ಪಂಚ ನದಿಗಳು ಹರಿದಿದ್ದರೂ, ಪಟ್ಟಣದಲ್ಲಿ ನೀರಿಗಾಗಿ ಹಾಹಾಕಾರ

Despite the flowing of five rivers, there is a clamor for water in the town

ವರದಿ: ಸಂತೋಷ್ ಕುಮಾರ್ ಕಾಮತ್  

ಮಾಂಜರಿ 29: ಚಿಕ್ಕೋಡಿ ತಾಲೂಕಿನಲ್ಲಿ ಪಂಚ  ನದಿಗಳ ಹರಿದಿವೆ. ಕೃಷ್ಣಾ ನದಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀನು ಇದ್ದರು ಕೂಡಾ ಇದೀಗ ಚಿಕ್ಕೋಡಿ ಪಟ್ಟಣದಲ್ಲಿ ಕುಡಿಯುವ ನೀರಿಗಾಗಿ ಕುಡಿಯುವ ನೀರಿಗಾಗಿ ಹಾಹಾಕಾರ ಶುರುವಾಗಿದೆ. 

ಮಾರ್ಚ ತಿಂಗಳ ಕೊನೆ ವಾರದಲ್ಲಿ ಇದೀಗ ಕುಡಿಯುವ ನೀರಿನ ಆಭವ ಎದುರಾಗುವದಿಂದ ಜನರ   ದಾಹ ತೀರುತ್ತಿಲ್ಲ. ಚಿಕ್ಕೋಡಿ ಪಟ್ಟಣಕ್ಕೆ ಅಂಕಲಿ - ಬಳಿ ಜಾಕ್‌ವೆಲ್ ನಿರ್ಮಾಣ ಮಾಡಲಾಗಿದೆ. ಚಿಕ್ಕೋಡಿ ಪಟ್ಟಣಕ್ಕೆ 24 ಗಂಟೆಗಳ ಕಾಲ ನಿರಂತರ ನೀರ ಒದಗಿಸುವ ಯೋಜನೆಯ  ಈಗಾಗಲೇ ಜಾರಿಯಲ್ಲಿದೆ. ಕೃಷ್ಣಾ ನದಿಗೆ ಪಾಕವೆಲ್ ನಿರ್ಮಾಣ ಮಾಡಲಾಗಿದೆ. ಚಿಕ್ಕೋಡಿ ಪಟ್ಟಣಕ್ಕೆ 24 ಗಂಟೆಗಳ ಕಾಲ ನಿರಂತರ ನೀರು ಒದಗಿಸುವ ಯೋಜನೆ ಈಗಾಗಲೇ ಜಾರಿಯಲ್ಲಿದೆ.  

 ಇದೀಗ 24 ದಿನಗಳಿಗೊಮ್ಮೆ ನೀರನ್ನು ಹರಿಸಲಾಗುತ್ತಿದೆ. ಇದರಿಂದಾಗಿ ಸಂಜಯನಗರ, ಮಾತಂಗಕೇರಿ, ಅಂಬೇಡ್ಕರ್ ನಗರ, ಹಾಲಟ್ಟಿ, ಭೀಮನಗರ, ಮುಲ್ಲಾ ಪ್ಲಾಟ್, ವಿದ್ಯಾನಗರ ರಾಜೀವ ನಗರ ಪಟ್ಟಣದ ಬಹುತೇಕ ಭಾಗಗಳು ಸೇರಿದಂತೆ ಎಲ್ಲಾ ಕಡೆ ಇದೀಗ ನೀರಿಗಾಗಿ ನಾರಿಯರು ನಿತ್ಯ ಪರದಾಡುವಂತಾಗಿದೆ. 

ವಿದ್ಯುತ್ ಕೊರತೆ... 

