ಲೋಕದರ್ಶನ ವರದಿ
ಗಂಗಾವತಿ 14: ಹೈದ್ರಾಬಾದ ಕನರ್ಾಟಕ ಪ್ರದೇಶ ವ್ಯಾಪ್ತಿಯ ನಗರ, ಸ್ಥಳೀಯ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಹಂಗಾಮಿ ನೌಕರರ ಸೇವ ಸಕ್ರಮಾತಿಗೆ ಮತ್ತು ಸ್ಥಗಿತಗೊಂಡಿರುವ ವೇತನ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಹೈದ್ರಾಬಾದ ಕನರ್ಾಟಕ ಪ್ರದೇಶ ಪೌರ ಸೇವಾ ನೌಕರರ ಸಂಘದ ಸದಸ್ಯರು ಶುಕ್ರವಾರ ನಗರಸಭೆ ಆವರಣದಲ್ಲಿ ಧರಣಿ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ತಾಲೂಕು ಘಟಕದ ಅಧ್ಯಕ್ಷ ರಮೇಶ, ಕೊಪ್ಪಳ ಜಿಲ್ಲೆಯಲ್ಲಿ ಕಳೆದ 30 ವರ್ಷಗಳಿಂದ ಸ್ಥಳೀಯ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪೌರ ಸೇವಾ ನೌಕರರನ್ನು ಖಾಯಂಗೊಳಿಸಬೇಕು ಮತ್ತು ಸ್ಥಗಿತಗೊಂಡಿರುವ ವೇತನವನ್ನು ಬಿಡುಗಡೆ ಮಾಡಬೇಕು ಎಂದು ಹೇಳಿದರು.
ನೌಕರರ ಸಕ್ರಮಾತಿಗಾಗಿ ಶಾಸನವನ್ನು ರೂಪಿಸಬೇಕು. ಮೇಲ್ದಜರ್ೆಗೇರಿಸಿರುವ ಸ್ಥಳೀಯ ಸಂಸ್ಥೆಗಳ ಗ್ರಾಮ ಪಂಚಾಯತಿಯ ನೌಕರರನ್ನು ಪೌರಾಡಳಿತ ನೌಕರರು ಎಂದು ಪರಿಗಣಿಸದೆ ನೌಕರರಿಗೆ ಅನ್ಯಾಯ ಮಾಡಿದ್ದಾರೆ ಎಂದು ಅವರು ತಿಳಿಸಿದರು. ನವಂಬರ್ 2017 ರಿಂದ ಹಂಗಾಮಿ ನೌಕರರ ವೇತನ ಸ್ಥಗಿತಗೊಳಿಸಿರುವ ಕಾರಣದಿಂದ ಅವರ ಜೀವನ ನಿರ್ವಹಣೆಗೆ ತೊಂದರೆ ಉಂಟಾಗಿದೆ ಎಂದು ಹೇಳಿದರು. ಗುರುರಾಜ ದಾಸನಾಳ, ಸೈಯದ್ ಅಲಿ, ರಾಮಣ್ಣ, ಶಿವಪ್ಪ, ಕನಕರಾಯ, ಸಣ್ಣ ಹುಲಿಗೆಮ್ಮ, ಸುಶೀಲಮ್ಮ, ಗಾಳೆಮ್ಮ, ಬಸಮ್ಮ, ನೀಲಮ್ಮ ಧರಣಿಯಲ್ಲಿ ಪಾಲ್ಗೊಂಡಿದ್ದರು.