ಲೋಕದರ್ಶನ ವರದಿ
ಮುಧೋಳ 11: ನಗರದಲ್ಲಿ ಮೂಲಭೂತ ಸೌಲಭ್ಯಕ್ಕಾಗಿ ಆಗ್ರಹಿಸಿ ನಡೆಸುತ್ತಿರುವ ಹೋರಾಟ ಶುಕ್ರವಾರ 16 ನೇ ದಿನಕ್ಕೆ ಕಾಲಿರಿಸಿದ್ದು, ಶುಕ್ರವಾರ ನಗರದ ಅಂಬಿಗರ ಚೌಡಯ್ಯ ಸಮಾಜದ ಧುರೀಣರು ಧರಣಿ ಸತ್ಯಾಗ್ರಹಕ್ಕೆ ಬೆಂಬಲ ನೀಡಿದರು.
ಈ ಸಂದರ್ಭದಲ್ಲಿ ಅಂಬಿಗರ ಚೌಡಯ್ಯ ಸಮಾಜದ ಪ್ರಮುಖರು ಮಾತನಾಡಿ, ಮುಧೋಳ ಹಿತರಕ್ಷಣಾ ಸಮಿತಿಯಿಂದ ಹಮ್ಮಿಕೊಳ್ಳಲಾಗಿರುವ ಧರಣಿ ಸತ್ಯಾಗ್ರಹಕ್ಕೆ ಅಂಬಿಗರ ಚೌಡಯ್ಯ ಸಮಾಜದ ವತಿಯಿಂದ ಸಂಪೂರ್ಣ ಬೆಂಬಲ ನೀಡುತ್ತೇವೆ. ನಗರದ ಸವರ್ಾಂಗೀಣ ಅಭಿವೃದ್ಧಿ ಹಾಗೂ ಮೂಲಭೂತ ಸೌಲಭ್ಯ ಒದಗಿಸಬೇಕೆಂದು ಹಾಗೂ ಪಕ್ಷಾತೀತ, ಜಾತ್ಯಾತೀತವಾಗಿ ನಡೆಸುತ್ತಿರುವ ಹೋರಾಟ ಸೂಕ್ತವಾದ ಹೋರಾಟವಾಗಿದೆ. ಏಕೆಂದರೆ ನಮ್ಮ ನಗರ ಅಭಿವೃದ್ಧಿಯಾಗಬೇಕೆಂದು ನಡೆಸುತ್ತಿರುವ ಹೋರಾಟ ನಿಜಕ್ಕೂ ಶ್ಲಾಘನೀಯವಾಗಿದ್ದು, ಅದಕ್ಕೆ ಎಲ್ಲರೂ ಕೈಜೋಡಿಸಿದರೆ ಮಾತ್ರ ನಾವು ಯಶಸ್ಸು ಪಡೆಯಲು ಸಾಧ್ಯ.
ಇಲ್ಲಿಯವರೆಗೂ ಜನಪ್ರತಿನಿಧಿಗಳು, ಅಧಿಕಾರಿಗಳು ಸಾರ್ವಜನಿಕರ ಮೂಲಭೂತ ಸೌಕರ್ಯಕ್ಕೆ ಸ್ಪಂದಿಸದೇ ಇದ್ದುದರಿಂದ ಈ ಹೋರಾಟ ಅನಿವಾರ್ಯವಾಗಿದ್ದು, ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ, ಒಳಚರಂಡಿ ಕಳಪೆ ಕಾಮಗಾರಿ, ಹದಗೆಟ್ಟ ರಸ್ತೆಗಳು ಹಾಗೂ ಇನ್ನಿತರ ಮೂಲಭೂತ ಸೌಲಭ್ಯಗಳಿಗಾಗಿ ಅಧಿಕಾರಿಗಳನ್ನು ಭೇಟಿಯಾದರೂ ಯಾವುದೇ ರೀತಿಯಲ್ಲಿ ಸ್ಪಂದಿಸಿರಲಿಲ್ಲ.