ಪ್ರತಿ ನಿತ್ಯ ನೀರು ಸರಬಾರಾಜು ಮಾಡುವ ಅಂಕಲಿ ಹಾಗೂ ಕಲ್ಲೋಳ ಬಳಿ ಇರುವ ಜಾಕವೆಲ್ ಬಳಿ ಕುಡಿಯುವ ನೀರಿನ ಹಿತದೃಷ್ಟಿಯಿಂದ 24 - ಗಂಟೆಗಳ ಕಾಲ ವಿದ್ಯುತ್ ಸರಬರಾಜು ಮಾಡಬೇಕು. ಆದರೆ ಹೆಸ್ಕಾಂ ಅಧಿಕಾರಿಗಳು ಪದೇ ಪದೇ ವಿದ್ಯುತ್ ಕಡಿತ ಮಾಡುತ್ತಿರುವದರಿಂದ ಕೃಷ್ಣಾ ನದಿಯಿಂದ ನೀರು ಸರಬರಾಜು ಮಾಡಲು, ಪದೇ ಪದೇ ಲೋಡ ಶೆಡ್ಡಿಂಗ್ ಹಾಗೂ ವಿದ್ಯುತ್ ಅಭಾವವನ್ನು ನಿಲ್ಲಿಸುವಂತೆ ಹೆಸ್ಕಾಂ ಅಧಿಕಾರಿಗಳಿಗೆ ಪುರಸಭೆ ಅಧಿಕಾರಿಗಳು ಪತ್ರ ಬರೆದರು ಅದಕ್ಕೆ ಅವರು ಸ್ಪಂದನೆ ಮಾಡುತ್ತಿಲ್ಲ. ಅಲ್ಲದೆ ಕಲ್ಲೋಳ ಬಳಿ ಪಟ್ಟಣಕ್ಕೆ ನೀರು ಸರಬರಾಜು ಮಾಡುವ ಪೈಪ್‌ಗಳು ಬಹಳ ಹಳೆದಾಗಿವೆ. ಪದೆ ಪದೇ ವಿದ್ಯುತ್ ನಿಂದಾಗಿ ಪೈಸೆಗಳು ಒಡೆಯುತ್ತಿವೆ. ಇದದಿಂದಾಗಿ ಚಿಕ್ಕೋಡಿಗೆ ನೀರು ಸರಬರಾಜಿನಲ್ಲಿ ಸರಿಯಾದ ಸಮಯ ಪಾಲನೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾಗನೂರ ಅವರು ಸುದ್ದಿಗಾರರ ಜೊತೆ ಮಾತನಾಡುವಾಗ ಮಾಹಿತಿ ನೀಡಿದ್ದಾರೆ. 

ಕೃಷ್ಣೆಯಲ್ಲಿ ನೀರು... 

ಇನ್ನು ಚಿಕ್ಕೋಡಿ ಪಟ್ಟಣಕ್ಕೆ ಪೂರೈಕೆೆ ಮಾಡುವಷ್ಟು ಸಾಕಷ್ಟು ಪ್ರಮಾಣದ ನೀರು ನದಿಯಲ್ಲಿದೆ. ಆದರೆ ವಿದ್ಯುತ್ ಅಭಾವದಿಂದಾಗಿ ಜನರಿಗೆ ಕುಡಿಯಲು ಸರಬರಾಜು ಮಾಡಲಾಗುತ್ತಿಲ್ಲ. ಇನ್ನು ನಗರಕ್ಕೆ 24 ಗಂಟೆಗಳ ಕಾಲ ನಿರಂತರ ನೀರು ಪೂರೈಕೆ ಮಾಡುವ ನಿಟ್ಟಿನಲ್ಲಿ ಕೃಷ್ಣಾ ನದಿ ಬಳಿ ನೂತನ ತಂತ್ರಜ್ಞಾನ ಚಾಕವೆಲ್ ನಿರ್ಮಾಣ ಮಾಡಲಾಗಿದೆ. ಆದರೆ ಇದೀಗ ಪೈಪ್‌ಗಳು ಒಡೆಯುತ್ತಿರುವದರಿಂದ ಅವುಗಳ ಗುಣಮಟ್ಟದ ಬಗ್ಗೆ ಜನರು ಪ್ರಶ್ನೆ ಮಾಡುವಂತಾಗಿದೆ  

