ಸ್ ನೀಡುವಲ್ಲಿ ಅಂಗವಿಕಲರಿಗೆ ಆದ್ಯತೆ ನೀಡುವ ಕುರಿತು ಹುನಗುಂದ ತಹಶೀಲ್ದಾರ ಆಯುಕ್ತರ ಗಮನಕ್ಕೆ ತಂದಾಗ ಈ ಕುರಿತು ಚಚರ್ಿಸಿ ಕ್ರಮಕೈಗೊಳ್ಳಲಾಗುವುದೆಂದರು. ಸಭೆಯಲ್ಲಿ ಅಂಗವಿಕಲರು ತಮ್ಮ ಸಮಸ್ಯೆಗಳನ್ನು ಆಯುಕ್ತರ ಬಳಿೆ ತೋಡಿಕೊಂಡರು. ಸಮಸ್ಯೆಗೆ ಕ್ರಮಕ್ಕಾಗಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಅಂಗವಿಕಲರ ವ್ಯಕ್ತಿಗಳ ಹಕ್ಕುಗಳ ಅಧಿನಿಯಮದ ಉಪ ಆಯುಕ್ತರಾದ ಎಸ್.ಕೆ.ಪದ್ಬನಾಮ, ಉಪವಿಭಾಗಾಧಿಕಾರಿ ಶಂಕರಗೌಡ ಸೋಮನಾಳ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಪ್ರಭಾರಿ ಉಪನಿದರ್ೇಶಕ ಬಸವರಾಜ ಶಿರೂರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ತಹಶೀಲ್ದಾರರು, ಆಯಾ ತಾಲೂಕಿನ ಎಂ.ಆರ್.ಡಬ್ಲೂ ಹಾಗೂ ಅಂಗವಿಕಲರು 

ಉಪಸ್ಥಿತರಿದ್ದರು.