ರಾಯಬಾಗ 07: ಮತಕ್ಷೇತ್ರದ ಮುಖ್ಯ ರಸ್ತೆ ಮತ್ತು ತೋಟಪಟ್ಟಿಗಳ ರಸ್ತೆಗಳನ್ನು ಸುಧಾರಿಸುವುದರ ಮೂಲಕ ಅಭಿವೃದ್ಧಿ ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ಡಿ.ಎಮ್.ಐಹೊಳೆ ಹೇಳಿದರು.
ಶನಿವಾರ ತಾಲೂಕಿನ ನಂದಿಕುರಳಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಮಂಜೂರಾದ 1 ಕೋಟಿ ರೂ. ಅನುದಾನದಲ್ಲಿ 6 ಕಿ.ಮೀ. ನಸಲಾಪುರ-ನಂದಿಕುರಳಿ ರಸ್ತೆ ಸುಧಾರಣೆ ಹಾಗೂ ಜಿ.ಪಂ.ಇಲಾಖೆಯಿಂದ ಎಸ್.ಸಿ, ಎಸ್.ಟಿ ಯೋಜನೆಯಡಿ ಮಂಜೂರಾದ 5 ಲಕ್ಷ ರೂ. ಅನುದಾನದಲ್ಲಿ ಪಿರ್ಪ ಕಾಂಬಳೆ ಮನೆಯಿಂದ ರಾಜು ಕಾಂಬಳೆ ಮನೆ ವರೆಗೆ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ರಸ್ತೆ ಸುಧಾರಣೆಯಿಂದ ರೈತರು ಬೆಳೆದ ಬೆಳೆಗಳನ್ನು ಮಾರುಕಟ್ಟೆಗೆ ಶೀಘ್ರವಾಗಿ ತಲುಪಿಸಲು ಅನುಕೂಲವಾಗುತಿದೆ ಎಂದು ಹೇಳಿದರು.
ಗುತ್ತಿಗೆದಾರ ಗುಣಮಟ್ಟದಿಂದ ರಸ್ತೆಯನ್ನು ನಿರ್ಮಿಸಬೇಕೆಂದು ಸೂಚಿಸಿದರು. ಲೋಕೋಪಯೋಗಿ ಇಲಾಖೆ ಎಇಇ ಆರಿ್ಬ.ಮನವಡ್ಡರ, ಎಇ ಆರಿ್ಪ.ಅವತಾಡೆ, ಜಿ.ಪಂ.ಎಇಇ ರಾಜೇಶ ಡಂಗ, ಗ್ರಾ.ಪಂ.ಉಪಾಧ್ಯಕ್ಷ ಅಮಿತ ಜಾಧವ, ಪೃಥ್ವಿರಾಜ ಜಾಧವ, ಪ್ರಧಾನಿ ಉಪ್ಪಾರ, ದಸ್ತಗಿರ ಮುಲ್ತಾನಿ, ಮಾರುತಿ ಬಾನಕರಿ, ತಾನಾಜಿ ಜಾಧವ, ಮಾರುತಿ ಬಾಪಕರ, ನಾರಾಯಣ ಸಾವಂತ, ರಾಯಪ್ಪ ಗುಂಡಕಲ್ಲೆ, ಮಂಜು ಸಂಗೋಟೆ, ರಾಮು ಬಾನಕಾರಿ, ಮಹೇಶ ಸಾವಂತ, ರಾಜೀವ ಸಾವಂತ, ಹರ್ಷಾ ಮಾಳಿ, ಮಲ್ಲಪ್ಪ ಕಾಂಬಳೆ, ಅಣ್ಣಪ್ಪ ಸಂಗಟೆ, ಸುರೇಶ ಉಮರಾಣಿ ಮುಂತಾದವರು ಇದ್ದರು.