ಕಳೆದ ವರ್ಷಗಳ ಗಿಂತ  ಈ ಬಾರಿ ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗಿದೆ. ಎಲ್ಲಾ ಜಲ ಮೂಲಗಳು ತುಂಬಿ ಅಂತರಜಲಮಟ್ಟ ಹೆಚ್ಚಾಗಿತ್ತು. ಆದರೆ ಇದೀಗ ಮಾರ್ಚ್‌ ತಿಂಗಳ ಮುಗಿಯುವ ಮೊದಲು ಪಟ್ಟಣದಲ್ಲಿ ನೀರಿನ ಹಾಹಾಕಾರ ಶುರುವಾಗಿದೆ. ಮಳೆಗಾಲದಲ್ಲಿ ಕೃಷ್ಣಾ ನದಿಗೆ ಪ್ರವಾಹ ಎದುರಾಗಿ ಲಕ್ಷಾಂತರ ಮೌಲ್ಯದ ನೀರು ವ್ಯರ್ಥವಾಗಿ ಹರಿದು ಸಮುದ್ರ ಪಾಲಾಗುತ್ತಿದೆ.  

ಆದರೆ ಇದೀಗ ಕಡು ಬೇಸಿಗೆಯಲ್ಲಿ ಈ ಭಾಗದ ಜನರು ಹನಿ ನೀರಿಗಾಗಿ ಪರದಾಡುವ ಪರಿಸ್ಥಿತಿ ದಯನೀಯ ಪರಸ್ಥಿತಿ ಎದುರಾಗಿದೆ. ಇದೀಗ ಕಲ್ಲೋಳ- ಯಡೂರ, ಮಾಂಜರಿ ಅಂಕಲಿಮಧ್ಯದಲ್ಲಿ ಬಾಂದಾರ ಕಮ್ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಇವುಗಳ ನಿರ್ಮಾಣದಿಂದಾಗಿ ಕೃಷ್ಣ ನದಿಯಲಿ ಚಿಕ್ಕೋಡಿ ಬೇಸಿಗೆ ಕಾಲದಲ್ಲಿ ಬೇಕಾಗುವಷ್ಟು ನೇರ ಲಭ್ಯವಾಗಿಲ್ಲ  ಆದರೆ ಸೇತುವೆಗಳು ವೇಗ ನಿರ್ಮಾಣವಾಗಲಿ ಎನ್ನುವದೇ ಜನತೆ ಒತ್ತಾಯವಾಗಿದೆ. 

ಬೋರವೆಲ್ ಮೊರೆ.. 

ಪಟ್ಟಣದಲ್ಲಿ ನೀರು ಸರಬರಾಜು ಮಾಡುವಲ್ಲಿ ಸಾಕಷ್ಟು ವಿಳಂಬವಾಗುತ್ತಿರುವದರಿಂದ ಇದೀಗ ನಗರದ ಜನತೆ ಬೋರವೆಲ್‌ಗಳ ಮೊರೆ ಬೋರವೆಲ್‌ಗಳ ನೀರು ಲಭ್ಯವಿದ್ದರೆ ಕೆಲವು ಕಡೆ ನೀರು ಸಿಗುತ್ತಿಲ್ಲ. ಇದರಿಂದಾಗಿ ನೀರು ಲಭ್ಯ ಇರುವ ಕಡೆ ಜನರು ನೀರು ಶೇಖರಿಸಿಟ್ಟುಕೊಳ್ಳುವುದೇ ಮುಂದೆಯಾದರೂ ಹೆಸ್ಕಾಂ ಅಧಿಕಾರಿಗಳು ನೀರು ಸರಬರಾಜು ಮಾಡುವ ಕಡೆ ನಿಗದಿತ ಸಮಯದಲ್ಲಿ ವಿದ್ಯುತ್ ಸರಬರಾಜು ಮಾಡಲಿ ಎನ್ನುವದೇ ಜನರ ವತಾಯವಾಗಿದೆ  