ಮುಧೋಳ ಪುರಸಭೆ ಈಗ ನಗರಸಭೆಯಾಗಿ ಮೇಲ್ದಜರ್ೆಗೆ ಏರಿದ್ದು, ಸಕರ್ಾರದಿಂದ ಕೋಟ್ಯಾಂತರ ಹಣ ಅಭಿವೃದ್ಧಿಗಾಗಿ ಬರುತ್ತದೆ. ಆದರೆ ಈ ಹಣ ಏನಾಗುತ್ತಿದೆ ಎಂಬುದು ತಿಳಿಯುತ್ತಿಲ್ಲ ಎಂದರು. ಯಾವಾಗ ಕೇಳಿದರೂ ನಿಮ್ಮ ಕಾರ್ಯ ಮಾಡಲು ಟೆಂಡರ್ ಕರೆಯಲಾಗಿದೆ ಅದು ಮುಗಿದ ಕೂಡಲೇ ನಿಮ್ಮ ಕಾರ್ಯ ಮಾಡುತ್ತೇವೆಂದು ಹೇಳುತ್ತಾರೆಯೇ ವಿನಹ ಯಾವುದೇ ಕಾರ್ಯ ಮಾಡುತ್ತಿಲ್ಲ. ಅಲ್ಲದೇ ನಗರದಲ್ಲಿ ಅಭಿವೃದ್ಧಿ ಕರ, ಮನೆಗಳ ಕರ, ಅಂಗಡಿಗಳ ಕರ, ನೀರಿನ ಕರ ಎಂದು ಇತ್ಯಾದಿ ಕರಗಳ ಸಂಗ್ರಹಣೆಯಿಂದ ಬೇಕಾದ ಹಾಗೆ ಅಭಿವೃದ್ಧಿ ಕಾರ್ಯ ಮಾಡಬಹುದಾಗಿದೆ.
ನಗರಸಭೆ ವ್ಯಾಪ್ತಿಯಲ್ಲಿ ಬರುವ ಕಾಖರ್ಾನೆಗಳಿಂದ ಕೂಡಾ ಟ್ಯಾಕ್ಸ್ ವಸೂಲಿ ಮಾಡಲಾಗುತ್ತದೆ. ಈ ಹಣ ಎಲ್ಲಿ ಹೋಗುತ್ತಿದೆ ಎಂಬುದು ತಿಳಿಯುತ್ತಿಲ್ಲ. ನಾವು ಆರಿಸಿ ಕಳುಹಿಸಿದ ಜನಪ್ರತಿನಿಧಿಗಳು ತಮಗೇನೂ ಸಂಬಂಧವಿಲ್ಲವೆಂದು ಹಾರಿಕೆ ಉತ್ತರ ನೀಡುತ್ತಾರೆ. ಹೀಗಾಗಿ ನಗರದ ಎಲ್ಲರೂ ನಮಗೆ ಮೂಲಭೂತ ಸೌಕರ್ಯಕ್ಕಾಗಿ ಹೋರಾಟ ಮಾಡುವುದು ಅನಿವಾರ್ಯವಾಗಿದೆ. ಹೋರಾಟದ ಮೂಲಕ ನಮ್ಮ ಮೂಲಭೂತ ಸೌಲಭ್ಯ ಪಡೆಯುವ ಪರಿಸ್ಥಿತಿ ಬಂದಿರುವುದು ನಿಜಕ್ಕೂ ನಾಚಿಕೇಡಿತನ ಸಂಗತಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಶಂಕರ ತೋರಗಲ್, ಶ್ರೀಕಾಂತ ಕೋಳಿ, ಶಿವಾನಂದ ಹೊಳೆಬೆನ್ನೂರ, ಭೀಮಶಿ ಹುನ್ನೂರ, ಪ್ರಭು ಸುಣಗಾರ, ನಾಗಪ್ಪ ಅಂಬಿ ಚಿನ್ನು ಅಂಬಿ, ಚಂದ್ರಕಾಂತ ಹುಡೇದ, ಕಲ್ಲಪ್ಪ ಉಳ್ಳಾಗಡ್ಡಿ, ಸದಾಶಿವ ಕೋಳಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು