ಮಹಾಲಿಂಗಪುರ 29: ಕೆಂಗೇರಿಮಡ್ಡಿ ಪುರಸಭೆ ಖಾಲಿ ಜಾಗೆಯನ್ನು ಪಟ್ಟಭದ್ರ ಹಿತಾಸಕ್ತಿಗಳು ಸಾರ್ವಜನಿಕರಿಂದ ಹಣ ಪಡೆದು ಅಕ್ರಮವಾಗಿ ನಿವೇಶನಗಳನ್ನು ಹಂಚುತ್ತಿದ್ದಾರೆ ಇದನ್ನು ತಡೆದು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳಿಗೆ ಪುರಸಭೆ ಸದಸ್ಯರಿಂದ ಒತ್ತಾಯ.
ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ, ಇದೂ ನಿಜವೂ ಕೂಡಾ. ಈ ಅಕ್ರಮ ಹಂಚಿಕೆ ತಡೆದು ಸೂಕ್ತ ಕ್ರಮ ಕೈಗೊಳ್ಳುವಂತೆ ಮಹಾಲಿಂಗಪುರ ಪುರಸಭೆ ಸದಸ್ಯರು ಶುಕ್ರವಾರ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಮಹಾಲಿಂಗಪುರ: ಪಟ್ಟಣದ ಕೆಂಗೇರಿಮಡ್ಡಿ ಬಡಾವಣೆಯ ಸಾಯಿ ಮಂದಿರ ಹಿಂಭಾಗ ಪುರಸಭೆ ಖಾಲಿ ಬಿದ್ದಿರುವ ಜಾಗೆಯನ್ನು ಕೆಲ ಪಟ್ಟಭದ್ರ ಹಿತಾಸಕ್ತಿಗಳು ಏನೂ ಅರಿಯದ ಬಡ ಜನತೆಯಿಂದ ಲಕ್ಷಾಂತರ ಹಣ ಪಡೆದು ಅಕ್ರಮವಾಗಿ ನಿವೇಶನಗಳನ್ನು ಹಂಚುತ್ತಿರುವುದು ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ, ಇದೂ ನಿಜವೂ ಕೂಡಾ. ಈ ಅಕ್ರಮ ಹಂಚಿಕೆ ತಡೆದು ಸೂಕ್ತ ಕ್ರಮ ಕೈಗೊಳ್ಳುವಂತೆ ಮಹಾಲಿಂಗಪುರ ಪುರಸಭೆ ಸದಸ್ಯರು ಶುಕ್ರವಾರ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಮಹಾಲಿಂಗಪುರ ಪುರಸಭೆಗೆ ಸಮ್ಮಂಧಿಸಿದ ಸರ್ವೇ ನಂಬರ್ 29/1 ರಲ್ಲಿ 3 ಎಕರೆ 26 ಗುಂಟೆ ಜಾಗೆ ಇದೆ.ಈ ಜಾಗೆಯನ್ನು ಯಾವುದೇ ದಾಖಲಾತಿಗಳನ್ನು ನೀಡದೆ ಹಣ ಪಡೆದು ನಿವೇಶನಗಳನ್ನು ಮಾಡಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆ ಎಂದು ರಾಜಕೀಯ ಮುಖಂಡರು, ಕೆಲವು ಪುರಸಭೆ ಸದಸ್ಯರು ಅಲ್ಲದೆ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಮನವಿ ಪತ್ರದಲ್ಲಿ ಪುರಸಭೆ ಸದಸ್ಯರಾದ ಬಸವರಾಜ ಹಿಟ್ಟಿನಮಠ, ಪ್ರಹ್ಲಾದ್ ಸಣ್ಣಕ್ಕಿ, ಬಸವರಾಜ ಚಮಕೇರಿ, ರವಿ ಜವಳಗಿ, ಶ್ರೀಮತಿ ಲಕ್ಷ್ಮೀ ಮಹಾಲಿಂಗಪ್ಪ ಮುದ್ದಾಪೂರ, ಶ್ರೀಮತಿ ಸರಸ್ವತಿ ಚೆನ್ನಪ್ಪ. ರಾಮೋಜಿ ಗಂಭೀರ ಆರೋಪ ಮಾಡಿದ್ದಾರೆ.
ಈಗಾಗಲೇ ಪೂರ್ವ ಭಾಗದಲ್ಲಿ ಪುರಸಭೆ ಸರ್ಕಾರಿ ಮನೆಗಳು, ಪಶ್ಚಿಮ ಭಾಗದಲ್ಲಿ ಸ್ವಂತ ಮಾಲ್ಕಿ ಖಾಲಿ ನಿವೇಶನಗಳು, ಮನೆಗಳು ಇರುವುದರಿಂದ ಈ ಪುರಸಭೆ ಖಾಲಿ ಜಾಗೆಗೆ ಎಲ್ಲಿಲ್ಲದ ಬೇಡಿಕೆ ಹೆಚ್ಚಿದೆ. ಕಾರಣ ತತ್ ಕ್ಷಣ ಈ ಜಾಗೆಗೆ ಗಡಿ ಗುರುತಿಸುವ ಕಾರ್ಯ ಮಾಡಿ ಯೋಗ್ಯ ನಿವೇಶನ ರಹಿತರಿಗೆ ಜಾಗೆಗಳನ್ನು ನೀಡಬೇಕೆಂದು ಪುರಸಭೆ ಸದಸ್ಯರು ಈ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.