ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಮಹಿಳೆಯರಿಗೆ ಸ್ಫೂರ್ತಿ ನೀಡಿದೆ: ಸರ್ವೋತ್ತಮ ಜಾರಕಿಹೊಳಿ

Dharmasthala Village Development Scheme has inspired women: Sarvottam Jarakiholi

ವರದಿ ಮುರಿಗೆಪ್ಪ ಮಾಲಗಾರ  

ಹಳ್ಳೂರ 17.ಮೂಡಲಗಿ ತಾಲೂಕಿನ ತುಕಾನಟ್ಟಿ  ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್‌ (ರಿ.) ಧರ್ಮಸ್ಥಳ ಪ್ರಾಯೋಜಿತ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮ ನಡೆಯಿತು.   

ಕಾರ್ಯಕ್ರಮದ  ಅಧ್ಯಕ್ಷತೆ ವಹಿಸಿದ್ದ ಯುವ ನಾಯಕರು ಮತ್ತು ಲಕ್ಷ್ಮೀ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಸರ್ವೋತ್ತಮ್ ಜಾರಕಿಹೊಳಿಯವರು ಮಾತನಾಡುತ್ತಾ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧ್ಯಕ್ಷರಾದ ಡಾ. ಡಿ ವೀರೇಂದ್ರ ಹೆಗಡೆಯವರು ಮಹಿಳಾ ಸಶಕ್ತೀಕರಣ ಮತ್ತು ಮಹಿಳೆಯರನ್ನು ಸಮಾಜ ಮುಖಿಯಾಗಿಸಲು ಅನೇಕ ವಿಚಾರಧಾರೆಗಳನ್ನು ಅಳವಡಿಸಿಕೊಂಡು ಈ ಭಾಗದ ಜನರಿಗೆ ಸಾಕಷ್ಟು ಕಾರ್ಯಕ್ರಮಗಳನ್ನು ನೀಡಿದ್ದಾರೆ.ವಿಶೇಷವಾಗಿ ಮಹಿಳೆಯರಿಗೆ ಆಧುನಿಕ ಯುಗದ ವಿಚಾರಧಾರೆಗಳನ್ನು ಗ್ರಾಮೀಣ ಮಟ್ಟದಲ್ಲಿ ತಲುಪಿಸುವಲ್ಲಿ ಮುಂಚೂಣಿಯಲ್ಲಿದ್ದಾರೆ ಇದರಿಂದ ಮಹಿಳಾ ಸಬಲೀಕರಣವಾಗುತ್ತಿದೆ ಎಂದು ಹೇಳಿದರು.   

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್‌ (ರಿ)  ಧಾರವಾಡ ಪ್ರಾದೇಶಿಕ ನಿರ್ದೇಶಕರಾದ ದಯಾಶೀಲ ಅವರು  ಮಾತನಾಡಿ ಗ್ರಾಮೀಣ ಮಟ್ಟದ ಮಹಿಳೆಯರನ್ನು ಸಬಲೆಯನ್ನಾಗಿಸಲು ಅವಳಲ್ಲಿ ಜ್ಞಾನ ಮತ್ತು ಶಕ್ತಿಯನ್ನು ತುಂಬುವ ಪರಿಕಲ್ಪನೆ ಹಾಗೂ ಡಾಕ್ಟರ್ ಹೇಮಾವತಿ ಹೆಗಡೆಯವರ ಕನಸಿನ ಕಾರ್ಯಕ್ರಮವೇ ಜ್ಞಾನ ವಿಕಾಸ ಕಾರ್ಯಕ್ರಮ. ಮಹಿಳೆಯರ ಆಸಕ್ತಿ, ಕಲೆ, ಅಭಿರುಚಿ ಹಾಗೂ  ವಿಚಾರಧಾರೆಗಳ ಅನಾವರಣ ಗೊಳಿಸಲು ಈ ದಿನದ ವಿಚಾರಗಳು ಕಾರ್ಯಕ್ರಮ ಉದಾಹರಣೆಯಾಗಿದೆ ಎಂದು ಹೇಳಿದರು.                          ದಿವ್ಯ ಸಾನಿಧ್ಯ ವಹಿಸಿದ ಮಾತೋಶ್ರೀ ಕಾವ್ಯಾಶ್ರೀ ಅಮ್ಮನವರು ಮಾತನಾದಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳು ಮಹತ್ವಪೂರ್ಣವಾದದ್ದು ಎಂದು ಹೇಳಿದರು.

ಸಿರಿಗನ್ನಡ ಮಹಿಳಾ ವೇದಿಕೆಯ ರಾಜ್ಯಾಧ್ಯಕ್ಷರು ಮತ್ತು ಸಾಹಿತಿಗಳಾದ  ರಜನಿ  ಜೀರಗ್ಯಾಳ ಮಾತನಾಡಿ ಹೆಣ್ಣು ಹುಟ್ಟಿದರೆ ಹುಣ್ಣು ಅಲ್ಲ ಮನೆ ಬೆಳಗುವ ಶಕ್ತಿ ಆಕೆಗೆ ಸೂಕ್ತ ವೇದಿಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಒದಗಿಸಿದೆ ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ  ಜನಜಾಗೃತಿ  ವೇದಿಕೆ ಸದಸ್ಯರಾದ ಬರಮಣ್ಣ ಉಪ್ಪಾರ. ಸಂಪನ್ಮೂಲ ವ್ಯಕ್ತಿಗಳಾದ  ಶೈಲಜಾ  ಕೊಕ್ಕರಿ.  ಶ್ರೀಕುಮಾರ್ ಮರ್ದಿ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಥಣಿ ಜಿಲ್ಲೆಯ ನಿರ್ದೇಶಕರಾದ  ನಾಗರತ್ನ ಹೆಗಡೆ. ಮೂಡಲಗಿ ತಾಲೂಕಿನ ಯೋಜನಾಧಿಕಾರಿಗಳಾದ ರಾಜು ನಾಯಕ್‌. ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು, ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರು ಉಪಸ್ಥಿತರಿದ್ದರು.  ಕಾರ್ಯಕ್ರಮವನ್ನು ಜ್ಞಾನವಿಕಾಸ ಸಮನ್ವಯ ಅಧಿಕಾರಿಯಾದ ವಿಜಯಲಕ್ಷ್ಮಿ ಮುರನಾಳ ನಿರೂಪಿಸಿದರು.