ಅಂಕಲಿ ಹಾಗೂ ಕಲ್ಲೋಳಗಳಿಂದ ಚಿಕ್ಕೋಡಿ ನಗರಕ್ಕೆ ನೀರು ಒದಗಿಸಲಾಗುತ್ತಿದೆ. ಅಲ್ಲಿನ ಚಾಕವೆೆಲ್ ಗಳಿಗೆ ಹೆಸ್ಕಾಂ ಅಧಿಕಾರಿಗಳು ಪದೇ ಪದೇ ವಿದ್ಯುತ್ ಕಡಿತ ಮಾಡುತ್ತಿರುವದಂದ ಇದೀಗ ಪಟ್ಟಣಕ್ಕೆ ದಿನಗಳಿಗೊಮ್ಮೆ ನೀರು ಸರಬರಾಜುು ಮಾಡಲಾಗುತ್ತಿದೆ. ಕೃಷ್ಣಾ ನದಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಇದೆ. ಮುಂದಿನ ದಿನಗಳಲ್ಲಿ ಚೌಕವೆಲ್ ಗಳಿಗೆ ಪುರಸಭೆಯಿಂದ ವಿದ್ಯುತ್ ಕಡಿತವಾಗದಂತೆ ಬೇರೆ ಯೋಜನೆ ರೂಪಿಸಲಾಗುವುದು, ಕುಡಿಯುವ ನೀರಿನ ಚಾಕವೆಲ್ ಗಳಿಗೆ ನಿರಂತರ ವಿದ್ಯುತ್ ನೀಡುವಂತೆ ಈಗಾಗಲೇ ಪತ್ರ ಬರೆಯಲಾಗಿದೆ. ಅದಕ್ಕೆ ಹೆಸ್ಕಾಂ ಇಲಾಖೆಯಿಂದ ಇಲ್ಲಿವರಿಗೆ ಉತ್ತರ ಬಂದಿಲ್ಲ. 

ಪಂಚ ನದಿಗಳು ಇದ್ದರು ಕೂಡ ಅನಿಯಮಿತ ವಿದ್ಯುತ್ ಸರಬರಾಜಿನಿಂದಾಗಿ ಚಿಕ್ಕೋಡಿ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡಲು ಸಾಧ್ಯವಾಗುತ್ತಿಲ್ಲ. ಇನ್ನು ಪಟ್ಟಣಕ್ಕೆ 24 ಗಂಟೆಗಳ ಕಾಲ ಕುಡಿಯುವ ನೀರು ಸರಬರಾಜು ಮಾಡಲು ಕೊಟ್ಯಾಂತರ ಹಣ ಖರ್ಚು ಮಾಡಲಾಗಿದೆ. ಆದರೆ ಇದೀಗ 8 ದಿನಕ್ಕೊಮ್ಮೆ ನೀರು ಸರಬರಾಜ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಕುಡಿಯುವ ನೀರಿನ ಯೋಜನೆಗೆ ಪುರಸಭೆ ಅಧಿಕಾರಿಗಳು ಇನ್ನು ಜನರೇಟರ್ ಅಥವಾ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು. 3 ದಿನಕ್ಕೊಮ್ಮೆ ನೀರು ಸರಬರಾಜ ಮಾಡುತ್ತಿದ್ದರು. ಇಲ್ಲಿನ ಜನಪ್ರತಿನಿಧಿಗಳು ಏನು ಮಾಡುತ್ತಿದ್ದಾರೆ. 

ಚಂದ್ರಕಾಂತ ಹುಕ್ಕೇರಿ 

ಚಿಕ್ಕೋಡಿ ನಿವಾಸಿ