ಸ್ಪರ್ಧೆಗಳಲ್ಲಿ ಸೋಲು ಗೆಲುವು ಮುಖ್ಯವಲ್ಲ: ಶಾಸಕ ಮುನವಳ್ಳಿ

ಲೋಕದರ್ಶನ ವರದಿ

ಗಂಗಾವತಿ 03: ಸ್ಪರ್ಧೆ  ಮತ್ತು  ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವಿಕೆ ಮುಖ್ಯವಾಗಿರುತ್ತದೆ, ಸೋಲು ಗೆಲುವು ಮುಖ್ಯವಲ್ಲ ಎಂದು ಶಾಸಕ ಪರಣ್ಣ ಮುನವಳ್ಳಿ ತಿಳಿಸಿದರು. ಸಂಕಲ್ಪ ಸ್ವತಂತ್ರ ಪದವಿಪೂರ್ವ ಕಾಲೇಜನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪದವಿಪೂರ್ವ ಕಾಲೇಜಗಳ ತಾಲೂಕುಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಂತಹ ಕ್ರೀಡಾಕೂಟಗಳು ವಿದ್ಯಾರ್ಥಿಗಳಲ್ಲಿನ ಪ್ರತಿಭೆ ಮತ್ತು ಸಾಮಾಥ್ರ್ಯವನ್ನು ಬೆಳೆಕಿಗೆ ಬರಲು ಸಾಧ್ಯವಾಗುತ್ತದೆ. ಆಟಗಳಲ್ಲಿ ಗೆಲ್ಲಲೇ ಬೇಕು ಎಂಬುದನ್ನು ಪ್ರತಿಯೊಬ್ಬ ಕ್ರೀಡಾಪಟು ಗುರಿ ಹೊಂದಿರುತ್ತಾನೆ. ಅವರ ಸಾಮಾಥ್ರ್ಯದ ಮೇಲೆ ಅವರ ಗೆಲುವು ನಿರ್ಧಾರ ವಾಗುತ್ತದೆ. ಸೋತ ತಕ್ಷಣ ಹುಮ್ಮಸ್ಸು ಅಡಗಬಾರದು. ಸೋಲು ಗೆಲುವಿನ ಮೆಟ್ಟಿಲು ಎಂಬುದನ್ನು ಅರಿತು ಮುಂದಿನ ಸ್ಪರ್ಧೆಗೆ ಅಣಿಯಾಗಬೇಕು ಎಂದು ತಿಳಿಸಿದರು. ನಗರಸಭೆ ಸದಸ್ಯೆ ಸುಚಿತ್ರಾ ಶಿರಿಗೇರಿ, ತಾಪಂ ಅಧ್ಯಕ್ಷ ಮಲ್ಲಿಕಾರ್ಜುನಗೌಡ, ಪತ್ರಕರ್ತ ಶರಣಯ್ಯಸ್ವಾಮಿ ಕರಡಿಮಠ ಪಾಲ್ಗೊಂಡಿದ್ದರು.