ಗ್ರಾಮಗಳ ಅಭಿವೃದ್ಧಿಯೇ ನನ್ನ ಗುರಿ: ಷರೀಫ ಮುಲ್ಲಾ

Development of villages is my goal: Sharif Mulla

ಅಥಣಿ 22: ಪಾರ್ಥನಹಳ್ಳಿ ಪಂಚಾಯತ ವ್ಯಾಪ್ತಿಯ ಮಾಯನಟ್ಟಿ, ಅಬ್ಬಿಹಾಳ, ಅಗ್ರಾಣಿ ಇಂಗಳಗಾಂವ ಗ್ರಾಮಗಳ ಅಭಿವೃದ್ಧಿಯೇ ನನ್ನ ಗುರಿಯಾಗಿದೆ ಎಂದು ಷರೀಫ ಮುಲ್ಲಾ ಹೇಳಿದರು. ಅವರು ತಮ್ಮ ವಿರುದ್ಧದ ಅವಿಶ್ವಾಸ ಗೊತ್ತುವಳಿಯ ಠರಾವ್ ವಿಫಲಗೊಂಡ ನಂತರ ಕಾಂಗ್ರೆಸ್ ಮುಖಂಡ ಅಸ್ಲಂ ನಾಲಬಂದ ಮನೆ ಆವರಣದಲ್ಲಿ ನಡೆದ ವಿಜಯೋತ್ಸವದಲ್ಲಿ ಪಾಲ್ಗೊಂಡು ಪಾರ್ಥನಹಳ್ಳಿಯಲ್ಲಿ  ಮಾತನಾಡುತ್ತಿದ್ದರು.         

ಕೆಲ ಅಭಿವೃದ್ಧಿ ವಿರೋಧಿಗಳು ಅವಿಶ್ವಾಸ ಗೊತ್ತುವಳಿ ಮಂಡಿಸಬೇಕು ಎಂದು ಮನವಿ ಮಾಡಿದ್ದರು ಆದರೆ ಅವರಿಗೆ ನಮ್ಮ ಪಂಚಾಯತ ಸದಸ್ಯರು ಬೆಂಬಲ ಕೊಡಲಿಲ್ಲ  ಹೀಗಾಗಿ ಅವರ ಗೊತ್ತುವಳಿ ವಿಫಲಗೊಂಡಿದೆ ಎಂದ ಅವರು ನಮ್ಮ ಜೊತೆಗಿದ್ದ ಸದಸ್ಯರ ಜೊತೆಗೆ ಎಲ್ಲ 19 ಸದಸ್ಯರನ್ನು ವಿಶ್ವಾಸಕ್ಕೆ ಪಡೆದು ಗ್ರಾಮ ಪಂಚಾಯತ ವ್ಯಾಪ್ತಿಯ ಗ್ರಾಮಗಳಲ್ಲಿ ಅಭಿವೃದ್ಧಿ, ಜನಪರ ಕಾರ್ಯಗಳನ್ನು ಅನುಷ್ಢಾನಗೊಳಿಸುವುದಾಗಿ ಹೇಳಿದರು.          

ಕಳೆದ 18 ತಿಂಗಳುಗಳಿಂದ ಯಶಸ್ವಿಯಾಗಿ ಅಧಿಕಾರ ನಡೆಸುತ್ತಿದ್ದರೂ ಕೂಡ ವಿರೋಧಿಗಳ ಅವಿಶ್ವಾಸ ಗೊತ್ತುವಳಿಯ ಕುತಂತ್ರ ಫಲಿಸಲಿಲ್ಲ ಎಂದ ಅವರು  ಕಾಂಗ್ರೆಸ್ ಮುಖಂಡ ರಫಿಕ್ ಪಟೇಲ್  ಮತ್ತು ಅನೇಕ ಮುಖಂಡರು ಅವಿಶ್ವಾಸ ಗೊತ್ತುವಳಿ ವಿಫಲಗೊಳಿಸುವಲ್ಲಿ ಶ್ರಮಿಸಿದ್ದು, ಎಲ್ಲ ಮುಖಂಡರಿಗೆ ಮತ್ತು ನನ್ನನ್ನು ಬೆಂಬಲಿಸಿದ ಸದಸ್ಯರನ್ನು ಅಭಿನಂದಿಸಿದರು.        

ವಿಜಯೋತ್ಸವದಲ್ಲಿ ಗ್ರಾಮ ಪಂಚಾಯತ ಸದಸ್ಯರಾದ ಸದಾಶಿವ ಬಿರಾದಾರ, ಪಾಪು ಮೋಳೆ, ಮಾಯವ್ವಾ ಅಣ್ಣಪ್ಪಾ  ಸಿಂಗಾಡಿ, ಅಸ್ಲಂ ಪಟೇಲ್, ರಾಣಪ್ಪಾ ಕಾಂಬಳೆ, ನಿಂಗವ್ವಾ ಸನದಿ, ಬಿರಬಲ್ ಬಿರಾದಾರ, ಧುರೀಣರಾದ ಅಸ್ಲಂ ನಾಲಬಂದ, ರಫಿಕ್ ಪಟೇಲ್, ಇಲಾಹಿ ಮೋಳೆ, ಸಿಕಂದರ ಪಟೇಲ್, ಇಸ್ಮಾಯಿಲ್ ಪಟೇಲ್,  ರಮೇಶ ಕಾಂಬಳೆ, ಬಂಡು ನಾಯಿಕ, ನಿಂಗಪ್ಪಾ ಗಡದೆ, ಮದಗೊಂಡ ತರಗಿ, ವೀರಭದ್ರ ಲೋನಾರೆ, ಭಾವುಸಾಬ ಕಾಂಬಳೆ, ಮಾರುತಿ ನಾಯಿಕ, ರೇವಣ್ಣಾ ಬಿರಾದಾರ, ಶ್ರೀಧರ ಗಡದೆ, ಬಾಳಪ್ಪಾ ಬಿರಾದಾರ, ರೋಹಿತ ಬಡಿಗೇರ ಪಾಲ್ಗೊಂಡಿದ್ದರು.