ಕಂಪ್ಲಿ 19: ತಾಲೂಕು ಸಮೀಪದ ಕುಡತಿನಿ ಪಟ್ಟಣದಲ್ಲಿ 2023-24ನೇ ಸಾಲಿನ ಎನ್‌ಎಂಡಿಸಿಯ ಸಿಎಸ್‌ಆರ್ ಅನುದಾನದ ಸುಮಾರು 20 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಸುಸಜ್ಜಿತ ನೂತನ ಗ್ರಂಥಾಲಯ ಬುಧವಾರ ಉದ್ಘಾಟನೆಗೊಂಡಿತು.
ಪಪಂ ಅಧ್ಯಕ್ಷೆ ಬಸಮ್ಮ ಚಂದ್ರಪ್ಪ ಉದ್ಘಾಟಿಸಿ ಮಾತನಾಡಿ, ಇಲ್ಲಿನ ಗ್ರಂಥಾಲಯಕ್ಕೆ ಸಾರ್ವಜನಿಕರು ಭೇಟಿ ನೀಡುವ ಮೂಲಕ ಪುಸ್ತಕ, ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಗ್ರಂಥಾಲಯಗಳು ಪುಸ್ತಕಗಳ ಭಂಡಾರ ಇದ್ದ ಹಾಗೆ. ಅಲ್ಲಿ ಸಿಗುವಂತಹ ಮಾಹಿತಿ ಬಹು ಅಮೂಲ್ಯವಾದುದು. ಯುವಕರು ಸೇರಿದಂತೆ ಜನರು ನಿತ್ಯ ಗ್ರಂಥಾಲಯಗಳಿಗೆ ತೆರಳುವ ಪರಿಪಾಠ ರೂಢಿಸಿಕೊಳ್ಳಬೇಕು. ಅನಕ್ಷರತೆ ಹೋಗಲಾಡಿಸಲು, ಜ್ಞಾನ ಸಂಪಾದನೆಗೆ ಗ್ರಂಥಾಲಯಗಳು ಪೂರಕವಾಗಿವೆ ಎಂದರು.
ಈ ಸಂದರ್ಭದಲ್ಲಿ ಪಪಂ ಸದಸ್ಯರಾದ ರಾಮಲಿಂಗಪ್ಪ, ಹಾಲಪ್ಪ, ಲೆನಿನ್, ಎನ್.ಸುನೀಲ್‌ಕುಮಾರ, ಶಂಕ್ರಮ್ಮ, ರತ್ನಮ್ಮ, ಮುಖ್ಯಾಧಿಕಾರಿ ತೀರ್ಥಪ್ರಸಾದ್, ಬಳ್ಳಾರಿ ನಿರ್ಮಿತಿ ಕೇಂದ್ರದ ಯೋಜನಾ ಅಭಿಯಂತರ ವಿರೇಶ, ಗ್ರಂಥ ಪಾಲಕ ಉಂಡಿ ಹನುಮಪ್ಪ, ಪುರೋಹಿತ ಬಾಲಾಜಿ ಆಚಾರ್, ಮುಖಂಡರಾದ ಪಲ್ಲೇದ್ ಪಂಪಾಪತಿ, ವಿಠೋಬಪ್ಪ, ರಾಮಚಂದ್ರ್ಪ, ಕೃಷ್ಣ, ಜೆ.ಭೀಮೇಶ, ರಾಮಾಂಜನೆಪ್ಪ, ಭೀಮಲಿಂಗಪ್ಪ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.