ಮೃತ ಮೇಘರಾಜ್ ಕುಟುಂಬಕ್ಕೆ ಪರಿಹಾರ ನೀಡಲು ಆಗ್ರಹ
ರಾಣೇಬೆನ್ನೂರು 24 : ಎ 23 ಕೆರೆಯಲ್ಲಿ ಕುರಿ ಮೈ ತೊಳೆಯಲು ಹೋಗಿ ಕಾಲು ಜಾರಿ ಕೆರೆಗೆ ಬಿದ್ದ 16 ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಹುಲಿಕಟ್ಟಿ ಗ್ರಾಮದಲ್ಲಿ ಇತ್ತಿಚೆಗೆ ನಡೆದಿದೆ.ರಾಣೇಬೆನ್ನೂರು: ಎ 20 ತಾಲೂಕಿನ ಮೆಡ್ಲೇರಿ ಗ್ರಾಮದ ದಿಳ್ಳೆಪ್ಪ ಕುದರಿಹಾಳ ಸಂಚಾರಿ ಕುರಿಗಾರರಾಗಿದ್ದರಿಂದ ಹರಪನಹಳ್ಳಿ ತಾಲೂಕಿನ ಹುಲಿಕಟ್ಟಿ ಗ್ರಾಮದಲ್ಲಿ ರೈತರ ಜಮೀನಿಗೆ ಕುರಿ ಮೇಯಿಸಲು ಹೋದಾಗ ಅವರ ಸಂಬಂಧಿಕ ಮೇಘರಾಜ್ ಸಿದ್ದಪ್ಪ ಕೊನಬೇವು (16) ಸಂಚಾರಿ ಕುರಿಗಾರರ ಜೊತೆಗೆ ಹೋಗಿದ್ದರು. ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಕುರಿಮೇಯಿಸಿ ಹುಲಿಕಟ್ಟಿ ಗ್ರಾಮದ ಕೆರೆಯಲ್ಲಿ ನೀರು ಕುಡಿಸಲು ಹಾಗೂ ಕುರಿ ಮೈ ತೊಳೆಯಲು ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟಿದ್ದಾನೆ. ಎಂದು ಪ್ರಕರಣ ದಾಖಲಿಸಿಕೊಂಡಿರುವ ಆರಕ್ಷಕರು ತಿಳಿಸಿದ್ದಾರೆ. ಘಟನೆಯಿಂದಾಗಿ ಮೇಘರಾಜ್ ಸಿದ್ದಪ್ಪ ಕೊನಬೇವು ಮೃತ ಬಾಲಕ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಹರಪನಹಳ್ಳಿ ಗ್ರಾಮೀಣ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸಿದ್ದು, ಹಾವೇರಿ ಜಿಲ್ಲೆಯ ಕಾಗಿನೆಲೆ ಕನಕಗುರು ಪೀಠಾಧ್ಯಕ್ಷರಾದ ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಜಿಗಳು, ಹರಪನಹಳ್ಳಿ ಶಾಸಕ ಶ್ರೀಮತಿ ಲತಾ ಮಲ್ಲಿಕಾರ್ಜುನ್, ತಾಲೂಕಿನ ಕುರಬ ಸಮಾಜದ ಅಧ್ಯಕ್ಷ ಗೋಣಿ ಬಸಪ್ಪ ಸ್ಥಳಕ್ಕೆ ಭೇಟಿ ನೀಡಿ ಮೃತ ಕುಟುಂಬಕ್ಕೆ ಸಾಂತ್ವನ ಹೇಳಿದರು.ಈ ಕುರಿತು ಹರಪನಹಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ರಾಣೆಬೆನ್ನೂರು ತಾಲೂಕಿನ ಮೆಡ್ಲೇರಿ ಗ್ರಾಮದ ಸಂಚಾರಿ ಕುರಿಗಾರರು ಮೃತ ಕುಟುಂಬಕ್ಕೆ ಪರಿಹಾರ ನೀಡಲು ಆಗ್ರಹಿಸಿದರು.ಇದೆ ವೇಳೆ ವೈ. ಕೆ.ಬಿ. ದುರಗಪ್ಪ, ಹೆಚ್.ಬಿ ಪರಶುರಾಮಪ್ಪ, ಮೆಡ್ಲೇರಿ ಹುಲಿಯಪ್ಪ ಪೂಜಾರ, ಹುಲಿಕಟ್ಟಿ ರಾಮಪ್ಪ ಪೂಜಾರ್, ಚಂದ್ರ್ಪ ಹುಲಿಕಟ್ಟಿ, ಎಂ.ವಿ ಆಂಜಿನೆಪ್ಪ, ದೀಳ್ಳೆಪ್ಪ ಅಣ್ಣೆರ, ನಾಗಪ್ಪ ಹೀಲದಹಳ್ಳಿ, ಮೈಲಪ್ಪ ಪಾಶಿಗಾರ್ ಇದ್ದರು.