ಬೇಂದ್ರೆ ಭವನವನ್ನು ಅಭಿವೃದ್ಧಿಪಡಿಸಿ ಸಾಂಸ್ಕ್ರತಿಕ ಚಟುವಟಿಕೆಗಳಿಗೆ ಮುಕ್ತಗೊಳಿಸಿ : ಹಸನ್ ತಹಶೀಲ್ದಾರ ಮನವಿ

Develop Bendre Bhavan and make it open for cultural activities: Hasan Tehsildar appeals

ಶಿರಹಟ್ಟಿ 29 : ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿರುವ ವರಕವಿ ದ.ರಾ.ಬೇಂದ್ರೆ ಅವರ ಸವಿನೆನಪಿಗಾಗಿ ಶಿರಹಟ್ಟಿ ಪಟ್ಟಣದ ಹೃದಯ ಭಾಗದಲ್ಲಿ ನಿರ್ಮಿಸಿರುವ ಬೇಂದ್ರೆ ಭವನವು ಇಂದು ಕಲೆ, ಸಾಹಿತ್ಯ ಸಾಂಸ್ಕ್ರತಿಕ ಚಟುವಟಿಕೆಗಳಿಗೆ ಸದುಪಯೋಗವಾಗದೇ, ಅನೈತಿಕ ಚಟುವಟಿಕೆಗಳ ತಾಣವಾಗಿ ಗುರುತಿಸಿಕೊಳ್ಳುತ್ತಿರುವುದು ದ.ರಾ ಬೇಂದ್ರೆಯವರ ಹೆಸರಿಗೆ ಒಂದು ಕಪ್ಪು ಚುಕ್ಕೆಯಂತಾಗುತ್ತಿದೆ, ಇದನ್ನು ಹೋಗಲಾಡಿಸಲು ಈ ಭವನದಲ್ಲಿ ಮೊದಲು ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಲು ಅನುವು ಮಾಡಿಕೊಟ್ಟರೆ ಮಾತ್ರ ಬೇಂದ್ರೆ ಭವನಕ್ಕೆ ಒಂದು ಮೆರಗು ಬರುತ್ತದೆ ಎಂದು ಕರ್ನಾಟಕ ಪ್ರಜಾಪರ ವೇದಿಕೆ ಶಿರಹಟ್ಟಿ ತಾಲೂಕಾಧ್ಯಕ್ಷ ಹಸನ್ ತಹಶೀಲ್ದಾರ ಹೇಳಿದರು. 

ತಾಲುಕಾಡಳಿತದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿ,  ನಿರುಪಯುಕ್ತವಾಗಿರುವ ಬೇಂದ್ರೆ ಭವನವನ್ನು ಸಾಂಸ್ಕ್ರತಿಕ ಚಟುವಟಿಕೆಗಳ ಮೂಲಕ ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ ಜಗತ್ತಿಗೆ ಪರಿಚಯಿಸುವಂತಹ ಸದುದ್ದೇಶದಿಂದ ಮಾಜಿ ಸಂಸದರಾದ ಪ್ರೋ.ಐ.ಜಿ.ಸನದಿ ಅವರು ಸರ್ಕಾರದ ಅನುದಾನದಡಿಯಲ್ಲಿ ಸಾಂಸ್ಕ್ರತಿಕ ಭವನವನ್ನು ನಿರ್ಮಾಣ ಮಾಡಿಸಿದ್ದು ನಮ್ಮ ಶಿರಹಟ್ಟಿ ಪಟ್ಟಣದ ಪುಣ್ಯವಾಗಿದೆ. ಇಂತಹ ಭವನವು ಇಂದು ಕುಡುಕರ, ಪುಂಡ ಪೋಕರಿಗಳ ತಾಣವಾಗಿ ಪರಿಣಮಿಸಿದೆ. ಇಷ್ಟೇಲ್ಲ ಆದರೂ ಕೂಡ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸಮರ​‍್ಕವಾಗಿ ಈ ಭವನವನ್ನು ನಿರ್ವಹಣೆ ಮಾಡದೇ ನಿರ್ಲಕ್ಷ್ಯ ಮನೋಭಾವ  ತೋರುತ್ತಿರುವುದರಿಂದ ಭವನವು ಪಾಳು ಬಿದ್ದು, ಅನೈತಿಕ ಚಟುವಟಿಕೆಗಳಿಗೆ ಆಸ್ಪದ ಕೊಡುತ್ತಿರುವುದು ಕಲಾ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಆದ್ದರಿಂದ ಜಿಲ್ಲಾಧಿಕಾರಿಗಳು ಶೀಘ್ರವೇ ಭೇಟಿ ಮಾಡಿ ಸಮಸ್ಯೆಗಳನ್ನು ಅವಲೋಕಿಸಿ ಬೇಂದ್ರೆ ಭವನವನ್ನು ಅಭಿವೃದ್ದಿಪಡಿಸಲು ಈ ಭವನಕ್ಕೆ ಅವಶ್ಯಕವಿರುವ ವಿಧ್ಯುತ ದೀಪಗಳ ವ್ಯವಸ್ಥೆ, ಸಿಸಿ ಕ್ಯಾಮೇರಾಗಳ ವ್ಯವಸ್ಥೆಯನ್ನು ಅಳವಡಿಸಿ ಬೇಂದ್ರೆ ಭವನವನ್ನು ಅಭಿವೃದ್ದಿ ಗೊಳಿಸಿ ಭವನದ ಸೌಂದರ್ಯವನ್ನು ಹೆಚ್ಚಿಸುವುದರ ಮೂಲಕ ಸಾರ್ವಜನಿಕರ ಸದುಪಯೋಗಕ್ಕೆ ಅವಕಾಶ ಕಲ್ಪಿಸಿಕೊಡಬೇಕೆಂದು ಮನವಿ ಸಲ್ಲಿಸಿದರು. 

ಈ ಸಂದರ್ಭದಲ್ಲಿ ಅಜ್ಜಪ್ಪ ಬಿಡವೆ, ಸುನೀಲ ಸರ್ಜಾಪೂರ, ಶರೀಫ ಗುಡಿಮನಿ, ಸುನೀಲಗೌಡ ಪಾಟೀಲ, ಪ್ರಕಾಶ ಅಕ್ಕಿ ಇದ್ದರು.