ಲೋಕದರ್ಶನ ವರದಿ
ಗೋಕಾಕ 24: ರಾಜಕೀಯ ಬದಲಾವಣೆಯಿಂದ ಅಭಿವೃದ್ದಿ ಸಾಧ್ಯ, ಈ ಬಾರಿ ಕಾಂಗ್ರೇಸ್ ಪಕ್ಷವನ್ನು ಬೆಂಬಲಿಸಿ ಕ್ಷೇತ್ರದ ಅಭಿವೃದ್ದಿಗೆ ಅವಕಾಶ ಕಲ್ಪಿಸುವಂತೆ ಮಾಜಿ ಸಚಿವ ಹಾಗೂ ಶಾಸಕ ಸತೀಶ ಜಾರಕಿಹೊಳಿ ಹೇಳಿದರು.
ಬುಧವಾರದಂದು ರಾತ್ರಿ, ನಗರದ ಸೋಮವಾರ ಪೇಠ ಹಾಗೂ ಮರಾಠಾ ಗಲ್ಲಿಯಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಅವರು, ಕೆಲವೇ ವ್ಯಕ್ತಿಗಳ ಕಪಿಮುಷ್ಠಿಯಲ್ಲಿ ಸಿಲುಕಿ ನಗರ ಅಭಿವೃದ್ದಿಯಲ್ಲಿ ವಿಮುಖವಾಗಿದೆ. ಅಭಿವೃದ್ದಿಗಾಗಿ ಕಾಂಗ್ರೇಸ್ ಅಭ್ಯರ್ಥಿ ಲಖನ ಜಾರಕಿಹೊಳಿ ಅವರನ್ನು ಬೆಂಬಲಿಸಿ ರಾಜಕೀಯ ಶಕ್ತಿಯನ್ನು ನೀಡುವಂತೆ ವಿನಂತಿಸಿದರು.
ಕಾಂಗ್ರೇಸ್ ಮುಖಂಡ ಲಖನ ಜಾರಕಿಹೊಳಿ ಅವರು ಮಾತನಾಡಿ, ಅಭಿವೃದ್ದಿ ಕಾರ್ಯಗಳನ್ನು ಮಾಡುವವರಿಗೆ ತಮ್ಮ ಅಮೂಲ್ಯವಾದ ಮತವನ್ನು ನೀಡಿ. ನಗರಾಭಿವೃದ್ದಿಗೆ ಇಲ್ಲಿಯ ಜನತೆಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಕಾಂಗ್ರೇಸ್ನ ಭದ್ರಕೋಟೆಯಾದ ಗೋಕಾಕ ಮತಕ್ಷೇತ್ರದಲ್ಲಿ ತಮ್ಮ ಮತದೊಂದಿಗೆ ಆಶಿರ್ವದಿಸಿ ತಮ್ಮ ಸೇವೆಯನ್ನು ಮಾಡಲು ಅವಕಾಶ ಕಲ್ಪಿಸಿಕೊಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಪ್ರಕಾಶ ಮುರಾರಿ, ಲಕ್ಷ್ಮೀ ದೇಶನೂರ, ಭಗವಂತ ಹುಳ್ಳಿ, ಮುಖಂಡರಾದ ದಶರಥ ಗುಡ್ಡದಮನಿ, ಫಕೀರಪ್ಪ ತೇರದಾಳ, ಪ್ರಭಾಕರ ಚವ್ಹಾಣ, ಬಸವರಾಜ ದೇಶನೂರ, ಮಲ್ಲಿಕಾರ್ಜುನ ಹೊಸಪೇಟೆ, ಬಸವರಾಜ ಸಾಯಣ್ಣವರ, ರಂಗನಾಥ ಸಾತಪುತೆ ಸೇರಿದಂತೆ ಅನೇಕರು ಇದ್ದರು.